ವಿರಾಜಪೇಟೆ, ಡಿ.02: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ಫೆಂಗಲ್ ಚಂಡಮಾರುತ, ತಮಿಳುನಾಡಿನಲ್ಲಿ ಈಗಾಗಲೇ ಆವಾಂತರ ಸೃಷ್ಟಿಸಿದ್ದು, ಕರ್ನಾಟಕದಲ್ಲೂ ಅಕಾಲಿಕ ಮಳೆಯಾಗುತ್ತಿದೆ.
ಕೊಡಗು ಸೇರಿದಂತೆ, ಕರಾವಳಿ, ಮತ್ತು ಮಲೆನಾಡು, ದಕ್ಷೀಣ ಮತ್ತು ಉತ್ತರ ಒಳನಾಡು ಜಿಲ್ಲೆಳಲ್ಲಿ ಬಾರೀ ಮಳೆಯಾಗುತ್ತಿದ್ದು, ಹಲೆವೆಡೆ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.
ಈ ಫೆಂಗಲ್ ಅಬ್ಬರವು ಇನ್ನೂ ಎರಡು ಮೂರು ದಿನಗಳ ಕಾಲ ಮುಂದುವರೆಯಲಿದ್ದು, ರಾಜ್ಯದ್ಯಾಂತ ಹೈ ಅಲರ್ಟ್ ಘೋಷಸಿಸಲಾಗಿದೆ ಎಂದು ಹಮಾನ ಇಲಾಕೆ ಹೇಳಿದೆ. ತೀವ್ರ ಶೀತಗಾಳಿ ಮತ್ತು ಮಳೆಯಿಂದ ಕೂಡಿರುವ ವಾತಾವರಣವು ಜನಜೀವನದ ಮೇಲೆ ನೇರ ಪರಿಣಾಮ ಬೀರುತಿದ್ದು, ತೀವೃ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಜೊತೆಗೆ ರೈತರ ಬಹುಪಾಲು ಬೆಳೆಗಳು ಕಟಾವಿನ ಹಂತಕ್ಕೆ ಬರುತಿದ್ದು, ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗಬಹುದು ಎಂದ ಆತಂಕ ರೈತಾಪಿ ಶ್ರಮ ಜೀವಿಗಳ ಜಂಗಾಬಲವನ್ನೇ ಉಡುಗಿಸಿ ಹಾಕಿದೆ.
ಜನಜೀವನವನ್ನೇ ಅಸ್ತವ್ಯಸ್ತ ಮಾಡಿರುವ ಈ ಫೇಂಗಲ್ ಚಂಡಮಾರುತದ ಪರಿಣಾಮವನ್ನು ಎದುರಿಸಲು ಸರ್ಕಾರ ಸೂಕ್ತ ಪರಿಹಾರ ಯೋಜನೆ ರೂಪಿಸಬೇಕಿದ್ದು, ರೈತರ ಭತ್ತ, ಕಾಫಿ, ಕಾಳುಮೆಣಸು, ಅಡಿಕೆ ಬಾಳೆ, ತರಕಾರಿ ಬೆಳೆಗಳಿಗೆ ಸಮರ್ಥ ಪರಿಹಾರ ಘೋಷಿಸಿಸಿ, ಆತ್ಮಬಲ ತುಂಬಬೇಕಿದೆ.