ಮಡಿಕೇರಿ, ನ.27: ದೇಶದ ಮಹಾನ್ ದಂಡನಾಯಕರಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್. ತಿಮ್ಮಯ್ಯ ಅರನ್ನ ಅವಮಾನಿಸಿರುವ ದೇಶದ್ರೋಹಿ, ವಿದ್ಯಾಧರ್ ವಿರುದ್ದ ಇಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸರ್ವ ಸದಸ್ಯರ ಸಭೆಯಲ್ಲಿ, ಕಂಡನಾ ನಿರ್ಣಯ ಕೈಗೊಂಡಿದೆ.
ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಆರೋಪಿಯು ಬೇನಾಮಿ ಹೆಸರಿನಲ್ಲಿ ತಮ್ಮ ವಾಟ್ಸಾಪ್ ಗುಂಪಿನಲ್ಲಿ, ತುಚ್ಚವಾಗಿ ಬರೆದಿದ್ದು ಇದರ ಪರಿಣಾಮ ಜಿಲ್ಲೆ ಹಾಗೂ ರಾಜ್ಯಾದ್ಯಂತ ಅಸಮಧಾನ ಹಾಗೂ ವಿರೋಧದ ಅಲೆಗಳು ಹುಟ್ಟಿಕೊಂಡಿವೆ. ದೇಶ ದ್ರೋಹದ ಕೃತ್ಯ ಮಾಡಿರುವ, ವಿದ್ಯಾಧರ್ ಎಂಬಾತನನ್ನು ಜಿಲ್ಲೆಯಿಂದ ಗಡಿಪಾರು ಮಾಡುವುದೇ ಅಲ್ಲದೆ, ಈತನ ವಕೀಲಗಿರಿಯ ಸದಸ್ಯತ್ವವನ್ನು ರದ್ದು ಪಡಿಸಬೇಕೆಂದು ಕೇಳಿಬರುತ್ತಿರುವ ಹೇಳಿಕೆಗೆ ಪೂರಕವಾಗಿ, ಇಂದು ನಡೆದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸರ್ವ ಸದಸ್ಯರ ತುರ್ತು ಸಭೆಯಲ್ಲಿ ಖಂಡನಾ ನಿರ್ಣಯವನ್ನು ಮಾಡಿ, ಹೋರಾಟಕ್ಕೆ, ಅಕಾಡೆಮಿ ತನ್ನ ಬೆಂಬಲ ಸೂಚಿಸಿದೆ.
ಈ ಸಮಾಜ ಘಾತುಕ ವ್ಯಕ್ತಿಯನ್ನು ಗಡಿಪಾರು ಮಾಡುವುದೆ ಅಲ್ಲದೆ, ಜಿಲ್ಲೆಯಲ್ಲಿ ನಡೆಯುವ ಯಾವುದೇ ಸಭೆ ಸಮಾರಂಭಗಳು, ಕಾರ್ಯಕ್ರಮಗಳಿಗೆ ಆತನನ್ನು ಆಹ್ವಾನಿಸಬಾರದೆಂಬ ಮನವಿಯನ್ನು ಸಾರ್ವಜನಿಕರಲ್ಲಿ ಮಾಡುವಂತೆ, ತೀರ್ಮಾನಿಸಲಾಯಿತು. ನ್ಯಾಯಾಲಯವು ಸದರಿ ವ್ಯಕ್ತಿಗೆ ಕಾನೂನಿನ ಅಡಿಯಲ್ಲಿ ವಿಧಿಸಬಹುದಾದ ಗರಿಷ್ಠ ಮಟ್ಟದ ಶಿಕ್ಷೆಯನ್ನು ನೀಡಬೇಕಾಗಿ ಒತ್ತಾಯಿಸುವಂತೆ ಅಭಿಪ್ರಾಯಿಸಲಾಗಿದೆ.
ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಈ ತುರ್ತು ಸಭೆಯಲ್ಲಿ, ಸದಸ್ಯರುಗಳಾದ ಪುತ್ತರಿರ ಪಪ್ಪು ತಿಮ್ಮಯ್ಯ, ಕಂಬೆಯಂಡ ಡೀನಾ ಬೋಜಣ್ಣ, ಮೊಳೆಕುಟ್ಟಡ ದಿನು ಬೋಜಪ್ಪ, ಕೊಂಡಿಜಮ್ಮಂಡ ಎಂ.ಬಾಲಕೃಷ್ಣ, ಪಾನಿಕುಟ್ಟಿರ ಕೆ.ಕುಟ್ಟಪ್ಪ, ಪೊನ್ನಿರ ಯು. ಗಗನ್, ಕುಡಿಯರ ಕಾವೇರಪ್ಪ, ನಾಯಂದಿರ ಆರ್.ಶಿವಾಜಿ, ಚೆಪ್ಪುಡಿರ ಎಸ್.ಉತ್ತಪ್ಪ, ಚೊಟ್ಟೆಯಂಡ ಎ. ಸಂಜು ಕಾವೇರಪ್ಪ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.