ಮಡಿಕೇರಿ, ನ.15: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವ್ಯಾಪ್ತಿಗೆ ಬರುವ, ಕಾಫಿ ಬೆಳೆಗಾರರ ಪಂಪ್ ಸೆಟ್ ಗಳ ವಿದ್ಯುತ್ ಶುಲ್ಕ ಮರುಪಾವತಿ ಯೋಜನೆಗೆ, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.
ಯೋಜನೆಯನ್ನು ಪಡೆಯಲು, ಹತ್ತಿರದ ಸೆಸ್ಕಾಂ ಕಚೇರಿಗೆ ಭೇಟಿ ನೀಡಿ, ವಿದ್ಯುತ್ ಬಿಲ್ಲಿನಲ್ಲಿರುವ ಗ್ರಾಹಕರ ಐಡಿ (Consumer ID), ಗ್ರಾಹಕರ ಆಧಾರ್ ಕಾರ್ಡ್ (ಕಡ್ಡಾಯವಾಗಿ ಪ್ರೂಟ್ ಐಡಿಗೆ ನೋಂದಾವಣೆ ಆಗಿರಬೇಕು ಹಾಗೂ ಆರ್ ಟಿ ಸಿ ಯಲ್ಲಿ ಕಾಫಿ ಎಂದು ನೋಂದಾಯಿಸಿರಬೇಕು), ವಿದ್ಯುತ್ ಬಿಲ್ಲಿನಲ್ಲಿರುವ ಹೆಸರು ಹಾಗೂ ಆಧಾರ್ ನಲ್ಲಿರುವ ಹೆಸರು ಶೇಕಡ 40ರಷ್ಟು ಹೊಂದಾಣಿಕೆ ಆಗುವಂತಿರಬೇಕು, ವಿದ್ಯುತ್ ಬಿಲ್ಲಿಗೆ ಹೆಸರು ಹೊಂದಾಣಿಕೆ ಆಗದಿದ್ದಲ್ಲಿ 100 ರೂ, ಬಾಂಡ್ ಪೇಪರ್ ನಲ್ಲಿ ಅಪಿಡವಿಟ್, ಮೊಬೈಲ್ ನಂಬರ್, ದಾಖಲೆಗಳೊಂದಿಗೆ ನೋಂದಾಯಿಸಿಕೊಂಡು, ಸರ್ಕಾರದ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಇಲಾಖೆಯ ಪ್ರಕಟಣೆ ತಿಳಿಸಿದೆ.