ಮಡಿಕೇರಿ, ನ.28: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ನವರನ್ನು ಅಪಮಾನಿಸಿದ ಆರೋಪಿಗೆ ಜಾಮೀನು ನೀಡಲು ನಿಯಮಬಾಹಿರವಾಗಿ ಸಹಾಯ ಮಾಡಿದ ಆರೋಪ ಹೊತ್ತಿರುವ, ಮಡಿಕೇರಿ ಪ್ರಧಾನ ಸಿ.ಜೆ, ಜೆ.ಎಂ.ಎಫ್.ಸಿ. ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ, ಕೆ.ಧನಂಜಯಕುಮಾರ್‌ರನ್ನು ವರ್ಗಾವಣೆ ಮಾಡಲಾಗಿದೆ. ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನಿರ್ದೇಶಕರಾದ ಅಂಜಲಿದೇವಿಯವರು ಆಡಳಿತಾತ್ಮಕ ಹಿತದೃಷ್ಟಿಯಿಂದ ಧನಂಜಯರವರನ್ನು ಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ವಿರಾಜಪೇಟೆ ಇಲ್ಲಿಗೆ ವರ್ಗ ಮಾಡಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.
ವಿರಾಜಪೇಟೆಯಲ್ಲಿ ಈಗಾಗಲೇ ಮತ್ತೊಬ್ಬರು ಕರ್ತವ್ಯದಲ್ಲಿ ಇರುವುದರಿಂದ ವರ್ಗಾವಣೆ ಆಗಿರುವ ಧನಂಜಯಕುಮಾರ್ ಖಾಲಿ ಸ್ಥಳವಿಲ್ಲದೆ ಅತಂತ್ರರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಒಂದು ವಾರದಿಂದ ದೇಶ ದ್ರೋಹಿ ವಿದ್ಯಾಧರನ ವಿರುದ್ದ ಹೋರಾಡುತ್ತಿರುವ, ದೇಶಭಕ್ತರು ಸರ್ಕಾರದ ಕ್ರಮಕ್ಕೆ ಹರ್ಷ ವ್ಯಕ್ತಪಡಿಸಿ, ನ್ಯಾಯಾಂಗ ವ್ಯವಸ್ತೆಯನ್ನು ಕೊಂಡಾಡಿದ್ದಾರೆ.