https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಸ್ವಾತಂತ್ರ್ಯೊತ್ಸವದ  ವಿಶೇಷ ರಾಯಭಾರಿಯನ್ನು ಸನ್ಮಾನಿಸಿದ  ಮಂತರ್ ಗೌಡ.

ಸ್ವಾತಂತ್ರ್ಯೊತ್ಸವದ  ವಿಶೇಷ ರಾಯಭಾರಿಯನ್ನು ಸನ್ಮಾನಿಸಿದ  ಮಂತರ್ ಗೌಡ.

News, Informatin , Enteetinement and Advertisement
24/07/202524/07/2025nadubadenews@gmail.comLeave a Comment on ಸ್ವಾತಂತ್ರ್ಯೊತ್ಸವದ  ವಿಶೇಷ ರಾಯಭಾರಿಯನ್ನು ಸನ್ಮಾನಿಸಿದ  ಮಂತರ್ ಗೌಡ.
Spread the love
ಸ್ವಾತಂತ್ರ್ಯೊತ್ಸವದ  ವಿಶೇಷ ರಾಯಭಾರಿಯನ್ನು ಸನ್ಮಾನಿಸಿದ  ಮಂತರ್ ಗೌಡ.

ಮಡಿಕೇರಿ‌,ಜು.24;(nadubadenews): ಆಗಷ್ಟ್ 15 ರಂದು ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯ ಉತ್ಸವದಲ್ಲಿ ವಿಶೇಷ ಯುವ ರಾಯಭಾರಿಯಾಗಿ ಪ್ರಧಾನ ಮಂತ್ರಿ ಸೇರಿದಂತೆ ಗಣ್ಯರೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ಪಡೆದ ಕೊಡಗು ಜಿಲ್ಲೆಯ ಪ್ರತಿಭಾನ್ವಿತ ಯುವಕ ಯಶಸ್ ರೈರವರನ್ನು ಮಡಿಕೇರಿ ಶಾಸಕರಾದ ಡಾ ಮಂತರ್ ಗೌಡ ರವರು ಇಂದು ಸುದರ್ಶನ ಅತಿಥಿಗೃಹದಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು. ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದ ಲವ ಕುಮಾರ್ ಹಾಗೂ ಜಯಂತಿ ದಂಪತಿ ಪುತ್ರರಾದ ಯಶಸ್ ರೈ ಸುಳ್ಯ ಕೆವಿಜಿ ಕಾಲೇಜಿನ ಇಂಜಿನಿಯರಿಂಗ್ ವಿಧ್ಯಾರ್ಥಿ. ಸ್ವಾತತ್ರ ದಿನಕ್ಕೆ ಕರ್ನಾಟಕದ ಪ್ರತಿನಿಧಿಯಾಗಿ ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆ ತರುವ ವಿಷಯವಾಗಿದೆ ಎಂದು ಡಾ ಮಂತರ್ ಗೌಡ ಶ್ಲಾಘಿಸಿದರು. ಈ ಸಂಧರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡೂರಾವ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ, ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಪಿ.ಪಿ.ಸುಕುಮಾರ್, ಯಶಸ್ ರೈ ಅವರ ತಾಯಿ ಬಿ.ಬಿ.ಜಯಂತಿ ಉಪಸ್ಥಿತರಿದ್ದರು.

Post navigation

ನಾಳೆ ಮೈಸೂರಿನಲ್ಲಿ ಐತಿಚಂಡ ರಮೇಶ್‌ ಉತ್ತಪ್ಪ ಅವರ 3 ಕೃತಿಳ ಲೋಕಾರ್ಪಣೆ
 ಮಳೆ ತಂದ ಅವಾಂತರ, ಸಸಿಮಡಿಗಳು ಕೊಳೆತು ರೈತ ಅತಂತ್ರ

Related Posts

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

11/04/202511/04/2025nadubadenews@gmail.com
ಕಾಡಾನೆ ಸೆರೆಗೆ ಅನುಮತಿ ನೀಡುವಂತೆ  ಮುಖ್ಯಮಂತ್ರಿಗೆ ಶಾಸಕ ಪೊನ್ನಣ್ಣ ಮನವಿ ಸಂಕೇತ್ ಪೂವಯ್ಯ ಹೇಳಿಕೆ…

ಕಾಡಾನೆ ಸೆರೆಗೆ ಅನುಮತಿ ನೀಡುವಂತೆ  ಮುಖ್ಯಮಂತ್ರಿಗೆ ಶಾಸಕ ಪೊನ್ನಣ್ಣ ಮನವಿ ಸಂಕೇತ್ ಪೂವಯ್ಯ ಹೇಳಿಕೆ…

22/05/202522/05/2025nadubadenews@gmail.com
ಮುದ್ದಂಡ ಕಪ್ ಹಾಕಿ ಉತ್ಸವ,  ಫೈನಲ್ಸ್ ಗೆ ಶ್ರೇಷ್ಠ ದಿಗ್ಗಜರ  ಆಗಮನ, ಉತ್ಸವ ಸಮಿತಿಯಿಂದ ಸನ್ಮಾನ…

ಮುದ್ದಂಡ ಕಪ್ ಹಾಕಿ ಉತ್ಸವ, ಫೈನಲ್ಸ್ ಗೆ ಶ್ರೇಷ್ಠ ದಿಗ್ಗಜರ ಆಗಮನ, ಉತ್ಸವ ಸಮಿತಿಯಿಂದ ಸನ್ಮಾನ…

19/04/202519/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version