https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
25ಲಕ್ಷದಲ್ಲಿ ನಿರ್ಮಿಸಿದ, ಕರಡ ಮಲೆತಿರಿಕೆ ದೇವಳ ರಸ್ತೆ ಉದ್ಘಾಟಿಸಿದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ

25ಲಕ್ಷದಲ್ಲಿ ನಿರ್ಮಿಸಿದ, ಕರಡ ಮಲೆತಿರಿಕೆ ದೇವಳ ರಸ್ತೆ ಉದ್ಘಾಟಿಸಿದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ

News, Informatin , Enteetinement and Advertisement
16/02/202516/02/2025nadubadenews@gmail.com1 Comment on 25ಲಕ್ಷದಲ್ಲಿ ನಿರ್ಮಿಸಿದ, ಕರಡ ಮಲೆತಿರಿಕೆ ದೇವಳ ರಸ್ತೆ ಉದ್ಘಾಟಿಸಿದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ
Spread the love
25ಲಕ್ಷದಲ್ಲಿ ನಿರ್ಮಿಸಿದ, ಕರಡ ಮಲೆತಿರಿಕೆ ದೇವಳ ರಸ್ತೆ ಉದ್ಘಾಟಿಸಿದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ

ಪಾಲಂಗಾಲ, ಫೆ.16: (ಕರಿನೆರವಂಡ ಡ್ಯಾನಿ ಕುಶಾಲಪ್ಪ) ವಿರಾಜಪೇಟೆ ತಾಲೂಕು ಕಡಿಯತ ನಾಡ್‌ನ ಇತಿಹಾಸ ಪ್ರಸಿದ್ಧ ಕರಡ ಮಲೆತಿರಿಕೆ ದೇವಾಲಯಕ್ಕೆ ತೆರಳುವ ರಸ್ತೆಯನ್ನು ಶಾಸಕರ ವಿಶೇಷ ಕಾಳಜಿಯಲ್ಲಿ, 25 ಲಕ್ಷ ಅನುದಾನದ  500 ಮೀಟರ್ ಕಾಂಕ್ರೀಟ್ ರಸ್ತೆ ಪೂರ್ಣಗೋಮಡಿದ್ದು, ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ದಿನಾಂಕ 14/02/2025 ರಂದು, ಸದರಿ ರಸ್ತೆಯನ್ನು ಲೋಕಾರ್ಪಣೆ  ಮಾಡಿದರು.    

ಕಳೆದ ವರ್ಷ ಮಾನ್ಯ ಶಾಸಕರು ಈ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ರಸ್ತೆಯ ಅಭಿವೃದ್ಧಿಗಾಗಿ ಬೇಡಿಕೆಯನಿಟ್ಟಿದ್ದರು. ಮನವಿಗೆ ಸ್ಥಳದಲ್ಲೇ ಸ್ಪಂದಿಸಿದ  ಶಾಸಕರು ಮುಂದಿನ ವಾರ್ಷಿಕ ಹಬ್ಬದ ಒಳಗಾಗಿ, ರಸ್ತೆಯ ಅಭಿವೃದ್ಧಿ ಮಾಡಿಸುವುದಾಗಿ ವಾಗ್ದಾನ ಮಾಡಿದ್ದರು.     ಅದರಂತೆ ಇಂದು ಈ ರಸ್ತೆಯ ಉದ್ಘಾಟನೆಯನ್ನು ಮಾಡಿ, ಶ್ರೀ ದೇವರ ಆಶೀರ್ವಾದವನ್ನು ಪಡೆದ ಮಾನ್ಯ ಶಾಸಕರು, ಅತ್ಯಂತ ಪ್ರಸಿದ್ಧ ಹಾಗೂ ಶಕ್ತಿಶಾಲಿಯಾದ ಮಲೆತಿರಿಕೆ ಮಾದೇವನು ನಾಡಿಗೆ ಒಳಿತು ಮಾಡಲಿ ಎಂದು ಸಂದರ್ಭದಲ್ಲಿ ಆಶಿಸಿದರು.

ಈ ಸಂದರ್ಭದಲ್ಲಿ   ಕರಡ ಈಶ್ವರ ಭಗವತಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರಾದ ಎನ್.ಎಂ ಸೋಮಯ್ಯ, ನಾಪೋಕ್ಲು ಬ್ಲಾಕ್ ಅದ್ಯಕ್ಷರಾದ ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ವಿನೋದ್ ನಾಣಯ್ಯ ಕರಡ ಭೂತ್ ಅಧ್ಯಕ್ಷರಾದ ಐತೀಚಂಡ ಪ್ರಕಾಶ್, ಕೆಡಿಪಿ ಸದಸ್ಯರಾದ ಮಾಳೇಟಿರ ಪ್ರಶಾಂತ್ ಉತ್ತಪ್ಪ, ಬಾಚಮಂಡ ಲವ ಚಿಣ್ಣಪ್ಪ, ವಲಯ ಕಾಂಗ್ರೆಸ್ ಕೆದಮುಳ್ಳೂರು ಅದ್ಯಕ್ಷರಾದ ಎನ್. ಎಸ್. ಮಹೇಶ್ ಪಾಲಂಗಾಲ ಭೂತ್ ಅಧ್ಯಕ್ಷರಾದ ಜಾಲು  ಚಂಗಪ್ಪ, ಡಿಸಿಸಿ ಸದಸ್ಯರಾದ ಮಣಿ ಅಯ್ಯಮ್ಮ , ಗುತ್ತಿಗೆದಾರರಾದ ಕೆೋಡೀರ ವಿನೋದ್, ಬೇಪಡಿಯಂಡ ಬಿದ್ದಪ್ಪ ಮೇದುರ ಗಣು  ಕುಶಾಲಪ್ಪ ಹಾಗೂ ಪಾಲಂಗಾಲ ಕರಡ ಗ್ರಾಮಸ್ಥರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Post navigation

ಕೊಡಗು ವಿವಿ ಉಳಿಸಿ ಹೋರಾಟದ ಪೂರ್ವಭಾವಿ ಸಭೆ ಇಂದು ಸಂಜೆ…
ಸನ್ಮಾನಗಳು ಯುವ ಜನರಿಗೆ ಪ್ರೇರಣೆಯಾಗಲಿ: ಕಾಟಿಮಾಡ ಜಿಮ್ಮಿ ಅಣ್ಣಯ್ಯ

Related Posts

ಬಾಂಗ್ಲಾ ನುಸುಳುಕೋರರು ಸೇರಿದಂತೆ, ಕೊಡಗಿನ ಹಲವು ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಗೃಹಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಯದುವೀರ್  ಒಡೆಯರ್

ಬಾಂಗ್ಲಾ ನುಸುಳುಕೋರರು ಸೇರಿದಂತೆ, ಕೊಡಗಿನ ಹಲವು ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಗೃಹಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಯದುವೀರ್  ಒಡೆಯರ್

15/07/202515/07/2025nadubadenews@gmail.com
ಗರ್ವಾಲೆ ಅಂಗನವಾಡಿ ಮೇಲೆ ಬಿದ್ದ ಮರ, ಕ್ಷಣಗಳಲ್ಲಿ  ತಪ್ಪಿದ ಭಾರೀ ಅನಾಹುತ

ಗರ್ವಾಲೆ ಅಂಗನವಾಡಿ ಮೇಲೆ ಬಿದ್ದ ಮರ, ಕ್ಷಣಗಳಲ್ಲಿ  ತಪ್ಪಿದ ಭಾರೀ ಅನಾಹುತ

08/07/202508/07/2025nadubadenews@gmail.com
ಪ್ರತೀ ಬೂಧವಾರ ಕೊಡಗು ವೈದ್ಯಕೀಯ ಆಸ್ಪತ್ರೆಯಲ್ಲಿ  ನೆಫ್ರೋಲಜಿ ತಜ್ಞ ವೈದ್ಯರು ಲಭ್ಯ

ಪ್ರತೀ ಬೂಧವಾರ ಕೊಡಗು ವೈದ್ಯಕೀಯ ಆಸ್ಪತ್ರೆಯಲ್ಲಿ  ನೆಫ್ರೋಲಜಿ ತಜ್ಞ ವೈದ್ಯರು ಲಭ್ಯ

19/06/202519/06/2025nadubadenews@gmail.com

1 thought on “25ಲಕ್ಷದಲ್ಲಿ ನಿರ್ಮಿಸಿದ, ಕರಡ ಮಲೆತಿರಿಕೆ ದೇವಳ ರಸ್ತೆ ಉದ್ಘಾಟಿಸಿದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ”

  1. Click here says:
    17/02/2025 at 1:45 am

    Great web site you have got here.. It’s hard to find high quality writing like yours nowadays.

    I seriously appreciate people like you! Take care!!

    Reply

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version