ವಿರಾಜಪೇಟೆ, ನ.30: ಕಾವೇರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆ ಯ 2024-2025ನೇ ಸಾಲಿನ ಎನ್.ಎಸ್.ಎಸ್. ಘಟಕದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಸಮಾರಂಭವು ದಿನಾಂಕ 28.11.2024ರಂದು ಅಮ್ಮತಿ, ಒಂಟಿಯಂಗಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಘಡೆಯಿತು.
ದಿನಾಂಕ 28.11.2024 ರಿಂದ 04.12.2024 ರವರೆಗೆ ನಡೆಯುವ ಶಿಬಿರದ ಉದ್ಘಾಟಿಸಿ ಮಾತನಾಡಿದ, ಕರ್ನಲ್ ಕಂಡ್ರತಂಡ ಸಿ.ಸುಬ್ಬಯ್ಯನವರು ಅವರು,
ಸಮಾಜ ಸೇವೆ ಬದುಕಿನ ಭಾಗವಾಗಬೇಕು, ಸೇವೆಯಲ್ಲಿ ಪ್ರತಿಯೊಬ್ಬರ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಮುಖ್ಯಅಥಿತಿಗಳಾಗಿ ಶ್ರೀಮತಿ ಗ್ರೀಷ್ಮಾ ರಂಜು, ಶ್ರೀಮತಿ ಮಿನ್ನಮ್ಮ, ಶ್ರೀ ಮಚ್ಚಾರಂಡ ಮಣಿ ಕಾರ್ಯಪ್ಪ , ಶ್ರೀಮತಿ ಮಚ್ಚಾರಂಡ ನಳಿನಿ ಬೊಳ್ಳಪ್ಪ, ಶ್ರೀ ಬೇರೆರ ರಂಜಿ, ಶ್ರೀ ಕೆ ಎಸ್ ಗೋಪಾಲಕೃಷ್ಣ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಶ್ರೀ. ಎನ್. ಎಮ್. ನಾಣಯ್ಯ ಅವರು ಅಧ್ಯಯಕ್ಷತೆ ವಹಿಸಿದ್ದರು. ಸ್ವಯಂಸೇವಕರಿಂದ ಪ್ರರ್ಥನೆ ನೆರವೇರಿಸಿದರೆ
ಕಾರ್ಯಕ್ರಮದ ನಿರೂಪಣೆಯನ್ನು ಹರ್ಷ ಪಿ ಅವರು ಮಾಡಿ, ಸ್ವಯಂಸೇವಕಿ ವಿನಿಶಾ ಲೊಬೊ ಸ್ವಾಗತ ಬಾಷಣ ನೆರವೇರಿಸಿ, ಸ್ವಯಂ ಸೇವಕಿ ವಿದ್ಯಾ ವಂದನಾರ್ಪಣೆ ಮಾಡಿದರು. ಎನ್ ಎಸ್ ಎಸ್ ಅಧಿಕಾರಿ ಪಮಿತ.ಬಿ ಮತ್ತು ಕಾಲೇಜಿನ ಉಪನ್ಯಾಸಕರಾದ ಡಯಾನಾ ಸೋಮಯ್ಯ , ಎಂ ಬಿ ದೇಚ್ಚಮ್ಮ ಮತ್ತು ದೀಕ್ಷಿತ್ ಅಕ್ಕಮ್ಮ ಹಾಜರಿದ್ದರು.