ಶ್ರೀಮಂಗಲ, ನ.14(ವರದಿ: ಚೆಟ್ಟಂಗಡ ರವಿಸುಬ್ಬಯ್ಯ): ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಕ್ರೀಡೆಗಳಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಲಾಂಗ್ ಜಂಪ್ ಮತ್ತು ಫುಟ್ ಬಾಲ್ ನಲ್ಲಿ ಕಾವ್ಯ ವೈ. ಎಂ., ಫುಟ್ ಬಾಲ್ ನಲ್ಲಿ ರೂಪ ಪಿ. ಎ. ತೇಜಾ ಜೆ. ಆರ್. ಖೋ ಖೋ ದಲ್ಲಿ ನವಿತ.ಎಂ, ಶಿವು ಜೆ. ಎಂ, ನವೀನ್ ಪಿ. ಸಿ, ಕಾರ್ತಿಕ್ ಜೆ. ವಿ, ರಘು ಜೆ. ಬಿ, ಸಂತೋಷ್ ಪಿ. ಎಂ, ಸತೀಶ್ ಪಿ. ಸಿ, ವಿಜು ಪಿ. ಎ. ಅವರು ಆಯ್ಕೆಯಾಗಿದ್ದಾರೆ. ಇವರುಗಳು ರಾಜ್ಯ ಮಟ್ಟದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.