Site icon nadubadenews.com

7 ಅಂತರಾಷ್ಟ್ರೀಯ ಡ್ರಗ್ ಫೆಡ್ಲರ್ ಗಳ ಬಂಧಿಸಿದ ಕೊಡಗು ಪೋಲಿಸರಿಗೆ, ಜಿಲ್ಲೆಯ ಅಭಿನಂದನೆ…       

7 ಅಂತರಾಷ್ಟ್ರೀಯ ಡ್ರಗ್ ಫೆಡ್ಲರ್ ಗಳ ಬಂಧಿಸಿದ ಕೊಡಗು ಪೋಲಿಸರಿಗೆ, ಜಿಲ್ಲೆಯ ಅಭಿನಂದನೆ…       
Spread the love
7 ಅಂತರಾಷ್ಟ್ರೀಯ ಡ್ರಗ್ ಫೆಡ್ಲರ್ ಗಳ ಬಂಧಿಸಿದ ಕೊಡಗು ಪೋಲಿಸರಿಗೆ, ಜಿಲ್ಲೆಯ ಅಭಿನಂದನೆ…       
ಗಾಂಜ ಗಿಡ, ಸಾಂದರ್ಭಿಕ ಚಿತ್ರ, ಚಿತ್ರ ಕೃಪೆ ಗೂಗಲ್

ವಿರಾಜಪೇಟೆ, ಅ.2: (ವರದಿ: ಕರಿನೆರವಂಡ ಡ್ಯಾನಿಕುಶಾಲಪ್ಪ) ಥೈಲ್ಯಾಂಡ್ ದೇಶದಿಂದ ದುಬೈ ಮತ್ತು ಕೇರಳಕ್ಕೆ ತನ್ನ ಸಹಚಾರರೊಂದಿಗೆ ಹೈಡ್ರೋ ಗಾಂಜಾವನ್ನು  ಸಾಗಿಸುತ್ತಿದ್ದ ಡ್ರಗ್ ಪೆಡ್ಲರ್,‌  ಆತನ ಆರು ಸಹಚಾರರನ್ನು  ಕೂಡ ಕೊಡಗು ಪೊಲೀಸ್  ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.   ನಾಪೋಕ್ಲು, ವಿರಾಜಪೇಟೆ ನಿವಾಸಿಗಳೇ  ಈ ಡ್ರಗ್ ಪೆಡ್ಲರನ ಸಹಚರರಾಗಿದ್ದದ್ದು ದುರಂತ.     

ಪಿ.ಸಿ.ಐ.ನಿಂದ ಸ್ಕ್ಯಾಡ್‌ ಸರ್ಟಿಫೈಡ್‌ ನಡುಬಾಡೆ ನ್ಯೂಸ್‌ಗೆ ಸುದ್ದಿ ಮತ್ತು ಜಾಹಿರಾತನ್ನ ನೀಡಿ…

ಈ ಕುರಿತು ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಕೆ. ರಾಮರಾಜನ್ ನೀಡಿದ್ದಾರೆ.                

          ನಾಪೋಕ್ಲು ವಿನ ಅಕಿನಾಸ್ ಎಂ ಎನ್, ರಿಯಾಜ್ ಪಿ. ಎಂ, ವಿರಾಜಪೇಟೆಯ ವಾಜಿದ್ ಸಿ.ಇ, ನಾಪೋಕ್ಲುವಿನ ಯಾಹ್ಯ ಸಿ.ಎಚ್, ವಿರಾಜಪೇಟೆಯ ನಾಸೂರುದ್ದೀನ್ ಎಂ. ಯು, ರಾಹುಫ್ ಎಂ. ಎ, ಪ್ರಕರಣದ ಕೇಂದ್ರ ಬಿಂದು ಕಾಸರಗೋಡು ಜಿಲ್ಲೆಯ ಮೆಹರೂಫ್ ಕೆ. ಎ.           

ಕೊಡಗಿನ ದಕ್ಷ ಪೊಲೀಸ್‌ ವರಿಷ್ಟಾಧಿಕಾರಿ, ಕೆ. ರಾಮರಾಜನ್

ಥಾಯ್ಲ್ಯಾಂಡ್ ದೇಶದ ಬ್ಯಾಂಕಾಕ್ ನಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಮೆಹರೂಫ್ ಎಂಬಾತ ಕೆಫೆ ಒಂದನ್ನು ಇಟ್ಟುಕೊಂಡಿದ್ದು ಆತನಿಂದ ವಿರಾಜಪೇಟೆಯ ರಾಹುಫ್ 23.92024ರಂದು ವಿಮಾನದ ಮೂಲಕ ಥೈಲ್ಯಾಂಡ್ ನಿಂದ ಬೆಂಗಳೂರಿಗೆ ಹೈಡ್ರೋ ಗಾಂಚವನ್ನು ತಂದು ತನ್ನ ಇತರ ಸಹಚಾರರೊಂದಿಗೆ ಮೈಸೂರು ಗೋಣಿಕೊಪ್ಪಕ್ಕೆ ಬೆಳಗಿನ ಜಾವ ಆಗಮಿಸಿ ಗೋಣಿಕೊಪ್ಪಲಿನ ಬೆಳ್ಳಿಯಪ್ಪ ರೆಸಿಡೆನ್ಸಿ ಯಲ್ಲಿ ಕೆಲವರು ತಂಗಿ ನಂತರ ಇತರ ಸಹಚರು ಮಡಿಕೇರಿಯತ್ತ ಗಾಂಜಾ ಸಹಿತ  ತೆರಳುತ್ತಿದ್ದ ಸಂದರ್ಭ ಖಚಿತ ಮಾಹಿತಿ ತಿಳಿದ ಡಿ.ಸಿ.ಆರ್.ಬಿ ಪೊಲೀಸ್ ತಂಡ ಜಿಲ್ಲಾ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಂತೆ ಬಂಧಿಸಿ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.

ಪ್ರಕರಣದ ಮುಖ್ಯ ರೂವಾರಿ ಮೆಹರೂಫ್ ಕೊಚ್ಚಿನ್ ಮೂಲಕ ಬ್ಯಾಂಕಾಕಿಗೆ ವಿಮಾನದ ಮೂಲಕ ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಅಲ್ಲಿನ ಪೊಲೀಸ್ ಕಮಿಷನರ್ ಅವರ ಸಹಕಾರದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಅನುಪ್ ಮೇದಪ್ಪ ಅವರ ತಂಡ ಸೆಪ್ಟೆಂಬರ್ 29ರಂದು ರಾತ್ರಿ 10:30 ಗಂಟೆಗೆ ಬಂಧಿಸಿ ಕೊಡಗಿಗೆ ಕರೆ ತಂದಿದ್ದಾರೆ.

ಕಾರ್ಯಾಚರಣೆಯ ರುವಾರಿ, ಪೆಮ್ಮಚಂಡ ಅನುಪ್‌ ಮಾದಪ್ಪ

ಅಂತರಾಷ್ಟ್ರೀಯ ಮಟ್ಟದ ಈ ದಂಧೆಯಲ್ಲಿ ಕೊಡಗು ಜಿಲ್ಲೆಯ ನಾಪೋಕ್ಲು ಹಾಗೂ ವಿರಾಜಪೇಟೆ ತಾಲೂಕಿನ ಆರು ಮಂದಿ ಬಾಗಿಗಳಾಗಿದ್ದು ಕೊಡಗು ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಹಲವರು  ಬೇರೆ ಬೇರೆ ಚಟುವಟಿಕೆಗಳಲ್ಲಿ  ಭಾಗಿಗಳಾಗಿದ್ದಾರೆ ಎಂಬ ಸಂದೇಹಗಳು ಮೂಡಿವೆ. ಈ ಹಿನ್ನಲೆಯಲ್ಲಿ  ಜಿಲ್ಲೆಯ ಜನತೆಯಲ್ಲಿ ಇದೀಗ ಈ ಪ್ರಕರಣ  ಆತಂಕ ಮೂಡಲು ಕಾರಣವಾಗಿದೆ ಆದರೂ  ಜಿಲ್ಲಾ ಪೋಲೀಸರ ಸಮಯೋಚಿತ ಕಾರ್ಯಾಚರಣೆಯನ್ನು ಮುಖ್ತವಾಗಿ ಶ್ಲಾಗಿಸಿದ್ದಾರೆ.

ಆರೋಪಿಗಳೊಂದಿಗೆ, ಕೊಡಗು ಪೊಲೀಸ್‌ ತಂಡ
Exit mobile version