ದೇಶ ಕಂಡ ಮಹಾನ್ ಸೇನಾನಿಗಳ ಕುರಿತು ಅವಾಚ್ಯ ಪದಗಳಿಂದ ನಿಂದಿಸಿರುವ ವಕೀಲ ವಿದ್ಯಾಧರನಿಗೆ, ರಾತ್ರೋ ರಾತ್ರಿ ಜಾಮೀನು ಮಂಜೂರಾಗಿದ್ದು, ಜಾಮೀನು ರದ್ದು ಪಡಿಸುವಂತೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಕೊಡವಾಮೆರ ಕೊಂಡಾಟ ಸಂಘಟನೆ ಕಾನೂನು ತಜ್ಞರೊಂದಿಗೆ ಚರ್ಚಿಸುತ್ತಿದೆ, ಎಂದು ಸಂಘಟನೆ ಪ್ರಕಟಣೆ ನೀಡಿದೆ.
ನಿನ್ನೆ ಇಡೀ ದಿನ ನಾಟಕೀಯ ಬೆಳವಣಿಗೆಗಳು ನಡೆದಿದ್ದು, ಈ ಎಲ್ಲದರ ಹಿಂದೆ ದೇಶ ವಿರೋಧಿಯನ್ನು ರಕ್ಷಿಸಲು ವ್ಯಾಪಕ ಹುನ್ನಾರ ನಡೆಸಿರುವ ಸಾಧ್ಯತೆಗಳಿವೆ. ನಿನ್ನೆ ಪೋಲೀಸರಿಗೆ ದೂರು ನೀಡಲು ಹೋದ ಸಂದರ್ಭದಲ್ಲಿಯೆ, ಆರೋಪಿಯ ಮಾಹಿತಿ ಬಂದಿದ್ದು ಕೆಲವೇ ಗಂಟೆಗಳಲ್ಲಿ, ಯಾರೆಂದು ತಿಳಿಸಲಾಗುವುದು ಮತ್ತು ಬಂಧಿಸಲಾಗುವುದು ಎಂದಿದ್ದರು. ಆ ನಂತರ ದೂರು ನೀಡಲು ತೆರಳಿದ ಬಿಜೆಪಿ ನಿಯೋಗಕ್ಕೆ, ಆರೋಪಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿಯ ಸಮೇತ ಆರೋಪಿಯ ಭಾವಚಿತ್ರವನ್ನೂ ತೋರಿಸಲಾಗುತ್ತದೆ. ಸಂಜೆ ವೇಳೆಗೆ, ಇದೇ ವ್ಯಕ್ತಿಯ ಭಾವ ಚಿತ್ರ ಸಮೇತ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತದೆ. ತಕ್ಷಣ ಪೋಲೀಸ್ ಇಲಾಖೆ ಪ್ರಕರಣ ತನಿಖೆಯ ಹಂತದಲ್ಲಿದೆ, ಯಾರನ್ನೂ ಬಂಧಿಸಿಲ್ಲ ಎಂಬ ಪ್ರಕಟಣೆ ಹೊರಡಿಸುತ್ತದೆ. ಇದಾಗಿ ಮತ್ತೆ ಬಂಧನದ ಸುದ್ದಿಯ ಒತ್ತಡ ಎದುರಾದಾಗ ಕೆಲವೇ ಕ್ಷಣಗಳಲ್ಲಿ, ಇದೇ ಆರೋಪಿಯ ಬಂಧಿಸಿ ಪ್ರಕರಣ ದಾಖಲಿಸಿರುವ ಪ್ರಕಟಣೆ ಬರುತ್ತದೆ. ಇದಾಗಿ ಕೆಲವೇ ಘಂಟೆಗಳಲ್ಲಿ, ಮಧ್ಯರಾತ್ರಿಯ ಸಮಯದಲ್ಲಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಜಾಮೀನು ಕೊಡಿಸಲಾಗುತ್ತದೆ. ಅದರಲ್ಲೂ ಆರೋಪಿಯನ್ನ ಬಂಧಿಸಿ ಕೆಲವೇ ಘಂಟೆಗಳಾದರೂ, ಹೆಚ್ಚಿನ ವಿಚಾರಣೆಗೆ ಪೋಲೀಸ್ ಕಸ್ಟಡಿಗೆ, ಸರ್ಕಾರಿ ಅಭಿಯೋಜಕರು ಕೇಳಿಲ್ಲ. ಸರ್ಕಾರಿ ವಕೀಲರು ತಮ್ಮ ಕಾರ್ಯವನ್ನು ಮಾಡಲು ವಿಫಲರಾದಂತೆ ಕಾಣುತ್ತಿದೆ. ಸರ್ಕಾರಿ ಅಭಿಯೋಜಕರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದೇ, ಪೋಲೀಸರ ಶ್ರಮಕ್ಕೆ, ದೇಶ ಭಕ್ತರ ಮತ್ತು ಕೊಡವ ಜನಾಂಗದ ಭಾವನೆಗಳಿಗೆ ಬೆಲೆ ಇಲ್ಲದಂತಾಗಿರುವುದು. ದೇಶದ ಸೇನಾ ದಂತಕಥೆಗಳನ್ನೇ ನೇರವಾಗಿ ಅವಮಾನಿಸಿದರೂ ಯಾವುದೇ ಕಠಿಣ ಕ್ರಮ ಆಗದಿರುವುದು ತೀವ್ರ ನೋವೂಂಟಾಗಿದ್ದು, ಈ ವಿಚಾರದಲ್ಲಿ ಮರು ವಿಚಾರಣೆಗೆ ಮೇಲ್ಮನವಿ ಸಲ್ಲಿಸಲು ಹಿರಿಯ ತಜ್ಞ ವಕೀಲರಿಂದ ಸಲಹೆ ಪಡೆಯಾಲಾಗುತ್ತಿದ್ದು. ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೊಡವಾಮೆರ ಕೊಂಡಾಟ ಸಂಘಟನೆ ಹೇಳಿದೆ.