https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಸೋಂದಾ ಇತಿಹಾಸೋತ್ಸವಕ್ಕೆ ಚಾಮೆರ ದಿನೇಶ್ ಬೆಳ್ಯಪ್ಪ…

ಸೋಂದಾ ಇತಿಹಾಸೋತ್ಸವಕ್ಕೆ ಚಾಮೆರ ದಿನೇಶ್ ಬೆಳ್ಯಪ್ಪ…

Uncategorized
13/10/202413/10/2024nadubadenews@gmail.comLeave a Comment on ಸೋಂದಾ ಇತಿಹಾಸೋತ್ಸವಕ್ಕೆ ಚಾಮೆರ ದಿನೇಶ್ ಬೆಳ್ಯಪ್ಪ…
Spread the love
ಸೋಂದಾ ಇತಿಹಾಸೋತ್ಸವಕ್ಕೆ ಚಾಮೆರ ದಿನೇಶ್ ಬೆಳ್ಯಪ್ಪ…

            ಉತ್ತರಕನ್ನಡ ಜಿಲ್ಲೆಯ ಶಿರಸಿ ಬಳಿಯ ಸೋಂದೆಯಲ್ಲಿ ನಡೆಯುವ ಏಳನೇ ರಾಜ್ಯಮಟ್ಟದ ಇತಿಹಾಸೋತ್ಸವಕ್ಕೆ, ಕೊಡಗಿನ ಪ್ರತಿನಿಧಿಯಾಗಿ ಚಾಮೆರ ದಿನೇಶ್ ಬೆಳ್ಯಪ್ಪ ಅವರು ಭಾಗವಹಿಸಿ, ರಾಜಡಳಿತಕ್ಕೆ ಹಿಂದಿನ ಕೊಡಗಿನ ಇತಿಹಾಸ ಎಂಬ ವಿಚಾರ ಮಂಡನೆ ಮಾಡಲಿದ್ದಾರೆ.

            ಜಾಗೃತ ವೇದಿಕೆ ಸೋಂದಾ, ಮಿಥಿಕ್‌ ಸೊಸೈಟಿ ಬೆಂಗಳೂರು, ಪುರಾತತ್ವ ವಸ್ತು ಸಂಗ್ರಹಾಲಯಗಳ ಪರಂಪರೆ ಇಲಾಖೆ, ಮೈಸೂರು, ಸೋದೆ ಸದಾಶಿವರಾಯ ಪ್ರಶಸ್ತಿ ಪ್ರಧಾನ ಸಮಿತಿ, ರಂಗಚರಿತ ಸೋಂದಾ, ಇವರುಗಳ ಸಂಯುಕ್ತ ಸಹಯೋಗದಲ್ಲಿ, 2024ರ ಅಕ್ಟೋಬರ್‌ 19 ಮತ್ತು 20ರಂದು ಸೋಂದೆಯ ಜೈನಮಠದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀಮದ್‌ ಗಂಗಾದರೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ, ಖ್ಯಾತ ಇತಿಹಾಸ ತಜ್ಞರಾದ, ಡಾ̤ ವಸುಂದರಾ ಫಿಲಿಯೋಜ ಮೈಸೂರು ಅವರ ಸರ್ವಾಧ್ಯಕ್ಷತೆಯಲ್ಲಿ, ಕರ್ನಾಟಕದ ಖ್ಯಾತ ಇತಿಹಾಸಕಾರ ಮತ್ತು  ಸೋಂದಾ ಇತಿಹಾಸೋತ್ಸವ ಸಮಿತಿ ಸಂಚಾಲಕರಾದ ಶ್ರೀ ಲಕ್ಷ್ಮೀಶ್‌ ಹೆಗಡೆ ಸೋಂದಾ, ಅವರ ನೇತೃತ್ವದಲ್ಲಿ  ಈ ಐತಿಹಾಸಿಕ ಉತ್ಸವವು ನಡೆಯಲಿದೆ.

ಡಾ. ಲಕ್ಷ್ಮೀಶ್‌ ಹೆಗಡೆ ಸೋಂದಾ

            ಕರ್ನಾಟಕದ ನಾನಾ ಭಾಗಗಳಿಂದ ಸುಮಾರು 40ಕ್ಕೂ ಅಧಿಕ ಇತಿಹಾಸ ತಜ್ಞರು,  ವಿಧ್ವಾಂಸರು, ಸಂಶೋಧಕರು ಭಾಗವಹಿಸುವ ಈ ಉತ್ಸವದಲ್ಲಿ, ಕೊಡಗನ್ನು ಚಾಮೆರ ದಿನೇಶ್ ಬೆಳ್ಯಪ್ಪ ಅವರು ಪ್ರತಿನಿಧಿಸಲಿದ್ದಾರೆ. ಇದು ಇವರ ಎರಡನೇ ಇತಿಹಾಸ ಸಮ್ಮೇಳನವಾಗಿದ್ದು, ಈ ಹಿಂದೆ 2019ರಲ್ಲಿ, ಇಲ್ಲಿ ನಡೆದ ರಾಷ್ಟ್ರೀಯ ಇತಿಹಾಸ  ಸಮ್ಮೇಳನದಲ್ಲಿ ಭಾಗವಹಿಸಿ ವಿಚಾರ ಮಂಡಿಸಿದ್ದರು.

Post navigation

ಮನೆಕಟ್ಟೋ ಆಸೆಯ ಬಡವರಿಗೆ, ಪ್ರಧಾನಮಂತ್ರಿ ಆವಾಸ್ ಯೋಜನೆಅಡಿಯಲ್ಲಿ ಆನ್‌ಲೈನ್‌ ಅರ್ಜಿ ಆಹ್ವಾನ…
ಬಾವಲಿಪಟ್ಟಿಲ್‌ ಕೈಲ್‌ಪೊಳ್ದ್‌ ಕಳಿಕೂಟ…

Related Posts

ನಾಳೆ ಗೋಣಿಕೊಪ್ಪ ದಸರಾ. ವಾಹನ ಮಾರ್ಗ ಬದಲಾವಣೆ ಮತ್ತು ನಿಲುಗಡೆ ಜಾಗ ಗುರುತಿಸಿ ಜಿಲ್ಲಾಧಿಕಾರಿ ಆದೇಶ.

ನಾಳೆ ಗೋಣಿಕೊಪ್ಪ ದಸರಾ. ವಾಹನ ಮಾರ್ಗ ಬದಲಾವಣೆ ಮತ್ತು ನಿಲುಗಡೆ ಜಾಗ ಗುರುತಿಸಿ ಜಿಲ್ಲಾಧಿಕಾರಿ ಆದೇಶ.

11/10/202411/10/2024nadubadenews@gmail.com
ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿ. ವಿರಾಜಪೇಟೆ ಲೋಕಾರ್ಪಣೆ

ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿ. ವಿರಾಜಪೇಟೆ ಲೋಕಾರ್ಪಣೆ

04/01/202504/01/2025nadubadenews@gmail.com
ಕೊಡವ ಸಮಾಜ ಒಕ್ಕೂಟ 11ನೇ ಕಾಲತ  ನಮ್ಮೆಕ್‌ ಮೊಳಿ ಇಟ್ಟ LAC, ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ

ಕೊಡವ ಸಮಾಜ ಒಕ್ಕೂಟ 11ನೇ ಕಾಲತ  ನಮ್ಮೆಕ್‌ ಮೊಳಿ ಇಟ್ಟ LAC, ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ

28/11/202428/11/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version