ಸುಂಟಿಕೊಪ್ಪ, ನ.22: ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ, ದೇಶ ಕಂಡ ಮಹಾನ್ ಚೇತನಗಳಾದ ಫಿ.ಮಾ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ವಿರುದ್ದ ಅವಹೇಳನ ಮಾಡಿದ್ದ ಆರೋಪಿಯನ್ನು ಇದೀಗ ಕೊಡಗು ಪೋಲೀಸರು ಬಂಧಿಸಿರುವ ಸುಳಿವು ದೊರೆತಿದ್ದು. ಆರೋಪಿಯು ಸುಳ್ಯ ಮೂಲದ, ಮಡಿಕೇರಿಯಲ್ಲಿ ವಕೀಲಗಿರಿ ಮಾಡುತ್ತಿರುವ ವ್ಯಕ್ತಿ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಹಲವು ವರ್ಷಗಳಿಂದ ಕೊಡಗಿನಲ್ಲಿ ಜನಾಂಗೀಯ ದ್ವೇಶಕ್ಕೆ ಮೂಲ ಕಾರಣನಾಗಿದ್ದ ಈತ, ಈವರೆಗೂ ತೆರೆಯ ಹಿಂದೆ ನಿಂತು, ಇತರರನ್ನು ಎತ್ತಿ ಕಟ್ಟುವ ಮೂಲಕ, ತನ್ನ ತೀಟೆ ತೀರಿಸಿಕೊಳ್ಳುತಿದ್ದ. ಈ ಭಾರಿಯೂ ಕೂಡ, ತನ್ನದೇ ಕಛೇರಿಯಲ್ಲಿ ಕಾರ್ನಿರ್ವಹಿಸುವ ಮಹಿಳೆಯ ಮೊಬೈಲ್ನಿಂದ ದ್ವೇಶ ಕಾರುವ ಪೋಸ್ಟ್ ಹಾಕಿದ್ದು, ತಾನು ಅದೇ ವಾಟ್ಸಾಪ್ ಗುಂಪಿನ ಅಡ್ಮಿನ್ ಕೂಡ ಆಗಿದ್ದ ಎಂದು ಹೇಳಲಾಗಿದೆ. ಆದರೆ ಕೊಡಗು ಪಲೊಲೀಸರ ಕಾರ್ಯ ಕ್ಷಮತೆಯೆದುರು ಈತನ ನಾಟಕ ಈ ಭಾರಿ ನಡೆಯಲಿಲ್ಲ. ತಾನು ತೋಡಿದ ಹಳ್ಳಕ್ಕೆ ತಾನೇ ಬೀಳುವ ಮೂಲಕ ಇದೀಗ ತನ್ನ ನಿಜ ರೂಪವನ್ನು ಬಯಲು ಮಾಡಿಕೊಂಡಿದ್ದು. ಪೊಲೀಸರ ದಕ್ಷ ಕಾರ್ಯಾಚರಣೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಈ ಪ್ರಕರಣದಲ್ಲಿ ಪೊಳೀಸ್ ವರಿಷ್ಟಾಧಿಕಾರಿಗಳಿಗೆ ಮೊದಲು ದೂರು ನೀಡಿದ್ದ ಕೊಡವಾಮೆರ ಕೊಂಡಾಟ ಸಂಘಟನೆಯು, ಕೊಡಗು ಪೊಲೀಸರಿಗೆ ಅಭೀನಂದನೆ ಸಲ್ಲಿಸಿದೆ ಅಲ್ಲದೆ, ಕಿಡಿಗೇಡಿಯನ್ನು ಯಾವುದೇ ಕಾರಣಕ್ಕೂ ಸುಲಭವಾಗಿ ಹೊರಬರದಂತೆ ಕಠಿಣ ಕಾನೂನಿನ ಕುಣಿಕೆಗೆ ಸಿಲುಕಿಸಬೇಕು, ಮತ್ತು ಈತ್ ವಕೀಲ ಪರವಾನಗಿಯನ್ನು ರದ್ದು ಪಡಿಸಲು ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದೆ.
ಕೊಡಗು ಜಿಲ್ಲಾ ವಕೀಲ ಸಂಘಕ್ಕೂ ಮಾಧ್ಯಮದ ಮೂಲಕ ಮನವಿ ಮಾಡಿರುವ ಕೊಡವಾಮೆರ ಕೊಂಡಾಟ ಸಂಘಟನೆಯು, ದೇಶದ ಮಹಾನ್ ಚೇತನಗಳ ವಿರುದ್ದ ತುಚ್ಚವಾಗಿ ಮಾತನಾಡಿರುವ ಈ ವಕೀಲನನ್ನು, ತಕ್ಷಣ ತಮ್ಮ ಬಾರ್ ಕೌನ್ಸಿಲ್ನಿಂದ ಅಮಾನತು ಮಾಡಬೇಕೆಂದು ಒತ್ತಾಯಿಸಿದೆ. ಈ ಕುರಿತು, ಕೊಡಗು ಬಾರ್ ಕೌನ್ಸಿಲ್, ಕರ್ನಾಟಕ ಬಾರ್ ಅಸೋಷಿಯೇಷನ್, ಹಾಗೂ ಭಾರತೀಯ ವಕೀಲರ ಪರಿಷತ್ತಿಗೆ ದೂರು ನೀಡಲು ಕೊಡವಾಮೆರ ಕೊಂಡಾಟ ಸಂಘಟನೆಯು ನಿರ್ಧರಿಸಿದೆ ಎಂದು, ಸಂಘಟನೆಯ ಪಧಾದಿಕಾರಿಗಳು ತಿಳಿಸಿದ್ದಾರೆ.