ಮಡಿಕೇರಿ, ನ.27: ದೇಶ ಕಂಡ ಮಹಾನ್ ಚೇತನಗಳಾದ, ಫೀ.ಮಾ. ಕೆ.ಎಂ. ಕಾರ್ಯಪ್ಪ ಮತ್ತು ಪದ್ಮಭೂಷಣ ಕೆ.ಎಸ್. ತಿಮ್ಮಯ್ಯ ಅವರ ಕುರಿತು ಸಪ್ತ ಸಾಗರ (ಕಡಲು) ಎಂಬ ವಾಟ್ಸಾಪ್ ಗುಂಪಿನಲ್ಲಿ, ನಕಲಿ ಖಾತೆಯಿಂದ ಬೇರೆ ಜನಾಂಗದ ವ್ಯಕ್ತಿಯ ಹೆಸರು ಬಳಸಿ, ತೀರಾ ಅವಹೇಳನಕಾರಿ ಹೇಳಿಕೆ ನೀಡಿದ, ಕೆ.ಆರ್. ವಿದ್ಯಾಧರ ಯಾನೆ ಶ್ರೀವತ್ಸಭಟ್ ಎಂಬ ವ್ಯಕ್ತಿಯನ್ನು ಸುಮೋಟೋ ಕೇಸ್ ದಾಖಲಿಸಿ, ಕ್ಷಿಪ್ರ ಕಾರ್ಯಾಚರಣೆ ಮಾಡಿ ಬಂಧಿಸಿದ ಕೊಡಗು ಪೊಲೀಸರಿಗೆ ಪ್ರಥಮವಾಗಿ ಅಭೀನಂದನೆಗಳನ್ನು ಸಲ್ಲಿಸುತ್ತೇವೆ. ಆದರೆ ಪ್ರಕರಣವನ್ನು ಮರು ತನಿಖೆಯೊಂದಿಗೆ, ಆತನ ಗಡಿಪಾರು ಮಾಡದಿದ್ದರೆ, ಮುಂದೆ ಅಹಿತಕರ ಘಟನೆಗಳಾದರೆ ಇಲಾಖೆಯೆ ಹೊಣೆಯಾಗಬೇಕು ಎಂದು, ಅಖಿಲಕೊಡವ ಸಮಾಜ, ಕೊಡವಾಮೆರ ಕೊಂಡಾಟ, ಕನೆಕ್ಟಿಂಗ್ ಕೊಡವಾಸ್ ಸೇರಿದಂತೆ ವಿವಿಧ ಸಂಘಟನೆಗಳು ಒಕ್ಕೊರಲ ಎಚ್ಚರಿಕೆ ರವಾನಿಸಿದ್ದಾರೆ.
ಇಂದು ಮಡಿಕೇರಿಯ ಪತ್ರಿಕಾಭವನದಲ್ಲಿ ನಡೆದ, ಪತ್ರಿಕಾ ಘೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು, ಕಳೆದ ಕೆಲವು ವರ್ಷಗಳಿಂದ ಕೊಡಗು ಪೊಲೀಸರು ಅಪರಾಣ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ತೋರುವ ಕಾರ್ಯಕ್ಷಮತೆಗೆ ಅಭಿಂದಿಸಲೇ ಬೇಕು. ಅದರಲ್ಲೂ ರಾಷ್ಟ್ರ ದ್ರೋಹದ ಹೇಳಿಕೆ ನೀಡಿದ, ಕೆ. ಆರ್. ವಿದ್ಯಾಧರ ಯಾನೆ, ಶ್ರೀವತ್ಸಾಭಟ್ ಎನ್ನುವ ಆರೋಪಿಯು ದೇಶ ದ್ರೋಹದ ಕೃತ್ಯ ಎಸಗಿರುವುದು ಆತ್ನ ಹೇಳಿಕೆಯಿಂದಲೇ ಸ್ಪಷ್ಟವಾಗಿದೆ. ಆತನ ವಿರುದ್ದ ನಕ್ಷಲ್ ಸಂಪರ್ಕದಂತ ಆರೋಪಗಳೂ ಕೇಳಿ ಬರುತ್ತಿವೆ. ಆದರೆ ಪೊಲೀಸರು ಅಷ್ಟೊಂದು ಆಸಕ್ತಿ ಹಾಗೂ ಶ್ರಮ ಹಾಕಿ, ಆತನನ್ನು ವಸಕ್ಕೆ ಪಡೆದರೂ ಕೂಡ, ಆರೋಪಿಯ ವಿರುದ್ದ ಸರಿಯಾದ ಸೆಕ್ಷನ್ನುಗಳನ್ನು ಹಾಕುವಾಗ ಎಡವಿದರು ಎನಿಸುತ್ತದೆ ಎಂದರು. ಬಹುಷಃ ಪೋಲೀಸರು ಸುಮೊಟೋ ಬದಲು, ಇತರ ಸಂಘಟನೆಗಳು ನೀಡಿದ ದೂರಿನ ಆದಾರದ ಮೇಲೆ, ಸೂಕ್ತ ಸೆಕ್ಷನ್‌ಗಳೊಂದಿಗೆ, ಎಫ್‌ಐಆರ್ ದಾಖಲಿಸಿದ್ದರೆ ಇಂದು ಈ ಪ್ರಕರಣದ ದಿಕ್ಕೇ ಬೇರೆ ಆಗಿರುತಿತ್ತು. ಪೊಲೀಸರು ಸುಮೋಟೋ ದೂರು ದಾಖಲಿಸಿದ ಪರಿಣಾಮ ಇಂದು ನಾವು ಮೇಲ್ಮನವಿ ಸಲ್ಲಿಸಲೂ ತೊಂದರೆ ಆಗುತ್ತಿದೆ. ಕೂಡಲೇ ಪೋಲೀಸರು ಮರು ತನಿಖೆಗಾಗಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕು ಎಂದು ಒತ್ತಾಯಿಸುಸಿದರು. ಈ ಹಿಂದೆ ಕೊಡಗಿನಲ್ಲೇ ನಡೆದ ಇಂತ ಪ್ರಕರಣಗಳನ್ನು ಅವಲೋಕಿಸಿದಾಗ, ಆರೋಪಿಗಳು ತಿಂಗಳುಗಟ್ಟಲೆ ಜೈಲಿನಲ್ಲಿ ಇದ್ದದನ್ನು ನಾವು ಗಮನಿಸಿದ್ದೇವೆ. ಆ ಆದಾರದಲ್ಲಿ ನಾವು ಪೊಲೀಸರು ಬಲಿಷ್ಟ ಸೆಕ್ಷನ್ನುಗಳನ್ನು ಹಾಕಲು ಅವಕಾಶ ಇತ್ತೂ ಎಂಬ ಅಂಶವನ್ನ ಪ್ರತಿಪಾದಿಸುತಿದ್ದೇವೆ, ಪೊಲೀಸರು ತಕ್ಷಣ ಮರು ತನಿಖೆಗೆ ಕೋರಿ ನ್ಯಾಯಲಾಯಕ್ಕೆ ಮೇಲ್ಮನವಿ ಸಲ್ಲಿಸಬೇಕು ಎಂದು ಒತ್ತಾಯಿಸದರು.
ಮುಂದುವರೆದು ಮಾತನಾಡಿದ ಅವರು, ಆರೋಪಿಯಾಗಿರುವ ರಾಷ್ಟ್ರದ್ರೋಹಿ ವಿದ್ಯಾಧರನು ಕಳೆದ ಹಲವಾರು ವರ್ಷಗಳಿಂದ ಕೊಡಗಿನಲ್ಲಿ ಜನಾಂಗೀಯ ವಿಷ ಬೀಜ ಬಿತ್ತುತಿದ್ದು, ಈತನ ಕಾಯಕವೇ ಜನಾಂಗ ವಿರೋಧಿ ಹೇಳಿಕೆಗಳ ಮೂಲಕ ಪರಸ್ಪರರನ್ನು ಎತ್ತಿಕಟ್ಟಿ ಒಡಕು ಮೂಡಿಸುವುದು. ತನ್ನ ಹೊಟ್ಟೆಪಾಡಿಗಾಗಿ ಹೊರಜಿಲ್ಲೆಯಿಂದ ಬಂದಿರುವ ವ್ಯಕ್ತಿ, ಇಂದು ಕೊಡಗಿನ ನೆಮ್ಮದಿ ಮತ್ತು ಶಾಂತಿಗೆ ಭಂಗ ತರುತಿದ್ದು, ಈತ, ತಾನು ಮಡಿಕೇರಿಗೆ ಬಂದ ದಿನದಿಂದಲೂ ಸಾಮಜಘಾತುಕ ಕಾರ್ಯವನ್ನು ಬೇರೆ ಬೇರೆ ಹೆಸರಿನಲ್ಲಿ ಮಾಡಿ, ಅಮಾಯಕರ ಮೇಲೆ ಹಾಕಿರುವ ಸಂಶಯ ಮೂಡುತ್ತಿದೆ. ಈತ ಮೊನ್ನೆ ಬಳಸಿದ ಹೆಸರು ಕೂಡ ನಕಲಿಯಾಗಿದ್ದು, ಬ್ರಾಹ್ಮಣ ಸಮುದಾಯದ ಮೇಲೆ ಕೊಡವರನ್ನು ಎತ್ತಿ ಕಟ್ಟುವ ಪ್ರಯತ್ನವನ್ನು ಮಾಡಿರುವುದು ಸ್ಪಷ್ಟವಾಗಿದೆ. ಆತನೇ ಪತ್ರಿಕಾ ಹೇಳಿಕೆ ನೀಡಿರುವಂತೆ ಶ್ರೀವತ್ಸ ಭಟ್ ಎನ್ನುವ ವ್ಯಕ್ತಿ ಇಲ್ಲ. ಇಲ್ಲದೇ ಇರುವ ಅನಾಮಧೇಯನ ಹೆಸರಿನಲ್ಲಿ ವ್ಯವಹಾರ ಮಾಡುವುದೇ ಈತನ ಕಾಯಕವಾಗಿದೆ. ಒಬ್ಬ ವಕೀಲನಾಗಿ, ಸಮಾಜದ ಸ್ವಾಸ್ಥ್ಯದ ಅರಿವಿಲ್ಲದಂತೆ ವರ್ತಿಸಿದ್ದು ಮಹಾ ಅಪರಾದವಾದರೂ, ಈಗ ಏನೂ ಆಗೇ ಇಲ್ಲ ಎನ್ನುವಂತೆ ಹೇಳಿಕೆ ನೀಡುತಿದ್ದಾನೆ. ಅದರಲ್ಲೂ ಈ ವಿಚಾರದಲ್ಲಿ ಪ್ರಕರಣ ದಾಖಲಾದ ತಕ್ಷಣ, ಆರೋಪಿಯು ಸಪ್ತಸಾಗರ(ಕಡಲು) ವಾಟ್ಸಾಪ್ ಬಳಗದಲ್ಲಿ, ಮತ್ತೊಂದು ಪೋಸ್ಟ್ ಹಾಕಿದ್ದು, ಶ್ರೀವತ್ಸ ಭಟ್ ಎಂಬ ವ್ಯಕ್ತಿಯ ಬಗ್ಗೆ ಈ ಬಳಗಲ್ಲಿ ಯಾರಿಗಾದರು ಮಾಹಿತಿ ಇದ್ದರೆ ಕೊಡೀ, ಎಂದು ಸಂದೇಶ ಹಾಕುವ ಮೂಲಕ ಮತ್ತೆ ತನಿಖೆಯನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಾನೆ. ಇದು ಈ ವ್ಯಕ್ತಿಯ ಕುಟಿಲತೆ ಮತ್ತು ಸಮಾಜದ ದಿಕ್ಕು ತಪ್ಪಿಸುವ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ.
ಈತನ ಸಂಪೂರ್ಣ ನಡೆನುಡಿಗಳನ್ನು ಗಮನಿಸಿದಾಗ, ಈತನೊಬ್ಬ ಸಮಾಜಘಾತುಕ ಮತ್ತು ಕೊಡಗಿನ ಶಾಂತಿಯನ್ನ ಕದಡಿ ಗೊಂದಲ ಮೂಡಿಸುವುದೇ ಈತನ ಮೂಲ ಉದ್ದೇಶ ಎನಿಸುತ್ತದೆ. ಆದ್ದರಿಂದ ಈತನನ್ನ ತಕ್ಷಣ ಕೊಡಗಿನಿಂದ ಗಡಿಪಾರಿಗೆ ಕ್ರಮ ಕೈಕೊಳ್ಳುವುದೇ ಅಲ್ಲದೆ ಪೊಲೀಸರು ಸಂಪೂರ್ಣ ಪ್ರಕರಣ ಮತ್ತು ಈತನ ಹಿಂದಿನ ಉದ್ದೇಶಗಳನ್ನು ಮರು ತನಿಖೆ ಮಾಡಲೇಬೇಕು ಎಂದು ಆಗ್ರಹಿಸಿದರು.
ಪ್ರಕರಣದ ಉದ್ದಕ್ಕೂ ಜಿಲ್ಲೆಯ ಎಲ್ಲಾ ಮಾಧ್ಯಮಗಳು, ಅತ್ಯಂತ ಜವಾಭ್ದಾರಿಯಿಂದ ವರ್ತಿಸಿದ್ದು, ಘಟನೆಯನ್ನು ಜಿಲ್ಲೆಯ ಎಲ್ಲಾ ಸಂಘಟನೆ, ಸಮಾಜ, ಜನಾಂಗ, ಧರ್ಮಗಳೂ ತೀವ್ರವಾಗಿ ಖಂಡಿಸಿದ್ದು, ಇದರಿಂದ ಜಿಲ್ಲೆಯಲ್ಲಿ ಶಾಂತಿ ಕದಡಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಅವಕಾಶದೊರೆಯುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ ಅಲ್ಲದೆ, ರಾಷ್ಟ್ರದ ವಿಚಾರಕ್ಕೆ ಬಂದರೆ ನಾವೆಲ್ಲರೂ ಒಂದಾಗುತ್ತೇವೆ ಎಂಬುದನ್ನೂ ಸಾರಿದ್ದೇವೆ ಎಂದರು.
ಆರೋಪಿಯನ್ನು ಅಮಾನತು ಮಾಡಿದ ವಕೀಲರ ಸಂಘದ ಕ್ರಮವನ್ನೂ ನಾವು ಈ ಸಂದರ್ಭದಲ್ಲಿ ಅಭಿನಂದಿಸುತ್ತೇವೆ ಎಂದು ಚಾಮೆರ ದಿನೇಶ್‌ಬೆಳ್ಯಪ್ಪ ಹೇಳಿದರು.
ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಕೊಡವ ಸಮಾಜ ಗೌರವ ಕಾರ್ಯದರ್ಶಿ ಕೀತಿಯಂಡ ವಿಜಯಕುಮಾರ್ ಅವರು, ಆರೋಪಿಯು ಜನಾಂಗೀಯ ಸಂಘರ್ಷ ರೂಪಿಸುವ ಉದ್ದೇಶದಿಂದಲೇ ಈ ಕೃತ್ಯ ಎಸಗಿದ್ದು, ಇದು ಆತನ ಮನಸ್ಥಿತಿ ಸರಿ ಇಲ್ಲ ಎಂಬ ಅಂಶವನ್ನ ಸ್ಪಷ್ಟಪಡಿಸುತ್ತದೆ. ಈತನನ್ನ ಗಡಿಪಾರು ಮಾಡಿದರೆ ಮಾತ್ರ ಜಿಲ್ಲೆಯಲ್ಲಿ ಶಾಂತಿ ನೆಮ್ಮದಿ ಸಾಧ್ಯ, ಶಾಂತಿಯ ತವರು ಎಂದು ಹೆಸರಾಗಿರುವ ಕೊಡಗಿನಲ್ಲಿ ಇಂತ ಘಟನೆಗಳು ಮುಂದೆ ಎಂದೂ ಕೂಡ ನಡೆಯದಂತ ಪಾಠವನ್ನು ಈ ತನಿಖೆ ಮತ್ತು ಆರೋಪಿಗೆ ನೀಡುವ ಶಿಕ್ಷೆ, ಮಾದರಿ ಆಗಬೇಕು ಎಂಬುದು ನಮ್ಮ ಆಶಯವಾಗಿದೆ. ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದ್ದು, ಜಿಲ್ಲೆಯ ಜನ ಬಯಸಿದ ನ್ಯಾಯ ದೊರಕುತ್ತದೆ ಎಂಬ ನಂಬಿಕೆ ಇದೆ ಎಂದರು.
ಕನೆಕ್ಟಿಂಗ್ ಕೊಡವಾಸ್ ಸಂಘಟನೆಯ ಸಂಚಾಲಕ, ಶಾಂತೆಯಂಡ ನಿರನ್ ನಾಚಪ್ಪ ಮಾತನಾಡಿ, ಕೊಡಗು ಪೊಲೀಸರ ಕ್ರಮ ಅಭೀನಂದನಾರ್ಹವೇ ಆದರು, ಈ ಪ್ರಕರಣದಲ್ಲಿ ಹಲವು ಅನುಮಾನಗಳು ಕಾಡುತ್ತಿವೆ. ಪೊಲೀಸರು ಯಾಕೆ ಯಾವುದೇ ಸಂಘಟನೆಗಳು ನೀಡಿದ ದೂರನ್ನು ಪರಿಗಣಿಸಿ ಎಫ್.ಐ.ಆರ್ ಮಾಡಲಿಲ್ಲ, ಯಾಕೆ ಆರೋಪಿಯ ವಿರುದ್ದ ಕಡಿಮೆ ಸಾಮರ್ಥ್ಯದ ಸೆಕ್ಷನುಗಳನ್ನು ಹಾಕಲಾಯಿತು, ಈತನ ವಿರುದ್ದ ಇತರ ಆರೋಪಗಳು ಇರುವಾಗ, ಹೆಚ್ಚಿನ ತನಿಖೆಗೆ ಕಷ್ಟಡಿಗೆ ಕೇಳಲಿಲ್ಲ ಯಾಕೆ ಎಂಬೆಲ್ಲ ಪ್ರಶ್ನಿಗಳು ಇಂದು ಸಮಾಜದಲ್ಲಿ ಚರ್ಚೆಯಾಗುತ್ತಿದೆ. ಇದಕ್ಕೆಲ್ಲ ಉತ್ತರವನ್ನು ನೀಡಬೇಕಾದರೆ ಪೊಲೀಸರು ಈ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು. ಒಂದು ವಾರದೊಳಗೆ ಈತನ ಪ್ರಕರಣದಲ್ಲಿ ಈತನ ಮರು ಬಂಧನವಾಗದೇ, ಗಡಿಪಾರಿಗೆ ಶಿಫಾರಸ್ಸು ಆಗದೇ ಇದ್ದರೆ, ಕೊಡಗು ಬಂದ್ ಮತ್ತಿತರ ಬೃಹತ್ ಹೋರಾಟಕ್ಕೆ ನಾವು ಜಿಲ್ಲೆಯ ಎಲ್ಲಾ ಜನತೆ, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕರೆಕೊಡುತ್ತೇವೆ. ಇದರಿಂದ ಮುಂದಾಗುವ ಎಲ್ಲಾ ಘಟನೆಗಳಿಗೆ ಪೊಲೀಸ್ ಮತ್ತು ಜಿಲ್ಲಾಡಳಿತವೇ ನೇರ ಹೊಣೆ ಎಂದು ಎಚ್ಚರಿಸಿದರು.
ಕನೇಕ್ಟಿಂಗ್ ಕೊಡವಾಸ್ ನಿರ್ದೇಶಕ, ಓಡಿಯಂಡ ನವೀನ್ ತಿಮ್ಮಯ್ಯ ಅವರು ಮಾತನಾಡಿ, ಈ ಮಣ್ಣಿನ ಆದಿಮೂಲ ಜನಾಮಗವಾಗಿರುವ ಕೊಡವರು, ಇಂದಿಗೂ ಕೂಡ ಎಲ್ಲಾ ಜನಾಂಗಳನ್ನೂ ಸಹೋದರತೆಯಿಂದ ನೋಡಿ, ಸಹಬಾಳ್ವೆ ಮಾಡಿದೆ. ಆದರೆ ವಿದ್ಯಾಧರನಂತ ಕ್ರಿಮಿಗಳು ಸಾಮರಸ್ಯ ಕದಡುವ ಪ್ರಯತ್ನ ಮಾಡುತ್ತಿವೆ. ಇದನ್ನೂ ಈಗಲೇ ಚಿವುಟಬೇಕು ಇಲ್ಲದಿದ್ದರೆ ಮುಂದೆ ನಾಡಿನ ನೆಮ್ಮದಿಗೆ ಅಪಾಯಕಾರಿಯಾಗಲಿದ್ದಾರೆ. ಇದೀಗ ಬೆಂಗಳೂರು ಕೊಡವ ಸಮಾಜ ನೀಡಿದ ದೂರಿನ ಅಡಿಯಲ್ಲಿ, ಬೆಂಗಳೂರು ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಆರೋಪಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿಮಾಡಲಾಗಿದ್ದು, ಅಲ್ಲಿ ಸೂಕ್ತ ತನಿಖೆಯಾಗುವ ವಿಶ್ವಾಸ, ದೇಶಭಕ್ತರು ಮತ್ತು ಸೇನಾ ನಾಯಕರ ಅಭಿಮಾನಿಗಳಿಗೆ ಮೂಡಿದೆ. ಜೊತೆಗೆ ಕೊಡಗು ಪೊಲೀಸರೂ ಕೂಡ, ಈಗಾಗಲೇ ದೂರು ನೀಡಿದ ಎಲ್ಲಾ ಸಂಘಟನೆಗಳ ಹಾಗೂ ವ್ಯಕ್ತಿಗಳ ದೂರನ್ನೂ ಪರಿಗಣಿಸಿ, ಪ್ರಕರಣ ದಾಖಲಿಸಿಕೊಂಡು ಮರು ತನಿಖೆ ಮಾಡಬೇಕೆಂದು ಆಗ್ರಹಿಸುಸಿದರು.
ಗೋಷ್ಠಿಯಲ್ಲಿ, ಸಾಮಾಜಿಕ ಕಾರ್ಯಕರ್ತ ಚೊಟ್ಟೆಯಂಡ ಸಂಜು ಕಾವೇರಪ್ಪ, ಕೊಡವಾಮೆರ ಕೊಂಡಾಟ ಕಾರ್ಯದರ್ಶಿ, ಕುಂಞಿರ ಗಿರೀಶ್ ಭೀಮಯ್ಯ ಹಾಜರಿದ್ದರು.