https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಹಂಪಿಯ ವಿಠೋಭ ದೇವಾಲಯದಂತೆ, ಕಟ್ಟೆಮಾಡು ಮಾದೇವರ ದೇವಾಲಯವನ್ನೂ ಸರ್ಕಾರ ತನ್ನ ಸುಪರ್ಧಿಗೆ ಪಡೆಯಲಿ…

ಹಂಪಿಯ ವಿಠೋಭ ದೇವಾಲಯದಂತೆ, ಕಟ್ಟೆಮಾಡು ಮಾದೇವರ ದೇವಾಲಯವನ್ನೂ ಸರ್ಕಾರ ತನ್ನ ಸುಪರ್ಧಿಗೆ ಪಡೆಯಲಿ…

Uncategorized
06/01/202506/01/2025nadubadenews@gmail.comLeave a Comment on ಹಂಪಿಯ ವಿಠೋಭ ದೇವಾಲಯದಂತೆ, ಕಟ್ಟೆಮಾಡು ಮಾದೇವರ ದೇವಾಲಯವನ್ನೂ ಸರ್ಕಾರ ತನ್ನ ಸುಪರ್ಧಿಗೆ ಪಡೆಯಲಿ…
Spread the love
ಹಂಪಿಯ ವಿಠೋಭ ದೇವಾಲಯದಂತೆ, ಕಟ್ಟೆಮಾಡು ಮಾದೇವರ ದೇವಾಲಯವನ್ನೂ ಸರ್ಕಾರ ತನ್ನ ಸುಪರ್ಧಿಗೆ ಪಡೆಯಲಿ…

NADUBADENEWS ಸಂಪಾದಕೀಯ, ಜ.6: ಶಾಂತಿಯ ತವರು, ನೆಮ್ಮದಿಯ ನೆಲೆಬೀಡಾಗಿದ್ದ ಕೊಡಗು ಇಂದು ಸ್ವಹಿತಾಶಕ್ತಿ ಮತ್ತಯ ಸ್ವಾರ್ಥತುಂಬಿದ ರಾಜಕೀಯ ಕಾರಣಕ್ಕಾಗಿ ಸುದ್ದಿಯಲ್ಲಿದೆ. ಇದಕೆಲ್ಲ ಮೂಲ ಕಾರಣ, ಐತಿಸಾಕ ಮತ್ತು ಪೌರಾಣಿಕ ಹಿನ್ನಲೆಯುಳ್ಳ ಪುರಾತನ ಮಾದೇವರ ದೇವಾಲಯವನ್ನು, ಇಂದಿನ ದೇವಾಲಯ ಸಮಿತಿ ತನ್ನ ಸ್ವಾರ್ಥ ಮತ್ತು ಒಂದು ವರ್ಗದ ಹಿತಕ್ಕಾಗಿ ಸಂಪೂರ್ಣ ಬದಲಾಯಿಸಿದಲ್ಲದೆ, ಮೂಲಕಟ್ಟುಪಾಡುಗಳನ್ನು ಬದಿಗೊತ್ತಿ, ಭಕ್ತರ ದಾರಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವುದು ಸಾಕ್ಷೀ ಸಮೇತ ಕಾಣುತ್ತಿದೆ. ಈ ಸಮಿತಿಯನ್ನು ವಿಸರ್ಜಿಸಿ ಸರ್ಕಾರದ ಸುಪರ್ಧಿಗೆ ತೆಗೆದು ಕೊಳ್ಳುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇದ್ದು, ಇದಕ್ಕೆ ಉದಾಹರಣೆಯಾಗಿ, 2001ರಲ್ಲಿ ಹಂಪಿಯ ವಿಠೋಭ ದೇವಾಲಯದ ಪ್ರಕರಣವನ್ನು ಗಮನಿಸಬಹುದು.

ಹಂಪಿಯ ಶ್ರೀ ವಿಠೋಭ ದೇವಾಲಯ ಭಾರತದ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಿದ್ದು, ಈ ದೇವಾಲಯವು ಕರ್ನಾಟಕದ ಹಂಪಿಯಲ್ಲಿ ಇರುವ, ಸುಮಾರು 14ನೇ ಶತಮಾನದಲ್ಲಿ ನಿರ್ಮಾಣವಾದ, ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಇದು ವೈಷ್ಣವ ಪಂಥದ ಪ್ರತಿಷ್ಠಿತ ದೇವತೆ ಶ್ರೀ ವಿಠೋಭ(ವಿಷ್ಣು) ದೇವಾಲಯವಾಗಿದೆ. ಈ ದೇವಾಲಯವು ಭಕ್ತರ ಹೃದಯದಲ್ಲಿ ಪ್ರಮುಖ ಸ್ಥಾನ ಪಡೆದಿದೆ, ಆದರೆ ಅದರ ಇತಿಹಾಸದಲ್ಲಿ ಕೆಲವು ವಿವಾದಗಳು ಕೂಡ ಇದ್ದವು.  ಇಲ್ಲಿಯ ನೀತಿ ನಿಯಮಗಳನ್ನು ನಿರೂಪಿಸಿದ ಸ್ಥಳೀಯ ಸಮಿತಿಯು, ಭಕ್ತರ ಭಾವನೆಗೆ ಮತ್ತು ಧಾರ್ಮಿಕ ಆಚರಣೆಗೆ ವಿರುದ್ದವಾದ ಹಲವು ನಿಯಮಗಳನ್ನು ತಂದಿತ್ತು. ಇದರಿಂದಾಗಿ ವಿವಾದ ಉಂಟಾದಾಗ 2001ರಲ್ಲಿ ಮಧ್ಯ ಪ್ರವೇಶಿಸಿದ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಬರುವ  IPC 153 (ಹಿಂಸಾತ್ಮಕ ಪ್ರಚೋದನೆ) ಮತ್ತು 295 (ಧಾರ್ಮಿಕ ಭಾವನೆಗಳಿಗೆ ಅಪಮಾನದ ಉದ್ದೇಶ) ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾಧಿಕಾರದ ಕಾಯ್ದೆ, 1952ರ ಸೆಕ್ಷನ್‌ಗಳಂತೆ ಮುಜರಾಯಿ ಇಲಾಖೆಯ ಮೂಲಕ ತನ್ನ ಸುಪರ್ಧಿಗೆ ತೆಗೆದುಕೊಂಡಿತು. ಮತ್ತು ಖಾಸಗೀ ಸಮಿತಿಯನ್ನು ಸಂಪೂರ್ಣ ವಜಾಮಾಡಿ, ಸರ್ಕಾರದ ಆಡಳಿತದಲ್ಲಿ ಮೂಲ ಸಂಪ್ರದಾಯಕ್ಕೊಳಪಟ್ಟು ಆಚರಣೆಗೆ ಅವಕಾಶ ಕಲ್ಪಿಸಿತು.

ಪ್ರಸ್ಥುತ ಸುದ್ದಿಯಲ್ಲಿರುವ, ಕಟ್ಟೆಮಾಡು ದೇವಾಲಯದ ಸಮಿತಿಯೂ ಕೂಡ,  ಇದೇ ರೀತಿಯ ಆಡಳಿತ ವಿರೋದಿ ಮತ್ತು ಕಾನೂನು ಬಾಹಿರ ಕಾರ್ಯಗಳಲ್ಲಿ ತೊಡಗಿದ್ದು, ಇದು IPC ಸೆಕ್ಷನ್ 295, IPC ಸೆಕ್ಷನ್ 341 (ಆಗಮನಕ್ಕೆ ಅಡ್ಡಿಪಡಿಸುವುದು), The TamilNadu Hindu Religious and Charitable Endowments Act, 1959 (TNHR&CE Act) ಅಥವಾ Karnataka Hindu Religious Institutions and Charitable Endowments Act, 1997 ಕಾಯ್ದೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ. 

ಇಂತಃ ಸಂದರ್ಭದಲ್ಲಿ ಜಿಲ್ಲಾಡಳಿತ ನೇರಾವಾಗಿ ಮದ್ಯ ಪ್ರವೇಶಿಸಿ, ಖಾಸಗೀ ದೇವಾಲಯ ಸಮಿತಿಯನ್ನು ವಜಾ ಮಾಡುವ ಮೂಲಕ, ನೇರ ಸರ್ಕಾರದ ಹಿಡಿತಕ್ಕೆ ಪಡೆಯುವ ಅಧಿಕಾರವನ್ನು ಭಾರತೀಯ ಧಾರ್ಮಿಕ ಆಚರಣೆ ಕಟ್ಟುಪಾಡುಗಳ ಹಲವು ಕಾಯ್ದೆಯಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಆಡಳಿತ ವಿಭಾಗ, ಈ ಶಕ್ತಿಯನ್ನು ಖಾಸಗೀ ದೇವಾಲಯಗಳಲ್ಲಿ ನಿಯಮ ಮತ್ತು ಶಿಸ್ತನ್ನು ಕಾಪಾಡಲು ಬಳಕೆ ಮಾಡಬಹುದು. ದೇವಾಲಯದಲ್ಲಿ ನಡೆಯುತ್ತಿರುವ ಯಾವುದೇ ಅಕ್ರಮ ಸೇವೆಗಳು, ಅಥವಾ ಸಾಮಾಜಿಕ ಕಳವಳ ಉಂಟುಮಾಡಿದರೆ, ದೇವಾಲಯದ ಸ್ವಾಮಿತ್ವ ಮತ್ತು ನಿರ್ವಹಣೆಯು ಯಾವುದೇ ಹಕ್ಕು, ವಿವಾದ ಅಥವಾ ನ್ಯಾಯಾಂಗ ಕಾರ್ಯವಹಿಗಳೊಂದಿಗೆ ಅಪಚಾರ ಸಂಭವಿಸಿದಾಗ, ಸರ್ಕಾರವು ಅನ್ವಯಿಸಬಹುದಾದ ಕಾನೂನು ಕ್ರಮಗಳನ್ನು ಜಿಲ್ಲಾಧಿಕಾರಿ ತೆಗೆದುಕೊಳ್ಳಬಹುದು.

ಜಿಲ್ಲೆಯ ಕಾನೂನು ನಿಯಮಗಳು, ಈ ಶಕ್ತಿಯನ್ನು ಖಾಸಗೀ ದೇವಾಲಯಗಳಲ್ಲಿ ನಿಯಮ ಮತ್ತು ಶಿಸ್ತನ್ನು ಕಾಪಾಡಲು ಬಳಕೆ ಮಾಡಬಹುದು. ಖಾಸಗೀ ದೇವಾಲಯಗಳಲ್ಲಿ ತಲೆದೋರುವ ಭದ್ರತಾ ಸಮಸ್ಯೆಗಳು ಅಥವಾ ಸಾಮಾಜಿಕ ಗಲಾಟೆಗಳ ವಿಷಯವಾಗಿ ಜಿಲ್ಲಾಧಿಕಾರಿ ಕ್ರಮ ತೆಗೆದುಕೊಳ್ಳಬಹುದು. ದೇವಾಲಯ ಸಮಿತಿಗಳು ಸರ್ಕಾರದಿಂದ ಆದೇಶಿಸಲಾದ ನಿಯಮಗಳು ಮತ್ತು ದೇಣಿಗೆ ನಿಯಮಗಳನ್ನು ಪಾಲಿಸದಿದ್ದಲ್ಲಿ, ಜಿಲ್ಲಾಧಿಕಾರಿಗಳಿಗೆ ಇವುಗಳನ್ನು ನಿರ್ವಹಿಸಲು ಅಧಿಕಾರ ಇರುತ್ತವೆ.

ಶಾಂತಿ ಹಾಗೂ ಭದ್ರತೆ ಕಾಯ್ದುಕೊಳ್ಳಲು ಮತ್ತು ಇತರ ಸಾರ್ವಜನಿಕ ಹಿತಾಸಕ್ತಿಗಳಿಗಾಗಿ, ಪ್ರಾದೇಶಿಕ ಅಧಿಕಾರಿಗಳು ಕೂಡ ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದು.

ಖಾಸಗೀ ದೇವಾಲಯ ಸಮಿತಿಯನ್ನು ನೇರವಾಗಿ ವಜಾ ಮಾಡುವ ಅಧಿಕಾರವು ದೇವಾಲಯದ ಆಡಳಿತದ ಸ್ವತಂತ್ರತೆಗೆ ಸಂಬಂಧಿಸಿದೆ ನಿಜ. ಭಾರತದಲ್ಲಿ, ಖಾಸಗೀ ದೇವಾಲಯಗಳು ಸಾಮಾನ್ಯವಾಗಿ ತಮ್ಮದೇ ಆದ ಆಡಳಿತ ಮಂಡಳಿಯನ್ನು ಹೊಂದಿರುತ್ತವೆ ಮತ್ತು ಈ ಸಮಿತಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದು. ಆದರೆ, ಕೆಲವೆಡೆ, ಸರ್ಕಾರವು ಕೆಲವು ನಿಯಂತ್ರಣಗಳನ್ನು ಹೊಂದಿದ್ದು, ಅವುಗಳಲ್ಲಿ ದೇವಾಲಯ ಸಮಿತಿಗಳನ್ನು ವಜಾ ಮಾಡುವ ಅಧಿಕಾರವು ಇದೆ.

ಖಾಸಗೀ ದೇವಾಲಯ ಸಮಿತಿಯು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸದೇ, ಭಕ್ತರ  ಹಕ್ಕುಗಳನ್ನು ಮತ್ತು ಆಡಳಿತವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಗಂಭೀರವಾಗಿ ಕಂಡುಬಂದರೆ, ಸರ್ಕಾರ (ಅಥವಾ ಜಿಲ್ಲಾಧಿಕಾರಿಗಳು) ನಿಯಮಗಳ ಅಡಿಯಲ್ಲಿ ದೇವಾಲಯ ಸಮಿತಿಯನ್ನು ವಜಾ ಮಾಡುವ ಅಧಿಕಾರ ಹೊಂದಿದೆ.

ಕೆಲವೆಡೆ ರಾಜಕೀಯ ಪ್ರೇರಿತ ಕಾನೂನುಗಳು ಅಥವಾ ಧಾರ್ಮಿಕ ನಿಯಮಾವಳಿಗಳು ಖಾಸಗೀ ದೇವಾಲಯಗಳ ನಿಯಂತ್ರಣವನ್ನು ಸರ್ಕಾರದ ಕೈಗೆ ಒದಗಿಸಬಹುದು. ಉದಾಹರಣೆಗೆ, ಭಾರತೀಯ ಸಂವಿಧಾನದ ಮತ್ತು ರಾಜ್ಯ-specific ಕಾಯ್ದೆಗಳ ಪ್ರಕಾರ, ಇದು ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದಿರುವುದರಿಂದ, ಸರ್ಕಾರವು ಅವುಗಳ ಮೇಲ್ವಿಚಾರಣೆಗೆ ಕಡಿವಾಣ ಹಾಕಬಹುದು.

ಖಾಸಗೀ ದೇವಾಲಯ ಕಾನೂನುಬಾಹಿರವಾಗಿ ನಡೆದುಕೊಂಡರೆ, ಜಿಲ್ಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಕೆಲವು ಪ್ರಮುಖ ಕಾನೂನುಗಳು ಮತ್ತು ನಿಯಮಗಳು ಇವೆ. Prevention of Corruption Act, 1988ರ ಪ್ರಕಾರ, ದೇವಾಲಯವು ಧನ ಸಂಗ್ರಹಣೆಯ ಮೂಲಕ ಅವ್ಯವಹಾರಗಳನ್ನು ನಡೆಸಿದರೆ, ಭ್ರಷ್ಟಾಚಾರದ ಪ್ರಕರಣಗಳು ದಾಖಲು ಮಾಡಬಹುದು. ಯಾವುದೇ ಸಾರ್ವಜನಿಕ ಹಣದ ದುರುಪಯೋಗವನ್ನು ತಪ್ಪಿಸಲು, ಜಿಲ್ಲಾಧಿಕಾರಿಗಳು ಅದರ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಬಹುದು.  

ದೇವಾಲಯದಲ್ಲಿ ಯಾವುದೇ ಪೌರಾಣಿಕ ಹಾಗೂ ಧಾರ್ಮಿಕ ಚಟುವಟಿಕೆಯಲ್ಲಿ ಹಿಂಸಾತ್ಮಕ ಅಥವಾ ಕಾನೂನುಬಾಹಿರ ಕ್ರಮಗಳು ನಡೆದರೆ, IPC ಕಾಯ್ದೆಯ ಅಡಿಯಲ್ಲಿ, ವಿಶೇಷವಾಗಿ 409,  153 ಮತ್ತು 295  ಸೆಕ್ಷನ್ ಗಳಲ್ಲಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬಹುದು.

The Tamil Nadu Hindu Religious and Charitable Endowments Act, 1959 / Karnataka Hindu Religious Institutions and Charitable Endowments Act, 1997 ರ ಪ್ರಕಾರ, ದೇವಾಲಯವು ನಿಯಮಗಳ ವಿರುದ್ಧವಾಗಿ ಕೆಲಸ ಮಾಡಿದರೆ, ಜಿಲ್ಲಾಧಿಕಾರಿಗಳು ಈ  ಕಾಯ್ದೆ ಆಧರಿಸಿ ಕ್ರಮ ಕೈಗೊಳ್ಳಬಹುದು.

ಖಾಸಗೀ ದೇವಾಲಯ ಸಮಿತಿಯು ಭಕ್ತರ ಧಾರ್ಮಿಕ ಹಕ್ಕುಗಳಿಗೆ ಅಡ್ಡಿಪಡಿಸುವುದರ ಮೂಲಕ ಉಲ್ಲಂಘಿಸಿದರೆ, Indian Penal Code (IPC) ಮತ್ತು State-specific Religious Endowments Acts ಅಡಿಯಲ್ಲಿ, ಜಿಲ್ಲಾಧಿಕಾರಿಗಳು ಕೂಡಲೇ Writ Petition ಮೂಲಕ ಅಥವಾ Judicial intervention ನಿಷ್ಪಕ್ಷಪಾತವಾಗಿ  ಕ್ರಮ ಕೈಗೊಳ್ಳಬಹುದು.

“ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾಧಿಕಾರದ ಕಾಯ್ದೆ, 1952” (Karnataka Hindu Religious Institutions and Charitable Endowments Act, 1952) ಮತ್ತು ಇತರ ಸಂಬಂಧಿತ ಕಾನೂನುಗಳನ್ನು ಆಧರಿಸಿ, ಕರ್ನಾಟಕದಲ್ಲಿ ಖಾಸಗೀ ದೇವಾಲಯಗಳನ್ನು ಮುಜರಾಯಿ ವ್ಯಾಪ್ತಿಗೆ ತರಲು ಸರ್ಕಾರವು, ಕ್ರಮ ಕೈಗೊಳ್ಳಬಹುದು.

ಈ ಎಲ್ಲಾ ಅಂಶಗಳನ್ನು ಕೂಲಂಕುಶವಾಗಿ ಗಮನಿಸಿದಾಗ, ಕಟ್ಟೆಮಾಡು ದೇವಾಲಯ ಸಮಿತಿಯು ಮೇಲಿನ ಎಲ್ಲಾ ನಿಯಾಮವಳಿಗಳನ್ನು ಉಲ್ಲಂಘಿಸಿದೆ.

ಈ ಸಮಿತಿಯು, ದೇವಾಲಯದಮೂಲ ಇತಿಹಾಸವನ್ನೇ ಮರೆಮಾಚಿದ್ದು, ದೇವಾಲಯದ ಮೂಲ ಮಹಾದೇವ ಎನ್ನುವ ಹೆಸರನ್ನೇ ಮಹಾಮೃತ್ಯುಂಜಯ ಎಂದು ಬದಲಾಯಿಸಿದಲ್ಲದೆ, ಧಕ್ಷಿಣಾಭಿಮುಖವಾಗಿದ್ದ ಗರ್ಭಗುಡಿಯ ಬಾಗಿಲನ್ನೇ ಬದಲಾಯಿಸಿ ಅಪಚಾರ ಎಸಗಿದೆ.  ಪುರಾತನ ಕಾಲದಲ್ಲಿದ್ದ  ದೇವರ ನಡೆನುಡಿಯನ್ನೇ ಸಂಪೂರ್ಣ ಬದಲಾಯಿಸಿದ್ದು, ಅದರ ಪ್ರಮುಖ ತಕ್ಕರನ್ನೇ ಹೊರಗಿಟ್ಟಿದೆ.

ಜೊತೆಗೆ ಧಾರ್ಮಿಕ ಆಚರಣೆಗೆ ಒಳಪಟ್ಟ ಸಾಂಪ್ರದಾಯಿಕ ಉಡುಪಾದ ಕುಪ್ಯಚಾಲೆಯನ್ನು ಧರಿಸಬಾರದು ಎಂದಿರುವ ಸಮಿತಿ ಧರಿಸಿದ್ದು ಕೂಡ ಸಾಂಪ್ರದಾಯಿಕ ಉಡುಪು. ಆದರೂ ಕೊಡವರನ್ನು ವಿರೋದಿಸಿ, ಉತ್ಸವದಿಂದ ದೂರ ಇಡುವ ಉದ್ದೇಶದಿಂದ ಸಮಿತಿ ದರ್ನಡತೆ ತೋರಿದ್ದು, ಇದು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ನೇರ ಉಲ್ಲಂಗನೆಯಾಗಲಿದೆ. ಅಲ್ಲದೆ ಅಂತರಾಷ್ಟ್ರೀಯ ವಸ್ತ್ರ ಸಂಹಿತೆಯ ವಿರೋಧಿ  ನಡೆಯೂ ಆಗಲಿದೆ.

ಸಮಸ್ಯೆ, ವಿವಾದದ ಸ್ವರೂಪ ಪಡೆದುಕೊಳ್ಳುತ್ತಿರುವಾಗಲೇ ಸಭೆ ಸೇರಿ ಆಗಿರುವ ಪ್ರಮಾದವನ್ನು ಸರಿಪಡಿಸಿಕೊಳ್ಳಬೇಕಿದ್ದ ಸಮಿತಿ, ಸ್ವತಃ ಜಿಲ್ಲಾಧಿಕಾರಿಗಳ ಸೂಚನೆಯ ಹೊರತಾಗಿಯೂ ತನ್ನ ದ್ವೇಶದ ನಿಲುವನ್ನು ಮುಂದುವರೆಸಿದ್ದು, ಪ್ರತೀ ವರ್ಷ ಉತ್ಸವದ ಕೊನೇ ದಿನ ಮಾತ್ರ ಅದೂ ಕೇವಲ ಗ್ರಾಮಸ್ಥರಿಗೆ ಮಾತ್ರ ಕುಪ್ಯಚಾಲೆ ಧರಿಸಲು ಅವಕಾಶ, ಹೊರಗಿನಿಂದ ಯಾರೂ ಕುಪ್ಯಧರಿಸಿ ಬರಬಾರದು ಎಂದು ಹೊಸ ನಿಯಮವೊಂದನ್ನು ಮಾಡಿದೆಯಂತೆ. ಇದು ಮಾನವ ಹಕ್ಕಿನ ಸಂಪೂರ್ಣ ಉಲ್ಲಂಘನೆ ಆಗಲಿದೆ.

ಈ ಎಲ್ಲಾ ವಿಚಾರಗಳನ್ನು ಕೂಲಂಕುಷ ಪರಿಶೀಲಸಿದರೆ ಹಾಲಿ ಕಟ್ಟೆಮಾಡು ಮಹಾಮೃತ್ಯುಂಜಯ ದೇವಾಲಯ ಸಮಿತಿಯ ನಡೆಯು ಸಂಪೂರ್ಣ ದ್ವೇಶಪೂರಿತ, ಜನಾಂಗ ವಿರೋಧಿ, ಸಾಮರಸ್ಯ ವಿರೋಧಿ, ಧೋರಣೆ ಒಂದಿದ್ದು, ಇವರಿಗೆ ಧಾರ್ಮಿಕ ಆಚರಣೆ, ಶಾಂತಿ, ಮತ್ತು ಸಹಬಾಳ್ವೆಗಿಂತ, ದ್ವೇಶ, ಅಸೂಯೆ, ಒಡೆದು ಆಳ್ವಿಕೆಯೇ ಹಿತ ನೀಡಿದಂತೆ ತೋರುತ್ತಿದೆ.

ಹಾಗಾಗಿ ಜಿಲ್ಲಾಧಿಕಾರಿಗಳು ಕೂಡಲೆ ದೇವಾಲಯದ ಆಡಳಿತವನ್ನು, ಹಂಪಿಯ ಶ್ರೀ ವಿಠೋಭ ದೇವಾಲಯದ ಮಾದರಿಯಲ್ಲಿ, ತನ್ನ ಹಿಡಿತ್ಕಕೆ ತೆಗೆದುಕೊಂಡು, ಹಾಲೀ ಆಡಳಿತ ಮಂಡಳಿಯನ್ನು  ವಜಾಮಾಡಿ, ಪುರಾತನ ಕಟ್ಟುಪಾಡುಗಳನ್ವಯ ಆಚರಣೆಗೆ ಅನುವು ಮಾಡುವ ಮೂಲಕ ಆ ಗ್ರಾಮದ ಮತ್ತು ಜಿಲ್ಲೆಯ ಶಾಂತಿಗೆ ನಾಂದಿ ಹಾಡಬೇಕಿದೆ.

Post navigation

ಒಯಿಂಜಿ ಪೋನ, ಪೆರಿಯ ಜಾನಪದ ಅರಿಯ, ಪಂಜೇರಿರ ಬೊಳ್ಯಪ್ಪ : ಕೊಡವಾಮೆರ ಕೊಂಡಾಟ ಬೇಜಾರ್
ಸಂಪಾದನೆಯ ಒಂದಷ್ಟನ್ನು ಸಮಾಜಸೇವೆಗೆ ಮೀಸಲಿಡೋಣ: ವೈಶಾಲಿ ಕುಡ್ವಾ ಅಭಿಮತ

Related Posts

ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ವಿಜಯ ದಶಮಿಯ ಶುಭಾಷಯಗಳು…

ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ವಿಜಯ ದಶಮಿಯ ಶುಭಾಷಯಗಳು…

11/10/202411/10/2024nadubadenews@gmail.com
ದಿ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ ನಿ.ದ ಅಧ್ಯಕ್ಷರಾದ ಎ.ಎಸ್.‌ ಪೊನ್ನಣ್ಣ, ಸಂಘದ ಉಳಿವಿಗಾಗಿ ಹೋರಾಡಿದ ರೈತ ಸಮಿತಿ, ಮತ್ತು ನೂತನ ಆಡಳಿತ ಮಂಡಳಿಗೆ ಶುಭ ಕಾಮನೆಗಳು…

ದಿ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ ನಿ.ದ ಅಧ್ಯಕ್ಷರಾದ ಎ.ಎಸ್.‌ ಪೊನ್ನಣ್ಣ, ಸಂಘದ ಉಳಿವಿಗಾಗಿ ಹೋರಾಡಿದ ರೈತ ಸಮಿತಿ, ಮತ್ತು ನೂತನ ಆಡಳಿತ ಮಂಡಳಿಗೆ ಶುಭ ಕಾಮನೆಗಳು…

15/11/202416/11/2024nadubadenews@gmail.com
ವಾಸ್ತವಗಳನ್ನು ಅರಗಿಸಿಕೊಳ್ಳಲಾಗುವುದಿಲ್ಲ ಭಾಗ-3,   ಬಡಕಟ್ಟು, ಕ್ಷಾತ್ರ ಪರಂಪರೆಯ ಕೊಡವರು ಮತ್ತು ಮೂಲ ನಿವಾಸಿಗಳ ವಿವರ, ಕುಲದೇವರು, ವೃತ್ತಿ ಸಂಪ್ರದಾಯಗಳ ಸಾರ್ವಜನಿಕ ಹಿತಾಶಕ್ತಿಗಾಗಿ ವಿವರಣೆ – ಕೊ.ಮಾಳೇಟಿರ ಸೀತಮ್ಮ ವಿವೇಕ್

ವಾಸ್ತವಗಳನ್ನು ಅರಗಿಸಿಕೊಳ್ಳಲಾಗುವುದಿಲ್ಲ ಭಾಗ-3,   ಬಡಕಟ್ಟು, ಕ್ಷಾತ್ರ ಪರಂಪರೆಯ ಕೊಡವರು ಮತ್ತು ಮೂಲ ನಿವಾಸಿಗಳ ವಿವರ, ಕುಲದೇವರು, ವೃತ್ತಿ ಸಂಪ್ರದಾಯಗಳ ಸಾರ್ವಜನಿಕ ಹಿತಾಶಕ್ತಿಗಾಗಿ ವಿವರಣೆ – ಕೊ.ಮಾಳೇಟಿರ ಸೀತಮ್ಮ ವಿವೇಕ್

14/01/202514/01/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us