https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ತಂದೆ ಇಲ್ಲದ ಮಕ್ಕಳಿಗೆ ವಾರ್ಷಿಕ 48 ಸಾಹಿರ ಸಹಾಯಧನ ಇರೋದು ನಿಜ. ಆದರೆ ಹಲವು ಮಾನದಂಡಗಳಿವೆ. ಅನಾವಶ್ಯ ಗೊಂದಲ ಸೃಷ್ಟಿಸದೆ, ಆಯಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿ…

ತಂದೆ ಇಲ್ಲದ ಮಕ್ಕಳಿಗೆ ವಾರ್ಷಿಕ 48 ಸಾಹಿರ ಸಹಾಯಧನ ಇರೋದು ನಿಜ. ಆದರೆ ಹಲವು ಮಾನದಂಡಗಳಿವೆ. ಅನಾವಶ್ಯ ಗೊಂದಲ ಸೃಷ್ಟಿಸದೆ, ಆಯಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿ…

Uncategorized
02/12/202402/12/2024nadubadenews@gmail.comLeave a Comment on ತಂದೆ ಇಲ್ಲದ ಮಕ್ಕಳಿಗೆ ವಾರ್ಷಿಕ 48 ಸಾಹಿರ ಸಹಾಯಧನ ಇರೋದು ನಿಜ. ಆದರೆ ಹಲವು ಮಾನದಂಡಗಳಿವೆ. ಅನಾವಶ್ಯ ಗೊಂದಲ ಸೃಷ್ಟಿಸದೆ, ಆಯಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿ…
Spread the love
ತಂದೆ ಇಲ್ಲದ ಮಕ್ಕಳಿಗೆ ವಾರ್ಷಿಕ 48 ಸಾಹಿರ ಸಹಾಯಧನ ಇರೋದು ನಿಜ. ಆದರೆ ಹಲವು ಮಾನದಂಡಗಳಿವೆ. ಅನಾವಶ್ಯ ಗೊಂದಲ ಸೃಷ್ಟಿಸದೆ, ಆಯಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿ…

ಚಾಮರಾಜನಗರ, ಡಿ.02: ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 48 ಸಾವಿರ ರೂ. ಸ್ಕಾಲರ್ ಶಿಪ್ ಸೌಲಭ್ಯವಿದ್ದು, ಜನ ಸಾಮಾನ್ಯರಿಗೆ ಈ ವಿಚಾರ ತಿಳಿದೇ ಇಲ್ಲ. ಆದುದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಕ್ಕಳು ಇದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ ಎಂಬ ಸಂದೇಶ ವ್ಯಾಟ್ಸಪ್‍ನಲ್ಲಿ ಹರಿದಾಡುತ್ತಿದ್ದು ಜನರನ್ನು ಗೊಂದಲಕ್ಕೀಡು ಮಾಡಿದೆ.

ಶಿಲ್ಪಾನಾಗ್‌, ಚಾಮರಾಜನಗರ ಜಿಲ್ಲಾಧಿಕಾರಿ

ಈ ವಿಚಾರದ ಕುರಿತು ಚಾಮರಾಜನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರಾದ ಶಿಲ್ಪಾ ನಾಗ್ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ. ಈ ಸ್ಕಾಲರ್ಶಿಪ್ ಸೌಲಭ್ಯ ಇರುವುದು ಹೌದು, ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಮಾನದಂಡಗಳಿವೆ ಎಂದು ತಿಳಿಸಿದ್ದಾರೆ.

ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 48 ಸಾವಿರ ರೂ. ಸ್ಕಾಲರ್ ಶಿಪ್ ಸೌಲಭ್ಯ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಮಾನದಂಡಗಳಿದ್ದು, ಈ ಸಂಬಂಧ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದೆಂದು, ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ. ಇದು ಪ್ರಾಯೋಜಕತ್ವ ಕಾರ್ಯಕ್ರಮವಾಗಿದ್ದು, ವಿವಿಧ ಕಾರಣಗಳಿಂದ ಪೊಷಕರಿಂದ ಬೇರ್ಪಟ್ಟು ನಿರ್ಗತಿಕರಾಗುವುದು, ಸಂಕಷ್ಟಕ್ಕೀಡಾಗುವುದು, ಓಡಿಹೋಗುವುದು, ಬಲವಂತದ ಬಾಲ್ಯವಿವಾಹ, ಬಾಲಕಾರ್ಮಿಕತೆ ಹಾಗೂ ಇತರೆ ಶೋಷಣೆಗೆ ಒಳಗಾಗುವುದನ್ನು ತಪ್ಪಿಸಿ ಮಕ್ಕಳು ಕೌಟುಂಬಿಕ ವ್ಯವಸ್ಥೆಯಲ್ಲಿಯೇ ಬೆಳೆಯಲು ನೆರವಾಗುವಂತೆ ತಾತ್ಕಾಲಿಕ ಅವಧಿಗೆ ಆರ್ಥಿಕ ಸಹಾಯ ನೀಡುವ ಯೋಜನೆಯಾಗಿದೆ. ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ, 2015ರ ಕಲಂ 2(58)ರ ಪ್ರಕಾರ, ಪ್ರಾಯೋಜಕತ್ವವನ್ನು ಕುಟುಂಬಗಳಿಗೆ, ಮಗುವಿನ ವೈದ್ಯಕೀಯ, ಶೈಕ್ಷಣಿಕ ಹಾಗೂ ಅಭಿವೃದ್ಧಿಯ ಅಗತ್ಯಗಳನ್ನು ಪೂರೈಸಲು ಅಗತ್ಯವಿರುವ ಪೂರಕ ಬೆಂಬಲ, ಹಣಕಾಸು ಅಥವಾ ಇತರೆ ಸಹಕಾರ ಎಂದು ವ್ಯಾಖ್ಯಾನಿಸಲಾಗಿದೆ. ಪ್ರಾಯೋಜಕತ್ವ ಕಾರ್ಯಕ್ರಮ ಮಗುವಿನ ಸಮರ್ಪಕ ಆರೈಕೆಗಾಗಿ ಪೋಷಣೆ ಹಾಗೂ ರಕ್ಷಣೆಯ ಅಗತ್ಯವಿರುವಂತೆ ಕುಟುಂಬಗಳು ಅಥವಾ ವಿಸ್ತೃತ ಕುಟುಂಬಗಳಿಗೆ ಪೂರಕವಾಗಿರುತ್ತದೆ. ಸಮುದಾಯದಲ್ಲಿ ಸ್ಥಳಾಂತರವಿಲ್ಲದೆ ತಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿಸರದಲ್ಲಿಯೇ ಮಕ್ಕಳು ಬೆಳೆಯಲು ಅವಕಾಶ ಪಡೆಯುವುದನ್ನು ಖಾತರಿಪಡಿಸಲು ಇದೊಂದು ಷರತ್ತುಬದ್ಧ ಸಹಾಯವಾಗಿದೆ.

ಈ ಯೋಜನೆಯ ಫಲಾನುಭವಿಯಾಗಲು ಹಲವು ಮಾನದಂಡಗಳಿದ್ದು ಈ ಪ್ರಕಾರ ಮಕ್ಕಳು ಅನಾಥವಾಗಿದ್ದರೆ ಹಾಗೂ ವಿಸ್ತೃತ ಕುಟುಂಬದೊಡನೆ ಜೀವಿಸುತ್ತಿದ್ದರೆ, ಪೋಷಕರು ಗಂಭೀರ ಸ್ವರೂಪದ ಕಾಯಿಲೆಯ ಸಂತ್ರಸ್ತರಾಗಿದ್ದರೆ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಬಾಲಸ್ವರಾಜ್ ಪೋರ್ಟಲ್‍ನಲ್ಲಿ ನೋಂದಾಯಿಸಲಾದ ಮಕ್ಕಳು, ತಾಯಿ ವಿಧವೆಯಾಗಿದ್ದು, ಮಕ್ಕಳನ್ನು ನೋಡಿಕೊಳ್ಳಲು ಆರ್ಥಿಕ ಹಾಗೂ ದೈಹಿಕವಾಗಿ ಅಸಮರ್ಥರಾಗಿರುವ, ಮಕ್ಕಳ ನ್ಯಾಯಾಲಯ, ಮಕ್ಕಳ ಕಲ್ಯಾಣ ಸಮಿತಿಯಿಂದ ಬಾಲನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ), ಕಾಯ್ದೆ-2015 ಸೆಕ್ಷನ್ 14ರಂತೆ ಪೋಷಣೆ ಮತ್ತು ರಕ್ಷಣೆ ಅಗತ್ಯವಿರುವ ಮಗುವೆಂದು ಘೋಷಿಸಲ್ಪಟ್ಟ ಮಕ್ಕಳು ಮತ್ತು ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಪಾಲನಾ ಸಂಸ್ಥೆಯ ಮಕ್ಕಳು ಈ ಯೋಜನೆಗೆ ಅರ್ಹರಾಗಿರುತ್ತಾರೆ.

ಆದ್ದರಿಂದ ಸಾರ್ವಜನಿಕರು ತಪ್ಪು ಮಾಹಿತಿಯನ್ನು ಹರಡದೇ, ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಬಹುದು. ಎಂದು ಹೇಳಿದ್ದಾರೆ.

Post navigation

ಜನ ಜೀವನಕ್ಕೆ ಭಂಗ ತಂದ ಪೆಂಗಲ್‌ ಚಂಡಮಾರುತ. ಇನ್ನೂ ಎರಡು ಮೂರು ದಿನ ಮುಂದುವರೆಯಲಿರುವ ಮಳೆ. ರೈತರ ನೆರವಿಗೆ ಸರ್ಕಾರ ಬರಲಿ…
ಕೊಡಗಿನಲ್ಲಿ ರೆಡ್ ಅಲರ್ಟ್‌, ಪರಿಸ್ಥಿತಿ ಅವಲೋಕಿಸಿ ಶಾಲೆಗಳ ರಜೆ ತೀರ್ಮಾನ ಎಂದ ಇಲಾಖೆ, ಶಾಲೆಗಳಿಗೆ ಗೊಂದಲ, ಪೋಷಕರಿಗೆ ಆತಂಕ.

Related Posts

ಹೊರಗಿನವರು ಕೊಡಗಿನ ಜಾಗ ಖರೀದಿಸಿದರೆ ಕಾನೂನು ಕ್ರಮ ಎದುರಿಸುವಿರಿ: ಪರಿಸರವಾದಿ ಕರ್ನಲ್‌ ಮುತ್ತಣ್ಣ, ಸೈನ್‌ಬೋರ್ಡ್‌ ಅಭಿಯಾನ

ಹೊರಗಿನವರು ಕೊಡಗಿನ ಜಾಗ ಖರೀದಿಸಿದರೆ ಕಾನೂನು ಕ್ರಮ ಎದುರಿಸುವಿರಿ: ಪರಿಸರವಾದಿ ಕರ್ನಲ್‌ ಮುತ್ತಣ್ಣ, ಸೈನ್‌ಬೋರ್ಡ್‌ ಅಭಿಯಾನ

22/12/202422/12/2024nadubadenews@gmail.com
ಶಾಸಕರ  ಮಾರ್ಗದರ್ಶನದಲ್ಲಿ ನಿಷೇದಿತ ತಿನಿಸುಗಳ ವಿರುದ್ದ,  ಸಾಮೂಹಿಕ ಸಮರ ಸಾರಿದ ಅಧಿಕಾರಿಗಳು.  ತಯಾರಕ ಕಂಪನಿಗಳನ್ನು ಪತ್ತೆ ಮಾಡುವುದೇ ಸವಾಲು. ಕೊಡಗಿನ ಮಾರಾಟಗಾರರ ಮೇಲೆ, ಕಾನೂನು ಅಸ್ತ್ರ…

ಶಾಸಕರ  ಮಾರ್ಗದರ್ಶನದಲ್ಲಿ ನಿಷೇದಿತ ತಿನಿಸುಗಳ ವಿರುದ್ದ,  ಸಾಮೂಹಿಕ ಸಮರ ಸಾರಿದ ಅಧಿಕಾರಿಗಳು.  ತಯಾರಕ ಕಂಪನಿಗಳನ್ನು ಪತ್ತೆ ಮಾಡುವುದೇ ಸವಾಲು. ಕೊಡಗಿನ ಮಾರಾಟಗಾರರ ಮೇಲೆ, ಕಾನೂನು ಅಸ್ತ್ರ…

09/11/202409/11/2024nadubadenews@gmail.com
ರಾಷ್ಟ್ರ ಮಟ್ಟ ಹೈಲೀ ಕಮಾಂಡೇಬಲ್‌ ಬಿರ್‌ದ್‌ ಪಡ್ಂದ ಚಿತ್ರಕುರಿಕಾರ ಐಮಂಡ ರೂಪೇಶ್‌ ನಾಣಯ್ಯ

ರಾಷ್ಟ್ರ ಮಟ್ಟ ಹೈಲೀ ಕಮಾಂಡೇಬಲ್‌ ಬಿರ್‌ದ್‌ ಪಡ್ಂದ ಚಿತ್ರಕುರಿಕಾರ ಐಮಂಡ ರೂಪೇಶ್‌ ನಾಣಯ್ಯ

26/09/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version