
ಬೆಂಗಳೂರು, ಜು.13;(nadubadenews): ರಾಷ್ಟ್ರೀಯ ಹೆಲ್ತ್ ಮಿಷನ್ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ 8 ತಾಲೂಕುಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ಥಾವನೆ ಸಲ್ಲಿಸಲಾಗಿದ್ದು, ಈ ಪಟ್ಟಿಯಲ್ಲಿ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಪ್ರಾಥಮಿಕ ಆರೋಗ್ಯ ಸೇರಿದೆ.
2025/26ನೇ ಸಾಲಿನ ಆಯವ್ಯಯ ಕಂಡಿಕೆ 138 ರನ್ವಯ ಹೊಸದಾಗಿ ಘೋಷಣೆಯಾಗಿರುವ ತಾಲೂಕುಗಳ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸುವ/ಸ್ಥಾಪಿಸುವ ಕುರಿತಾಗಿ ಘೋಷಿಸಲಾಗಿದ್ದು, ಆಯವ್ಯಯ ಘೋಷಣೆಯಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತಿಕರಿಸುವ ಪರಿಕಲ್ಪನೆ ಬದಲಿಗೆ ನಾನ್ ಎಫ್.ಆರ್.ಯು.ಸಿ.ಹೆಚ್.ಸಿ(Block PHC) ಯನ್ನಾಗಿ ಉನ್ನತೀಕರಿಸಲು ಅಸ್ತಿತ್ವದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳನ್ನು ಉಪಯೋಗಿಸಿಕೊಳ್ಳುವುದರೊಂದಿಗೆ ಅಕ್ಕಪಕ್ಕದ ಸ್ಥಳಗಳನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಪ್ರಸ್ತುತ ಮಸ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲಜ್ಜೆಗೇರಿಸಲು ಈಗಾಗಲೇ NHM ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ತೆಗೆದುಕೊಳ್ಳಲು ಪರಿಶೀಲನೆಯಲ್ಲಿದೆ. ಆದ್ದರಿಂದ ಉಳಿದ 8 ತಾಲೂಕುಗಳಲ್ಲಿ ಒಂದಾದ ಪೊನ್ನಂಪೇಟೆಯಲ್ಲಿ ಸ್ಥಾಪಿಸಲಾಗುವ ಹೊಸ ಸಮುದಾಯ ಆರೋಗ್ಯ ಕೇಂದ್ರದ ಬದಲಾಗಿ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲು ಪ್ರಸ್ತಾಪಿಸುತ್ತ ಆಯವ್ಯಯ ಘೋಷಣೆಯಲ್ಲಿನ 68 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಾನ್ ಎಫ್ ಆರ್ ಯು ಸಿ ಹೆಚ್ ಸಿ(Block PHC) ಗಳನ್ನಾಗಿ ಇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿಸುವ ಈ ಹಿಂದಿನ ಪದ್ಧತಿಯ ಬದಲಾಗಿ ನಾನ್ ಎಫ್ ಆರ್ ಯು ಸಿ(Block PHC)ಗಳನ್ನು ಮಾತ್ರ ಸ್ಥಾಪಿಸುವ ಪ್ರಸ್ತಾವನೆಯು, ನೆರೆಯ ತಮಿಳುನಾಡು ರಾಜ್ಯದಲ್ಲಿ ಅನುಸರಿಸುತ್ತಿರುವ ಮಾದರಿಯಲ್ಲಿದ್ದು, ಪ್ರತಿ Block PHCಯಲ್ಲಿ 5 ಎಂಬಿಬಿಎಸ್ ವೈದ್ಯರು ಮೂರು ಅಥವಾ ನಾಲ್ಕು ತಜ್ಞರು ಇರುತ್ತಾರೆ ಆದ್ದರಿಂದ ನಾನ್ ಎಫ್ ಆರ್ ಯು ಸಿ ಹೆಚ್ ಸಿ(Block PHC) ಮಾದರಿಯನ್ನು ಆಯವ್ಯಯ ಘೋಷಣೆಯ ಬಾಕಿ ಇರುವ ಎಂಟು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 30 ಹಾಸಿಗೆಗಳ ನಾನ್ ಪಿ ಆರ್ ಯು ಸಿ(Block PHC) ಗಳಾಗಿ ಪರಿಗಣಿಸಿದಾಗ ಅಸ್ತಿತ್ವದಲ್ಲಿರುವ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಗಣನೆಗೆ ತೆಗೆದುಕೊಂಡು ಕಟ್ಟಡ ಕಾಮಗಾರಿಗೆ ಅಂದಾಜು ಮೊತ್ತ 575 ಲಕ್ಷಗಳಿಗೆ ಸೀಮಿತದಲ್ಲಿ ಮೈನರ್ ಓಟಿ, ಲೇಬರ್ ವಾರ್ಡ್, ಮಹಿಳೆಯರಿಗೆ ನಾಲ್ಕು ಬೆಡ್ ವಾರ್ಡ್, ಪುರುಷರಿಗೆ ಎರಡು ಬೆಡ್ ವಾರ್ಡ್, ಕಛೇರಿ, ರಿಯಾಕ್ಟ್ ರೂಮ್, ವೆಲ್ನೆಸ್ ಸೆಂಟರ್, ಓ ಪಿ ಡಿ ಕನ್ಸಲ್ಟೇಶನ್, ಫೈಯರ್ ಫೈಟಿಂಗ್, ಮೆಡಿಕಲ್‌ಗಳನ್ನು ಒಳಗೊಂಡಿರುತ್ತದೆ. ಸದರಿ ಕಾಮಗಾರಿಯನ್ನು 15ನೇ ಹಣಕಾಸು ಆಯೋಗದ ಅನುದಾನದಲ್ಲಿ ನಿಗದಿಪಡಿಸಿರುವ ಪ್ರತಿ ಘಟಕದ ವೆಚ್ಚದ ಮಿತಿಯೊಳಗೆ ಕೈಗೊಳ್ಳಲು ತೀರ್ಮಾನಿಸಿ ಆದೇಶಿಸಿದೆ.