ಮಡಿಕೇರಿ, ನ.21: ದೇಶದ ಸಂಸತ್ತಿನಲ್ಲಿ 1952 -1954 ಮೊದಲು ಅಂಗೀಕಾರವಾಗಿ ನಂತರ 1964, 1995 ಮತ್ತು 2013ರಲ್ಲಿ ತಿದ್ದುಪಡಿಗೊಂಡಿರುವ, ದೇಶದ ಭವಿಷ್ಯಕ್ಕೆ ಮಾರಕವಾಗಿರುವ ವಕ್ಫ್ ಕಾಯ್ದೆಯನ್ನ ಸಂಪೂರ್ಣ ರದ್ದುಗೊಳಿಸುವ ಹೊಸ ಕಾಯ್ದೆಯನ್ನು ಮುಂಬರುವ ಚಳಿಗಾಲದ ಅದೀವೇಶನದಲ್ಲೇ ಮಂಡಿಸಬೇಂಕೆಂದು ಸರ್ಕಾರವನ್ನು ಒತ್ತಾಯಿಸಲು, ಕೊಡಗು ಬಿಜೆಪಿಯಿಂದ ನಾಳೆ ಮಡಿಕೇರಿಯಲ್ಲಿ ಬೃಹತ್, ಮೆರವಣಿಗೆಯ ಹರತಾಳ ನಡೆಯಲಿದೆ ಎಂದು ಕೊಡಗು ಜಿಲ್ಲಾ ಬಿ.ಜೆ.ಪಿ ಪ್ರಕೋಷ್ಟದ ಸಂಯೋಜಕರಾದ ಅಪ್ಪನೆರವಂಡ ಮನೋಜ್ ಮಂದಪ್ಪ ತಿಳಿಸಿದ್ದಾರೆ.
ನಡುಬಾಡೆಗೆ ಮಾಹಿತಿ ನೀಡಿರುವ ಅವರು, ಕೊಡಗು ಬಿಜೆಪಿ ಘಟಕದ ವತಿಯಿಂದ, ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರ ನೇತೃತ್ವದಲ್ಲಿ, ಜಿಲ್ಲಾ ಕಾರ್ಯ ತಂಡ, ಮಂಡಲ ಕಾರ್ಯ ತಂಡ, ಎಲ್ಲಾ ಮೋರ್ಚಾ ಕಾರ್ಯ ತಂಡ, ಪ್ರಕೋಷ್ಟ ಘಟಕ, ಶಾಸಕ ಮಂಡೆಪಂಡ ಸುಜಾ ಕುಶಾಲಪ್ಪ, ಮಾಜಿ ಸಚಿವರಾದ ಮಂಡೆಪಂಡ ಅಪ್ಪಚ್ಚು ರಂಜನ್, ಮಾಜೀ ವಿಧಾನ ಸಭಾದ್ಯಕ್ಷರಾದ ಕೆ.ಜಿ. ಬೋಪಯ್ಯ, ಮಾಜಿ ಶಾಸಕ ಮಂಡೆಪಂಡ ಸುನಿಲ್ ಸುಬ್ರಮಣಿ ಸೇರಿದಂತೆ ಎಲ್ಲಾ ಘಟಕ, ಪ್ರಕೋಷ್ಟಗಳ ಮುಖಂಡರು, ಪದಾಧೀಕಾರಿಗಳು, ಮತ್ತು ಕಾರ್ಯಕರ್ತರ ಸಹಯೋಗದೊಂದಿಗೆ, ನಾಳೆ 22/11/24ನೇ ಶುಕ್ರವಾರ ಬೆಳಗ್ಗೆ 10 ಗಂಟೆಗೆ, ಮಡಿಕೇರಿ ನಗರದ ಚೌಡೇಶ್ವರಿ ದೇವಸ್ಥಾನದಿಂದ, ಡಿಸಿ ಕಚೇರಿವರೆಗೆ ಮೆರವಣಿಗೆ ಮತ್ತು ಪ್ರತಿಭಟನೆ ನಡೆಯಲಿದೆ. WAQF ಮಂಡಳಿಗೆ ಸಂಬಂಧಿಸಿದಂತೆ, ಹಿಂದೂ ಮತ್ತು ಮುಸಲ್ಮಾನೇತರ ನಾಗರಿಕರ ಆಸ್ತಿಯನ್ನು (ಕೃಷಿ / ಎಸ್ಟೇಟ್ ಪ್ಲಾಂಟೇಶನ್ / ವಸತಿ ಗೃಹ / ವಾಣಿಜ್ಯ ಕಟ್ಟಡ / ಧಾರ್ಮಿಕ ಕೇಂದ್ರಗಳು / ಆಶ್ರಮ / ದೇವಸ್ಥಾನ / ಸರ್ಕಾರಿ ಸಂಸ್ಥೆ ಆಸ್ತಿ / ಸರ್ಕಾರಿ ಭೂಮಿ / ಅರಣ್ಯ ಭೂಮಿ ಮತ್ತು ಸರಿಯಾಗಿ ಸೇರಿರುವ) ದೋಚಲು ಸಹಾಯ ಆಗುವಂತೆ ಹಿಂದಿನ ಸರ್ಕಾರಗಳು ವಕ್ಫ್ ಕಾಯ್ದೆಯನ್ನು ರೂಪಿಸಿವೆ. ಈ ಕಾನೂನು ಬದಲಿಸಲು ಪ್ರಜೆಗಳ ಸತ್ಯಾಗ್ರಹ ಆಗಲೇ ಬೇಕು ಹಾಗಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
WAQF 1995ರ ಕಾನೂನು ಓಲೈಕೆ ಷಡ್ಯಂತ್ರದ ಭಾಗವಾಗಿದ್ದು, ಭಾರತವು ಎಲ್ಲರಿಗಾಗಿ ಇರುವ ದೇಶ. ಹಾಗಾಗಿ ನಮ್ಮ ಆಸ್ತಿಯನ್ನು ಉಳಿಸಲು…ನಮ್ಮ ಮುಂದಿನ ಪೀಳಿಗೆಯ ಕಲ್ಯಾಣಕ್ಕಾಗಿ…. ನಾವು WAQF ಕಾಯಿದೆಯಲ್ಲಿ ಬದಲಾವಣೆ ತರಬೇಕಾಗಿದೆ .…. ಮತ್ತು ಇದಕ್ಕೆ ತಿದ್ದುಪಡಿ ಅಗತ್ಯವಿದೆ ಆದ್ದರಿಂದ, ಎಲ್ಲರೂ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಿ…. ಈ ಹೋರಾಟದ ಮೂಲಕ ನಾವು ಸರ್ಕಾರಕ್ಕೆ ಬಲ ತುಂಬೋಣ ಎಂದು ಕರೆಕೊಟ್ಟಿದ್ದಾರೆ.
ಬಿಜೆಪಿಯು ಯಾವುದೇ ಧರ್ಮದ ವಿರುದ್ದ ಇಲ್ಲ ಎಂದಿರುವ ಮನೋಜ್ ಮಂದಪ್ಪ ಅವರು ನಮ್ಮ ಪಕ್ಷವು ಸರ್ವ ಧರ್ಮ ಸಹಬಾಳ್ವೆಗೆ ಆದ್ಯತೆ ನೀಡುತ್ತದೆ. ಆದರೆ ಯಾರನ್ನೇ ಆದರು ಅತಿ ಓಲೈಕೆಯನ್ನು ವಿರೋಧಿಸುತ್ತೇವೆ. ಹಾಗಾಗಿ ಇದನ್ನು ಯಾವುದೋ ಒಂದು ಧರ್ಮದ ವಿರದ್ದದ ಹೋರಾಟ ಎಂದು ತಿಳಿಯದೆ, ಒಂದು ಅನಿಷ್ಟ ಕಾನೂನಿನ ವಿರುದ್ದದ ಹೋರಾಟ ಎಂಬುದನ್ನು ಅರ್ಥೈಸಿಕೊಂಡು, ಎಲ್ಲರೂ ಪಕ್ಷ, ಧರ್ಮ ಭೇದ ಬಿಟ್ಟು ಭಾಗವಹಿಸಲು ಕೋರಿದ್ದಾರೆ.
ಮುಂದಿನ ಚಳಿಗಾಲದ ಅದಿವೇಶನದಲ್ಲಿಯೇ ವಕ್ಫ್ ವಿರೋದಿ ಕಾಯ್ದೆ ಜಾರಿಯಾಗಬೇಕು ಎಂಬ ನಿಲುವು ನಮ್ಮದು. ಆ ಭರವಸೆ ಈಡೇರಬೇಕಾದರೆ ಸಾಮೂಹಿಕ ಸತ್ಯ್ರಾಗ್ರಹ ಅನಿವಾರ್ಯತೆ ಇದೆ. ಬಹಳಷ್ಟು ಜನರು, ನಾನಾ ಕಾರಣಗಳಿಂದ ಸಾರ್ವಜನಿಕವಾಗಿ ಕಾಣೀಸಿಕೊಳ್ಳಲು ಹಿಂಜರಿಯುತ್ತಾರೆ. ಆದರೆ ಅಂತವರಿಗೆ ಪ್ರಜ್ಞಾವಂತರು ಅರಿವು ಮೂಡಿಸುವ ಅನಿವಾರ್ಯತೆ ಇದೆ. ಜನರಲ್ಲಿ ಭಯ ಹೋಗಿಸಿ ಭರವಸೆ ಮತ್ತು ಸ್ಥೈರ್ಯ ತುಂಬ ಬೇಕಾಗಿದೆ. ಹಾಗಾಗಿ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕನೂ ಈ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ, ಅಸಾಯಕ ಜನರಲ್ಲಿ ಅಭಯ ಹುಟ್ಟಿಸುವ ಜೊತೆಗೆ, ಸರ್ಕಾರಕ್ಕೆ ಒತ್ತಡ ಹೇರಬೇಕಾಗಿದೆ ಎಂದು ಬಾಜಾಪಾ ರಾಜ್ಯ ಪ್ರಕೋಷ್ಟದ ಸದಸ್ಯರೂ ಆಗಿರುವ, ಜಿಲ್ಲಾ ಪ್ರಕೋಷ್ಟ ಸಂಯೋಜಕ ಅಪ್ಪನೆರವಂಡ ಮನೋಜ್ ಮಂದಪ್ಪ ಮನವಿ ಮಾಡಿದ್ದಾರೆ.