ಸೋಮಾವಾರಪೇಟೆ, ನ.10: ಸೋಮವಾರಪೇಟೆ ರೈತ ಹೋರಾಟ ಸಮಿತಿವತಿ ಯಿಂದ ಸಭೆಯನ್ನು, ದಿನಾಂಕ 11/11/2024ರ ಸೋಮವಾರ ಬೆಳಿಗ್ಗೆ 11.30 ಗಂಟೆಗೆ, ಒಕ್ಕಲಿಗರ ಸಮುದಾಯ ಭವನದ, ಶ್ರೀಗಂಧ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ರೈತರ ಹಲವು ಬೇಡಿಕೆಗಳ ಕುರಿತು, ಇಲ್ಲಿಯವರೆಗೂ ನಡೆದ ವಿದ್ಯಾಮಾನಗಳು ಹಾಗೂ C&D. ಗೊಂದಲದ ವಿಷಯವಾಗಿ, ಸುಪ್ರೀಂ ಕೋರ್ಟ್ನ ನೋಟಿಫಿಕೇಶನ್ ವಿರುದ್ಧ ನ್ಯಾಯಾಲಯಕ್ಕೆ ತುರ್ತುಗಿ ತಾಕರಾರು ಸಲ್ಲಿಸಬೇಕಾಗಿರುವುದರಿಂದ, ತಾಲೂಕಿನ ಎಲ್ಲಾ ಗ್ರಾಮದ ಅಧ್ಯಕ್ಸರು ಹಾಗೂ ಸಮಿತಿ ಸದಸ್ಯರುಗಳು ತಪ್ಪದೆ ಈ ಸಭೆಗೆ ಹಾಜರಾಗ ಬೇಕು, ಇಲ್ಲವಾದರೆ, ನ್ಯಾಯಲಯದ ಎದುರು ತಕರಾರು ಸಲ್ಲಿಸಲು ಗೊಂದಲ ಆಗಲಿದ್ದು, ಈ ಸಭೆಗೆ ಹಾಜರಾಗದ ಗ್ರಾಮಗಳನ್ನು ಹೊರತು ಪಡಿಸಿ, ಸುಪ್ರೀಂ ಕೋರ್ಟ್‌ನಲ್ಲಿ ತಾಕರಾರು ಸಲ್ಲಿಸಬೇಕಾಗುತದೆ. ಅದುದ್ದರಿಂದ ಎಲ್ಲಾ ಗ್ರಾಮದ ಪ್ರತಿನಿಧಿಗಳು ತಪ್ಪದೆ ಹಾಜರಾಗಬೇಕೆಂದು ತಾಲೂಕು ರೈತ ಹೋರಾಟ ಸಮಿತಿ ಮನವಿ ಮಾಡಿದೆ.