https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಸೆಂಟ್‌ ಜೋಸೆಫ್‌, ಸಾಯಿಶಂಕರ್‌ ಸೇರಿ ಪ್ರತಿಷ್ಟಿತ ಶಾಳೆಗಳ ಉಚಿತ ಪ್ರವೇಶಕ್ಕೆ SE/ST ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಸೆಂಟ್‌ ಜೋಸೆಫ್‌, ಸಾಯಿಶಂಕರ್‌ ಸೇರಿ ಪ್ರತಿಷ್ಟಿತ ಶಾಳೆಗಳ ಉಚಿತ ಪ್ರವೇಶಕ್ಕೆ SE/ST ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

News, Informatin , Enteetinement and Advertisement
08/04/202508/04/2025nadubadenews@gmail.comLeave a Comment on ಸೆಂಟ್‌ ಜೋಸೆಫ್‌, ಸಾಯಿಶಂಕರ್‌ ಸೇರಿ ಪ್ರತಿಷ್ಟಿತ ಶಾಳೆಗಳ ಉಚಿತ ಪ್ರವೇಶಕ್ಕೆ SE/ST ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
Spread the love
ಸೆಂಟ್‌ ಜೋಸೆಫ್‌, ಸಾಯಿಶಂಕರ್‌ ಸೇರಿ ಪ್ರತಿಷ್ಟಿತ ಶಾಳೆಗಳ ಉಚಿತ ಪ್ರವೇಶಕ್ಕೆ SE/ST ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಮಡಿಕೇರಿ ಏ.08:- 2025-26ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪರಿಶಿಷ್ಟ ಜಾತಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಾದ, ಪೊನ್ನಂಪೇಟೆಯ ಸಾಯಿ ಶಂಕರ್‌ ಮತ್ತು ಮಡಿಕೇರಿಯ ಸೆಂಟ್‌ ಜೋಸೆಫ್ಸ್‌ ಶಾಲೆಗಳಿಗೆ ದಾಖಲಿಸಲು ಅರ್ಜಿ ಆಹ್ವಾನಿಸಲಾಗಿದೆ.

     ಅರ್ಜಿ ಸಲ್ಲಿಸಲು ಏಪ್ರಿಲ್, 15 ಪ್ರಾರಂಭದ ದಿನಾಂಕ, ಅರ್ಜಿಯನ್ನು ಆನ್‍ಲೈನ್‍ನಲ್ಲಿ ಸಲ್ಲಿಸಲು ಮೇ, 03 ಕೊನೆಯ ದಿನವಾಗಿದೆ. ಪ್ರವೇಶ ಪರೀಕ್ಷೆಯು ಮೇ, 09 ರಂದು ನಡೆಯಲಿದೆ. ಪ್ರವೇಶ ಪರೀಕ್ಷೆ ಫಲಿತಾಂಶ ಮೇ, 13 ರಂದು ಪ್ರಕಟವಾಗಲಿದೆ. ಮೇ, 17 ರಂದು ಅರ್ಹ ವಿದ್ಯಾರ್ಥಿಗಳನ್ನು ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಶಾಲೆಗೆ ದಾಖಲಾಗಲು ಮೇ, 31 ಕೊನೆಯ ದಿನವಾಗಿದೆ.

      ಅರ್ಜಿಯನ್ನು ಸಮಾಜ ಕಲ್ಯಾಣ ಇಲಾಖೆಯ ವೆಬ್‍ಸೈಟ್ https://swd.karnataka.gov.in/ ಅನ್ನು ಬಳಸಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರು 5ನೇ ತರಗತಿಯಲ್ಲಿ ಶೇ.60 ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. ಆಯ್ಕೆಯಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಜಿಲ್ಲೆಯ ಪ್ರತಿಷ್ಟಿತ ಶಾಲೆಯಲ್ಲಿ 6ನೇ ತರಗತಿಗೆ ಪ್ರವೇಶ ಅವಕಾಶವನ್ನು ಕಲ್ಪಿಸಲಾಗುತ್ತದೆ.  ಪ್ರಸ್ತುತ ಸಾಯಿ ಶಂಕರ್‌ ಪೊನ್ನಂಪೇಟೆ ಮತ್ತು, ಮಡಿಕೇರಿಯ ಸೆಂಟ್‌ ಜೋಸೆಪ್ಸ್‌ ಶಾಲೆಗಳಿಗೆ ಮಾತ್ರ ದಾಖಲಿಸುತಿದ್ದು, ಮುಂದೆ ಆದ್ಯತಾ ಅನುಸಾರ ಇತರ ತಾಲೂಕು ಕೇಂದ್ರಗಳಿಗೂ ಅವಕಾಶ ಕಲ್ಪಿಸಲಾಗುವುದು.

      ವಿದ್ಯಾರ್ಥಿಗಳಿಂದ ಜಾತಿ ದೃಢೀಕರಣ ಪ್ರಮಾಣ ಪತ್ರ, ಆದಾಯ ದೃಢೀಕರಣ ಪತ್ರ ಹಾಗೂ ಮುಖ್ಯೋಪಾಧ್ಯಾಯರಿಂದ ದೃಢೀಕೃತಗೊಂಡ ಅಂಕ ಪಟ್ಟಿಯನ್ನು ಸಲ್ಲಿಸುವುದು. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಪೋಷಕರ ಆದಾಯ ಮಿತಿ ರೂ.2 ಲಕ್ಷ ಒಳಗೆ ಇರಬೇಕು. (ಈ ಬಗ್ಗೆ ತಹಶೀಲ್ದಾರರವರಿಂದ ಪಡೆದ ಆದಾಯ ಪ್ರಮಾಣ ಪತ್ರ ಸಲ್ಲಿಸುವುದು).

       ಅರ್ಜಿಯನ್ನು ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ದೂ.ಸಂ.9480843037, ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ 9480843155, ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ 9480843156 ಹಾಗೂ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಪೊನ್ನಂಪೇಟೆ ದೂ.ಸಂ.9480843157 ನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ತಿಳಿಸಿದ್ದಾರೆ.

Post navigation

‌ಪಿಯುಸಿ ಫಲಿತಾಂಶ ಉಡುಪಿ ಪ್ರಥಮ, ಕೊಡಗು ನಾಲ್ಕನೇ ಸ್ಥಾನ
ಉಳುವಂಗಡ ಕಾವೇರಿ ಉದಯ ಅವರ, ಸಿಪಾಯಿ ಮಾದಪ್ಪ ಬಿಡುಗಡೆ

Related Posts

 ಮೇ 13 ರಿಂದ ತೆಕ್ ಮೊಗದ ದೇವಿ ಭದ್ರಕಾಳಿ ಬೋಡ್ ನಮ್ಮೆ…

 ಮೇ 13 ರಿಂದ ತೆಕ್ ಮೊಗದ ದೇವಿ ಭದ್ರಕಾಳಿ ಬೋಡ್ ನಮ್ಮೆ…

11/05/202511/05/2025nadubadenews@gmail.com
ಎರಡು ವರ್ಷ ಪೂರೈಸಿದ ರಾಜ್ಯ ಸರ್ಕಾರ ಮತ್ತು ಹೆಮ್ಮೆಯ ಶಾಸಕರಿಗೆ ಶುಭಾಷಯಗಳು

ಎರಡು ವರ್ಷ ಪೂರೈಸಿದ ರಾಜ್ಯ ಸರ್ಕಾರ ಮತ್ತು ಹೆಮ್ಮೆಯ ಶಾಸಕರಿಗೆ ಶುಭಾಷಯಗಳು

20/05/202520/05/2025nadubadenews@gmail.com
ವಿರಾಜಪೇಟೆಯಲ್ಲಿ ತಿಮಿಂಗಿಲ ವಾಂತಿ  ವಶ. 10 ಮಂದಿ ಆರೋಪಿಗಳ ಬಂಧನ

ವಿರಾಜಪೇಟೆಯಲ್ಲಿ ತಿಮಿಂಗಿಲ ವಾಂತಿ  ವಶ. 10 ಮಂದಿ ಆರೋಪಿಗಳ ಬಂಧನ

10/04/202510/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version