ಕೊಡಗು ಜಿಲ್ಲಾ ಪಂಚಾಯತ್, ಉಪನಿರ್ದೇಶಕರು(ಖಾದಿ ಮತ್ತು ಗ್ರಾಮೊದ್ಯೋಗ), ಗ್ರಾಮೀಣ ಕೈಗಾರಿಕಾ ಇಲಾಖೆಯು, 2024-25ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಟೈಲರಿಂಗ್, ಪ್ಲಂಬರ್ & ಸ್ಯಾನಿಟರಿ, ಟೈಲ್ಸ್ ಫಿಟ್ಟರ್ ಮತ್ತು ಗಾರೆ ಕಸುಬಿನ ಪವರ್ ಉಪಕರಣಗಳನ್ನು ಪಡೆಯಲು ಗ್ರಾಮೀಣ ಪ್ರದೇಶದ ವೃತ್ತಿನಿರತ ಕುಶಲ ಕರ್ಮಿಗಳಿಂದ ಅರ್ಜಿ ಆಹ್ವಾನಿಸಿದೆ.
ವಿದ್ಯುತ್ ಚಾಲಿತ ಹೊಲಿಗೆಯಂತ್ರ(ಟೈಲರಿಂಗ್) ಪ್ಲಂಬರ್ & ಸ್ಕ್ಯಾನಿಟರಿ, ಸಿರಾಮಿಕ್ ಟೈಲ್ಸ್ ಫಿಟ್ಟರ್ ಮತ್ತು ಗಾರೆಕಸುಬಿನ ಉಪಕರಣ ಪಡೆಯಲು ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸತಕ್ಕದ್ದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ವಯೋಮಿತಿ :- 18-50 , ಪ್ಟಂಬರ್ & ಸ್ಕ್ಯಾನಿಟರಿ, ಟೈಲ್ಸ್ ಫಿಟ್ಟರ್ ಮತ್ತು ಗಾರೆಕೆಲಸ:- 18-60 ವರ್ಷ, ಒಂದು ಕುಟುಂಬಕ್ಕೆ ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿರುತ್ತದೆ. ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಉಪನಿರ್ದೇಶಕರು (ಖಾಗ್ರಾ), ಗ್ರಾಮೀಣ ಕೈಗಾರಿಕೆ ಕಛೇರಿಯಿಂದ ಈಗಾಗಲೇ ಹಿಂದಿನ 5 ವರ್ಷಗಳಲ್ಲಿ ಉಚಿತ ಸುಧಾರಿತ ಉಪಕರಣ ಪಡೆದಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಹವಿರುವುದಿಲ್ಲ.
ಆಸಕ್ತ ಅರ್ಹ ಅಭ್ಯರ್ಥಿಗಳು, ಪಾಸ್ ಪೋರ್ಟ್ ಗ್ರಾತದ ಭಾವಚಿತ್ರ. ಜಾತಿ ಪ್ರಮಾಣ ಪತ್ರ (SC ST, Minority) ಪಡಿತರ ಚೀಟಿ (ರೇಷನ್ ಕಾರ್ಡ್ ಪ್ರತಿ). ಮತದಾರರ ಗುರುತಿನ ಪ್ರತಿ. ವಿಕಲಚೇತನರಾಗಿದ್ದಲ್ಲಿ ದೃಢೀಕರಣ ಪತ್ರ ಸಲ್ಲಿಸುವುದು. ಆಯಾ ಗ್ರಾಮ ಪಂಚಾಯತಿಯ, ಪಂಚಾಯತಿ ಅಭಿವೃದ್ಧಿ ಅಧಿಕಾರಿ(P.D.O) ರವರಿಂದ ವೃತ್ತಿ ಮಾಡುತ್ತಿರುವ ಬಗ್ಗೆ ದೃಢೀಕರಣ. (ಟೈಲರಿಂಗ್, ಪ್ಲಂಬರ್-ಸ್ಮಾನಿಟರಿ, ಸಿರಾಮಿಕ್ ಟೈಲ್ಸ್ ಫಿಟ್ಟರ್ ಮತ್ತು ಗಾರೆ ಕಸುಬು ನಿಗಧಿತ ನಮೂನೆಯಲ್ಲಿ) ದಾಖಲಾತಿಗಳೊಂದಿಗೆ https://kodagu.nic.in ವೆಬ್ ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು(ಗ್ರಾ.ಕೈ) ರವರ ಕಛೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೊಹಿನೂರ್ ರಸ್ತೆ, ಮಡಿಕೇರಿ ರವರನ್ನು ಖದ್ದಾಗಿ ಅಥವಾ ದೂರವಾಣಿ ಸಂಖ್ಯೆ: 08272-228113. 9741453038 ಮೂಲಕ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.