ವಿರಾಜಪೇಟೆ, ಡಿ.02: ಮಳೆ ಮತ್ತು ಶೀತ ಗಾಳಿಯ ಪ್ರಭಾವ ಹೆಚ್ಚಾಗಿರುವ ಕಾರಣ ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷೊಸಲಾಗಿದ್ದು, ನಾಳೆ(02/12/24)ನೇ ಮಂಗಳವಾರ ಒಂದು ದಿನ ಅನ್ವಯ ಆಗುವಂತೆ, ಕೊಡಗಿನ ಎಲ್ಲಾ ಅಂಗನವಾಡಿ, ಶಾಲೆಗಳು, ಪದವಿಪೂರ್ವ ಕಾಲೆಜುಗಳಿಗೆ ಅನ್ವಯ ಆಗುವಂತೆ ರಜೆ ಘೋಷಿಸಿ ಪ್ರಭಾರ ಜಿಲ್ಲಾಧಿಕಾರಿ ಆನಂದ್ ಪ್ರಕಾಶ್ ಮೀನ ಅವರು ಆದೇಶ ಹೊರಡಿಸಿದ್ದಾರೆ.
ಫಂಗಲ್ ಚಂಡಮಾರುತದ ಪ್ರಭಾವದಿಂದ ಕೊಡಗಿನಲ್ಲಿ ಹೆಚ್ಚಾಗಿರುವ ಮಳೆ ಮತ್ತು ಶೀತ ಗಾಳಿಯಿಂದ ಶಾಲಾ ಮಕ್ಕಳಲ್ಲಿ ಜ್ವರ ಭಾದೆಯ ಬಗ್ಗೆ ಆತಂಕ ವ್ಯಕ್ತಪಡಿಸಿ, ಸುದ್ದಿ ಬಿತ್ತರಿಸಿದ್ದ ನಡುಬಾಡೆ ನ್ಯೂಸ್. ನಡುಬಾಡೆ ನ್ಯೂಸ್ ವರದಿ ಬೆನ್ನಲ್ಲೆ ತಕ್ಷಣ ಜಿಲ್ಲಾಡಳಿತ ಸ್ಪಂದಿಸಿದೆ.
ಸಮಯೋಚಿತ ಆದೇಶ ಪ್ರಕಟಿಸಿದ ಜಿಲ್ಲಾಧಿಕಾರಿಗಳಿಗೆ ಸಮಸ್ಥ, ಪೋಷಕರು, ವಿಧ್ಯಾರ್ಥಿಗಳ ಪರವಾಗಿ, ನಡುಬಾಡೆ ನ್ಯೂಸ್ ಧನ್ಯವಾದ ಸಮರ್ಪಿಸುತ್ತದೆ.