ಪೊನ್ನಂಪೇಟೆ, ಮೇ.20 (Nadubade News): ಕೊಡಗು ಪತ್ರಕರ್ತರ ಸಂಘ ಪೊನ್ನಂಪೇಟೆ ಘಟಕದ ಸಹಯೋಗದಲ್ಲಿ ಬಹುಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ರಚಿಸಿರುವ ನೀಲಾ ನಿಲಯ ಕಾದಂಬರಿ ಬಿಡುಗಡೆ ಕಾರ್ಯಕ್ರಮ 23/5/2025 ರಂದು ಪೊನ್ನಂಪೇಟೆಯ ಪತ್ರಿಕಾ ಭವನದಲ್ಲಿ ಪೂರ್ವಾಹ್ನ 10.30 ಗಂಟೆಗೆ ಪತ್ರಕರ್ತರ ಸಂಘ ಪೊನ್ನಂಪೇಟೆ ಘಟಕದ ಅಧ್ಯಕ್ಷರಾದ ಕಿರಿಯಮಾಡ ರಾಜಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪುಸ್ತಕ ದಾನಿಗಳಾದ ಶ್ರೀಮತಿ ಕಂಗಂಡ ಶಶಿ ಮಂದಣ್ಣ ಶ್ರೀಮತಿ ಅಪ್ಪಚಂಗಡ ಲಲಿತಾ ಮೋಟಯ್ಯ , ಶ್ರೀಮತಿ ವಿದ್ಯಾ ನಾರಾಯಣ ಇವರುಗಳು ಕೃತಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಶಿಕ್ಷಕಿ, ಸಾಹಿತಿ, ಕವಯಿತ್ರಿ ಆಗಿರುವ, ಶ್ರೀಮತಿ ವತ್ಸಲ ಶ್ರೀಶ ಅವರು ಕೃತಿ ವಿಮರ್ಶೆ ಮಾಡಲಿದ್ದಾರೆ. ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಆಯೋಜಕರು ಕೋರಿದ್ದಾರೆ.