
ಹಾತೂರ್,ಜು.06(NadubadeNews) :ವಿರಾಜಪೇಟೆ ಮುಖ್ಯ ರಸ್ತೆಯ ಹಾತೂರು, ಕೊಳತ್ತೋಡು ಗ್ರಾಮದ ಶ್ರೀ ವನಭದ್ರಕಾಳಿ ದೇವಿಯ ಉತ್ಸವ ಹಾಗೂ ಊರ ಹಬ್ಬವು ದಿನಾಂಕ 7 ಮತ್ತು 8ರಂದು ನಡೆಯಲಿದೆ. 7ರಂದು ಸಂಜೆ ಮಂದಮಾಡ ಮೊಟ್ಟೆಯಿಂದ ದೇವರ ಮೂರ್ತಿ ತಂದು ಹಾತೂರು ಮಾದೇವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮರುದಿನ ಬೆಳಿಗ್ಗೆ 6.30 ಗಂಟೆಗೆ ಕೊಕ್ಕಂಡ ಐನ್‌ಮನೆಯಿಂದ ಭದ್ರಕಾಳಿ ದೇವಿಯ ಮೊಗತೆರೆ ಆರಂಭವಾಗುತ್ತದೆ. ಅದೇ ಸಮಯಕ್ಕೆ ಕೇಳಪಂಡ ಐನ್‌ಮನೆಯಿಂದ ಪೂತೆರೆ(ಅಯ್ಯಪ್ಪ ತೆರೆ) ಹೊರಡುವುದು. ಅದೇ ದಿನ ಮಧ್ಯಾಹ್ನ 2.30 ಗಂಟೆಗೆ ಕೊಂಗೇಪಂಡ ಐನ್‌ಮನೆಯಿಂದ ಭದ್ರಕಾಳಿ ತೆರೆ, ಕೇಳಪಂಡ ಐನ್‌ಮನೆಯಿಂದ ಪೂತೆರೆ(ಅಯ್ಯಪ್ಪ ತೆರೆ) ಮಾದೇವ ದೇವಸ್ಥಾನದ ಅರಳಿಕಟ್ಟೆ ಬಳಿಜೊತೆ ಸೇರಿ ಕೊಂಬು ಕೊಟ್ಟ್ ವಾಲಗದೊಂದಿಗೆ ದೇವಸ್ಥಾನ ಪ್ರವೇಶಿಸುತ್ತದೆ. ಸಂಜೆ 6 ಗಂಟೆಯ ನಂತರ ಹರಕೆ ಒಪ್ಪಿಸುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದು ಕೊಳ್ಳುವಂತೆ ಕೋರಲಾಗಿದೆ..