ವಿರಾಜಪೇಟೆ, ನ.14 (ವಿನೋದ್ ಜೆಸಿಬಿ): ಫಿ.ಮಾ. ಕಾರ್ಯಪ್ಪ ಹಾಕಿ ಸ್ಟೇಡಿಯಂ, ಶಾಂತಿನಗರ, ಬೆಂಗಳೂರಿನಲ್ಲಿ ನಡೆಯುತ್ತಿರುವ, ಮೂರನೇ ಕರ್ನಾಟಕ ಮಿನಿ ಒಲಂಪಿಕ್ ಹಾಕಿಯಲ್ಲಿ, ಹಾಕಿ ಕೂರ್ಗ್, ಯುವಕರ ತಂಡವು ಶುಬಾರಂಭ ಮಾಡಿದೆ. ಇಂದು ನಡೆದ ಕಲ್ಬುರ್ಗಿ ತಂಡದ ವಿರುದ್ದದ ಪಂದ್ಯದಲ್ಲಿ, 09-0 ಗೋಲುಗಳ ಭಾರೀ ಅಂತರದ ಗೆಲುವನ್ನು ಪಡೆದುಕೊಂಡು ಮುನ್ನುಗ್ಗಿದೆ. ಇಂದಿ ಪಂದ್ಯದಲ್ಲಿ ಹಾಕಿ ಕೊಡಗು ಪರ, ಪ್ರಥಮ್ ಪೂವಯ್ಯ ಹಗೂ ಪ್ರೀತಮ್ ಅವರು ತಲಾ 02 ಗೋಲು ಹಾಕಿದರೆ, ಜೋಯಪ್ಪ, ಬೋಪಣ್ಣ, ರಿಶಿಕಾವೇರಪ್ಪ, ಪ್ರಜ್ವಲ್ ಪೊನ್ನಪ್ಪ, ದೈವಿಕ್ ಪೊನ್ನಣ್ಣ ಅವರುಗಳು ತಲಾ ಒಂದು ಗೋಲು ಭಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಹಾಕಿಕೂರ್ಗ್ ಯುವಕರ ತಂಡವು, ನಾಳಿನ ಪಂದ್ಯದಲ್ಲಿ ಹಾಕಿ ಬೆಂಗಳೂರು ತಂಡವನ್ನು ಎದುರಿಸಲಿದೆ. ಯುವತಿಯರ ತಂಡವೂ ನಾಳೆ ತನ್ನ ಮೊದಲ ಪಂದ್ಯವನ್ನು ಆಡಲಿದೆ.