ಬೆಂಗಳೂರು, ನ.16: ( ವರದಿ: ವಿನೋದ್ ಜೆಸಿಬಿ): ಕರ್ನಾಟಕ ಮಿನಿ ಒಲಂಪಿಕ್‌ನ, ಹಾಕಿ ಸ್ಪರ್ಧೆಯಲ್ಲಿ ಹಾಕಿ ಕೂರ್ಗ್ ಬಾಲಕರ ತಂಡವು, ಸತತ ಮೂರು ಗೆಲವುಗಳೋಂದಿಗೆ, ಒಂದು ಲೀಗ್ ಪಂದ್ಯ ಉಳಿದಿರುವಂತೆಯೇ ಸೆಮಿ ಫೈನಲ್ ಪ್ರವೇಶಿಸಿದರೆ, ಬಾಲಕಿಯರ ತಂಡವು ಮೊದಲ ಪೈಪೋಟಿಯಲ್ಲೆ ವೀರಾಚಿತ ಸೋಲೊಪ್ಪಿಕೊಂಡಿದೆ.
ಬೆಂಗಳೂರಿನ, ಶಾಂತಿನಗರದಲ್ಲಿರುವ ಫಿ.ಮಾ. ಕಾರ್ಯಪ್ಪ ಹಾಕಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ, ಕರ್ನಾಟಕ ಮಿನಿ ಒಲಂಪಿಕ್ ಹಾಕಿ ಸ್ಪರ್ದೆಯಲ್ಲಿ, ಹಾಕಿ ಕೂರ್ಗ್ ಬಾಲಕರ ತಂಡ ಇಂದು ನಡೆದ ಹಾವೇರಿ ವಿರುದ್ದದ ಪಂದ್ಯದಲ್ಲಿ, 3-1 ಗೋಲುಗಳ ಅಂತರದಲ್ಲಿ ಗೆಲುವು ಸಾದಿಸುವುದರ ಮೂಲಕ, ಒಂದು ಲೀಗ್ ಬಾಕಿ ಇರುವಂತೆ ಸಮಿ ಪ್ರವೇಶ ಪಡೆದು ಕೊಂಡಿದೆ. ಇಂದಿನ ಪಂದ್ಯದಲ್ಲಿ ತಂಡದ ಪರವಾಗಿ ಜೋಯಪ್ಪ , ಪ್ರತಮ್ ಪೂವಯ್ಯ, ವೀರ ಕೌಟಿಲ್ಯ ತಲಾ ಒಂದೋಂದು ಗೋಲು ಗಳಿಸಿದರು. ನಾಳಿನ ಪಂದ್ಯದಲ್ಲಿ ಬೆಳಗಾವಿ ವಿರುದ್ಧ ಸೆಣಸಲಿದೆ.
ಇದಕ್ಕು ಮೊದಲು ನಿನ್ನೆ ನಡೆದ ಪಂದ್ಯದಲ್ಲಿ ಹಾಕಿ ಕೂರ್ಗ್ ಬಾಲಕರ ತಂಡ, ಬೆಂಗಳೂರು ವಿರುದ್ದದ ಪಂದ್ಯದಲ್ಲಿ 4-0 ಗೋಲುಗಳ ಅಂತರದಿಂದ ಗೆದ್ದಿತು. ನಿನ್ನೆಯ ಪಂದ್ಯದಲ್ಲಿ, ಪ್ರಜ್ವಲ್ ಪನ್ನಪ್ಪ, ಜೋಯಪ್ಪ, ಪ್ರಥಮ್ ಪೂವಯ್ಯ, ಬೋಪಣ್ಣ ಅವರುಗಳು ತಲಾ ಒಂದೊಂದು ಗೋಲು ದಾಖಲಿಸಿದ್ದರು. ನಾಳೆ ನಡೆಯಲಿರುವ ಕಡೇ ಲೀಗ್ ಪಂದ್ಯದಲ್ಲಿ ಕೊಡಗಿನ ಬಾಲಕರು ಬೆಳಗಾವಿ ವಿರುದ್ದ ಆಡಲಿದೆ.
ನಿನ್ನೆ ನಡೆದ ಬಾಲಕಿಯರ ಹಣಾಹಣಿಯಲ್ಲಿ, ಹಾಕಿ ಕೂರ್ಕ್ ಬಾಲಕಿಯರು, ಹಾಸನ ತಂಡದೆದುರು 0-1 ಗೋಲುಗಳಿಂದ ವೀರೋಚಿತ ಸೋಲೊಪ್ಪಿಕೊಂಡಿದ್ದಾರೆ.