ಬೆಂಗಳೂರು,ನ.19: ಭಾರತೀಯ ಒಲಿಂಪಿಕ್ ಅಸೋಸಿಯೇಷನ್, ಅದೀನ ಸಂಸ್ಥೆಯ ಅಧೀನದಲ್ಲಿರುವ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಕೊಡಮಾಡುವ ವಾರ್ಷಿಕ ಪ್ರಷಸ್ತಿಗೆ, ಕೊಡಗು ಮೂಲದ ಹರ್ಡಲ್ಸ್ ಪಟು, ತೀತರಮಾಡ ಸಿಂಚಲ್ ಕಾವೇರಮ್ಮ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ, ವಿಧಾನ ಪರಿಷತ್ ಶಾಸಕ ಡಾ. ಕೆ. ಗೋವಿಂದರಾಜ್ ಅವರು ಘೋಷಿಸಿದ್ದಾರೆ.
ಪ್ರಶಸ್ತಿ ಸಮಾರಂಭವು 2024ರ ಡಿಸೆಂಬರ್ 1ರ ಭಾನುವಾರ, ಸಂಜೆ 05 ಘಂಟೆಗೆ ಬೆಂಗಳೂರಿನ, ಯುವನಿಕಾ, ಯುವ ಶಕ್ತಿ ಮತ್ತು ಕ್ರೀಡಾ ಇಲಾಖೆ, ನೃಪತುಂಗ ರಸ್ತೆ,ನಲ್ಲಿ ನಡೆಯಲಿದೆ. ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಮೂಲತಃ ಕೊಡಗಿನ, ನಲ್ಲೂರಿನವರಾದ ತೀತರಮಾಡ ರವಿ ಮತು ರಷ್ಮಿ( ತಾಮನೆ: ಕೈಕೇರಿ ಕುಪ್ಪಂಡ) ಅವರ ಮಗಳಾದ, ಸಿಂಚಲ್ ಕಾವೇರಮ್ಮ, ಚೀನಾದ ಹಾಂಗ್ಜೋನಲ್ಲಿ ನಡೆದ ಏಷ್ಯನ್ ಗೇಮ್ಸ್ನ 400 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ ಭಾಗಿ, 62ನೇ ಓಪನ್ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ 400 ಮೀ. ಹರ್ಡಲ್ಸ್ನಲ್ಲಿ ಚಿನ್ನದ ಪದಕ, ಪದಕ, 62ನೇ ನ್ಯಾಷನಲ್ ಇಂಟರ್-ಸ್ಟೇಟ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ, 400 ಮೀ. ಹರ್ಡಲ್ಸ್ನಲ್ಲಿ, ಇಂಟರ್ಸ್ಟೇಟ್ ದಾಖಲೆ ಮುರಿಯುವ ಮೂಲಕ ಬೆಳ್ಳಿ ಪದಕ, ಮಿಕ್ಸ್ಡ್ ರಿಲೇಯಲ್ಲಿ ಕಂಚಿನ ಪದಕ, ಬೆಂಗಳೂರಿನಲ್ಲಿ ನಡೆದ, 61ನೇ ಓಪನ್ ನ್ಯಾಷನಲ್ ಚಾಂಪಿಯನ್ಶಿಪ್ನ 400 ಮೀ. ಹರ್ಡಲ್ಸ್ನಲ್ಲಿ ಬೆಳ್ಳಿ, 4x 400 ರಿಲೇಯಲ್ಲಿ, ಕಂಚು, ಗುಜರಾತ್ನಲ್ಲಿ ನಡೆದ 36ನೇ ನ್ಯಾಷನಲ್ ಗೇಮ್ಸ್ನ 4×400 ಮೀ. ರಿಲೇಯಲ್ಲಿ ಕಂಚಿನ ಪದಕ, 400 ಮೀ. ಹರ್ಡಲ್ಸ್ನಲ್ಲಿ ಕಂಚು, ದೆಹಲಿಯಲ್ಲಿ ನಡೆದ, 23 ವರ್ಷದೊಳಗಿನ, 1ನೇ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ 400 ಮೀ. ಹರ್ಡಲ್ಸ್ನಲ್ಲಿ, 56.76 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ, ಈ ಸ್ಪರ್ಧೆಯಲ್ಲಿ ನಾಲಕನೇ ಅತೀ ವೇಗದ ಭಾರತೀಯ ಓಟಗಾರ್ತಿ ಎಂಬ ಧಾಖಲೆಯೊಂದಿಗೆ ಬೆಳ್ಳಿ ಪದಕ ಪಡೆದು, ಸಾಧನೆಯ ಹಾಧಿಯಲ್ಲಿದ್ದಾರೆ.