ಯಾವುದೇ ಪದವಿ ಪಡಿಯದ ರೈತ ಪ್ರಕೃತಿಯ ಎಲ್ಲಾ ಜ್ಞಾನವನ್ನೂ ಸಂಪಾದಿಸಿ, ಇಂದಿನ ಸಮಾಜಕ್ಕೆ ಮಾದರಿಯಾಗಿದ್ದಾನೆ. ಅಂತ ಶಿಕ್ಷಣದ ಅವಶ್ಯಕತೆ ಇಂದಿನ ವಿದ್ಯಾರ್ಥಿಗಳಿಗಿದೆ: ರೆ.ಫಾ. ಎಡ್ವರ್ಡ್ ವಿಲಿಯಮ್ ಸಲ್ಡಾನ ಪ್ರತಿಪಾದನೆ
ವಿರಾಜಪೇಟೆ,ಡಿ.21: (ಕಿಶೋರ್ ಕುಮಾರ್ ಶೆಟ್ಟಿ) ರೈತ ಎಂದಿಗೂ ಪದವಿ ಕಲಿತವನಲ್ಲ ಅದರೇ ಪ್ರಾಕೃತಿಕವಾಗಿ ಜ್ಞಾನವನ್ನು ಸಂಪಾದಿಸಿದ್ದಾನೆ. ಇಂದಿನ ಸಮಾಜದ ಸರ್ವ ನಡೆನುಡಿಗೂ ರೈತನೇ ಮಾದರಿ, ರೈತನೇ ಆಧಾರ. ಅಂತಹ ಪ್ರಾಕೃತಿದತ್ತ ಜ್ಞಾನ ಸಂಪಾದನೆಗೆ ಎಲ್ಲರೂ ಗಮನಹರಿಸಬೇಕೆಂದು ಎಂ.ಡಿ.ಇ.ಎಸ್. ಮೈಸೂರು ಕಾರ್ಯದರ್ಶಿಗಳಾದ ರೆ.ಫಾ. ಎಡ್ವರ್ಡ್ ವಿಲಿಯಮ್ ಸಲ್ಡಾನ ಅವರು ಅಭಿಪ್ರಯಾಪಟ್ಟರು.
ವಿರಾಜಪೇಟೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವದಲ್ಲಿ ಪ್ರಾಸ್ತಾವಿಕ ಮಾತನಾಡಿದ ಅವರು, ವಿದ್ಯೆ ಇರುವುದು ಹೊಟ್ಟೆಪಾಡಿಗಾಗಿ, ಪದವಿ, ಮತ್ತುಸ್ನಾತ್ತಕೊತ್ತರ ಪದವಿಗಳನ್ನು ಪಡೆಯುವುದು ಗಳಿಕೆಗಾಗಿ ಮತ್ತು ಉತ್ತಮ ಜೀವನ ನಿರ್ವಾಹಣೆಗಾಗಿ ಎಂದು ತಿಳಿಯುವುದು ತಪ್ಪು. ಬದಲಿಗೆ ವಿದ್ಯಾವಂತರಾಗಲು ಮತ್ತು ಸುಸಂಸ್ಕೃತರಾಗಲು ಎಂದು ತಿಳಿಯಬೇಕು. ಪೊಷಕರು ಇಂದು ಮಕ್ಕಳ ಮೇಲೆ ವಿದ್ಯಾರ್ಜನೆಗಾಗಿ ಬಂಡವಾಳ ಹೂಡಿಕೆ ಮಾಡುತ್ತಾ ಹಲವು ಕಸನುಗಳನ್ನು ಕಾಣುತಿದ್ದಾರೆ. ಅದರೇ ಶಿಕ್ಷಣ ಪಡೆದ ಯುವಕ ಯುವತಿಯರು ಪದವಿಗೆ ತಕ್ಕ ಉದ್ಯೋಗ ದೋರಕದೇ ಕಂಗಾಲಾಗಿದ್ದಾರೆ. ಪೊಷಕರು ಮಕ್ಕಳ ಮೇಲೆ ಹೂಡಿಕೆ ಮಾಡುವ ಬದಲು, ಬದುಕು ನಡೆಸುವ ಜ್ಞಾನವನ್ನು ವಿನಿಯೋಗ ಮಾಡಬೇಕು. ಎಂದು ಹೇಳಿದರು.
ಶಿಕ್ಷಣ ಸಂಸ್ಥೆಗಳು ಜ್ಞಾನರ್ಜನೆಗೆ ಬಂದ ವ್ಯಕ್ತಿಗೆ ವಿದ್ಯಾರ್ಜನೆಗೈದು ಸುಸಂಸ್ಕೃತರನ್ನಾಗಿ ಮಾಡುತ್ತದೆ. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಉತ್ತಮ ವಿದ್ಯಾರ್ಥಿಯನ್ನು ಕೊಡಗೆಯಾಗಿ ನೀಡುತ್ತದೆ. ಎಂದು ಮೈಸೂರು ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾದಿಕಾರಗಳು, ಪ್ರಧಾನ ಧರ್ಮಗುರುಗಳಾದ ಡಾ. ಬರ್ನಾಡ್ ಮೋರಸ್ ಅವರು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಗುರುಗಳು, ಮನುಜನಿಗೆ ಗ್ರಹಿಸಲು ಜ್ಞಾನಿಸಲು ಶಿಕ್ಷಣ ಬಹುಮುಖ್ಯವಾಗಿದೆ. ಶಿಕ್ಷಿತರೇ ಇಂದು ಭ್ರಷ್ಟಚಾರದಂತ ಕೃತ್ಯಗಳಲ್ಲಿ ಭಾಗಿಗಳಾಗಿ ಸಮಾಜಕ್ಕೆ ಮಾರಕವಾಗಿದ್ದಾರೆ. ತಮ್ಮ ಜೀವನಕ್ಕೆ ಅಧ್ಯಾತ್ಮಿಕ ಮೌಲ್ಯಗಳನ್ನು ಒಳಪಡಿಸಿಕೊಂಡು ಮಾನವನಾಗಿ ಜೀವಿಸಲು ಕಲಿಯಬೇಕು. ಪ್ರತಿಯೋಬ್ಬನೂ ಶಿಕ್ಷೀತನಾದಲ್ಲಿ ಮಾತ್ರ ಉತ್ತಮ ಸಮಾಜದ ರೂಪಿಸಿಲು ಸಾದ್ಯ, ಈ ನಿಟ್ಟನಲ್ಲಿ ಮೈಸೂರು ಧರ್ಮ ಕೇಂದ್ರಕ್ಕೆ ಒಳಪಟ್ಟಿರುವ ಸಂತ ಅನ್ನಮ್ಮ ವಿದ್ಯಾ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಸೃಷ್ಟಿಸಿದೆ. ಇಲ್ಲಿ ವಿದ್ಯಾಬ್ಯಾಸ ಪಡೆದ ಮಕ್ಕಳು ಸಮಾಜದಲ್ಲಿ ಉನ್ನತ ಸ್ಥರಗಳಲ್ಲಿ ಗುರುತಿಸುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಶಾಂತಿಯ ಸಂಕೇತವಾದ ಪಾರಿವಾಳಗಳನ್ನು ಹಾರಿಬಿಟ್ಟು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ, ಅರಮೇರಿ ಕಳಂಚೇರಿ ಮಠದ ಪಿಠಾಧಿಪತಿಗಳಾದ ಶ್ರೀ,ಶ್ರೀ,ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಶತಮಾನಗಳಿಂದ ಗ್ರಾಮೀಣ ಭಾಗದಲ್ಲಿ ಶಿಕ್ಷಣವನ್ನು ಪೂರೈಸಿಕೊಂಡು ಬರುತ್ತಿರುವ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ಕಾರ್ಯವೈಖರಿ ಸಮಾಜದಲ್ಲಿ ಪ್ರಚಲಿತದಲ್ಲಿದೆ. ಶಿಕ್ಷಣ ಮತ್ತು ಸಂಸ್ಕಾರದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾದ್ಯ, ನಾವುಗಳು ಗಳಿಸುವ ಶಿಕ್ಷಣ ಸೇವಾ ಮನೋಭಾವದ ಕಾರ್ಯಕ್ಕೆ ವಿನಿಯೋಗವಾಗಬೇಕು, ಪ್ರಸ್ತುತ ಮಾದ್ಯಮಗಳಲ್ಲಿ ಕೊಲೆ ಸುಲಿಗೆ, ಅಪರಾಧ ಕೃತ್ಯಗಳನ್ನು ಕಾಣುತಿದ್ದೇವೆ. ಇದರಲ್ಲಿ ಭಾಗಿಗಳಾಗುವವರು ಶಿಕ್ಷೀತರಾಗಿದ್ದಾರೆ, ಇದು ಸಮಾಜಕ್ಕೆ ಅಪಾಯಕಾರಿ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಶಿಕ್ಷಣವು ಗಳಿಕೆಗೆ ಮಾತ್ರ ಸೀಮಿತವಾಗದೆ, ಸಮಾಜದ ಸೇವೆಗೆ ಉಪಯುಕ್ತವಾದಲ್ಲಿ ಮಾತ್ರ ಸುಂದರ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ವಿರಾಜಪೇಟೆ ವೃತ್ತ ನಿರೀಕ್ಷಕರಾದ ಅನೋಪ್ ಮಾದಪ್ಪ ಮಾತನಾಡಿ ವಿದ್ಯಾರ್ಥಿಗಳು ಮಾದಕ ದ್ರವ್ಯ ಉಪಯೋಗಕ್ಕೆ ಬಲಿಯಾಗಬಾರದು. ವಾಹನ ಚಾಲನೆಯಲ್ಲಿ ನಿಯಮಗಳನ್ನು ಪಾಲಿಸುವಂತರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಎಲ್.ಕೆ.ಜಿಯಿಂದ ಪದವಿ, ಸ್ನಾತ್ತಕೊತ್ತರ ಪದವಿಯವರೆಗಿನ ಶೈಕ್ಷಣಿಕ ವರ್ಷದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದ ವೇದಿಕೆಯಲ್ಲಿ ಪರಸಭೆಯ ಅದ್ಯಕ್ಷರಾದ ದೇಚಮ್ಮ ಕಾಳಪ್ಪ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಬಿಂದು, ಸಂತ ಅನ್ನಮ್ಮ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಮತ್ತು ಸಹಾಯಕ ಧರ್ಮಗುರುಗಳಾದ ರೆ.ಫಾ. ಮುದಲೈ ಮುತ್ತು, ಪ್ರಧಾನ ಧರ್ಮಗುರುಗಳಾದ ರೆ.ಫಾ. ಜೇಮ್ಸ್ ಡೊಮಿನಿಕ್, ಪದವಿ ಕಾಲೇಜಿನ ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ, ಪ್ರೌಢಶಾಲೆಯ ಪ್ರಾಂಶುಪಾಲರಾದ ಬೆನ್ನಿ, ಪ್ರಾಥಮಿಕ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಐಡಾ, ಮತ್ತು ಸಿಸ್ಟರ್ ರೋಸಿ, sಸಂತ ಅನ್ನಮ್ಮ ಪಾಲಕ ಮತ್ತು ಶಿಕ್ಷಕರ ಸಂಘದ ಉಪದ್ಯಕ್ಷರಾದ ಜೋಕಿಂ ರೋಡ್ರಿಗಸ್, ಡಿ.ಸಿ.ಸಿ ಹಾಗೂ ಕೆ.ಡಿ.ಪಿ ಸದಸ್ಯರಾದ ಮರ್ವಿನ್ ಲೋಬೋ ಉಪಸ್ಥಿತರಿದ್ದರು.
ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರುಗಳಾದ ರೆ.ಫಾ. ಜೇಮ್ಸ್ ಡೊಮಿನಿಕ್ ಅವರು ಸರ್ವರನ್ನು ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ. ಹೇಮಂತ್ ಅವರು ವಂದಿಸಿದರು.
ಸಂತ ಅನ್ನಮ್ಮ ವಿದ್ಯಾ ಸಂಸ್ಥೆಗಳ ಶಿಕ್ಷಕರು, ಉಪನ್ಯಾಸಕರು, ಸೇರಿದಂತೆ ವಿದ್ಯಾರ್ಥಿಗಳು, ಪೊಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಹಾಜರಿದ್ದರು.