https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಸಾಲತೀರಿಸಿ ಎರಡು ವರ್ಷದ ನಂತರ ಚಿಕ್ಕಮಗಳೂರು ರೈತನಿಗೆ ಬ್ಯಾಂಕ್‌ ನೋಟೀಸ್‌ : ಮನುಸೋಮಯ್ಯ ಗುಡುಗಿಗೆ NOC ಸಲ್ಲಿಕೆ

ಸಾಲತೀರಿಸಿ ಎರಡು ವರ್ಷದ ನಂತರ ಚಿಕ್ಕಮಗಳೂರು ರೈತನಿಗೆ ಬ್ಯಾಂಕ್‌ ನೋಟೀಸ್‌ : ಮನುಸೋಮಯ್ಯ ಗುಡುಗಿಗೆ NOC ಸಲ್ಲಿಕೆ

Uncategorized
05/01/202505/01/2025nadubadenews@gmail.comLeave a Comment on ಸಾಲತೀರಿಸಿ ಎರಡು ವರ್ಷದ ನಂತರ ಚಿಕ್ಕಮಗಳೂರು ರೈತನಿಗೆ ಬ್ಯಾಂಕ್‌ ನೋಟೀಸ್‌ : ಮನುಸೋಮಯ್ಯ ಗುಡುಗಿಗೆ NOC ಸಲ್ಲಿಕೆ
Spread the love
ಸಾಲತೀರಿಸಿ ಎರಡು ವರ್ಷದ ನಂತರ ಚಿಕ್ಕಮಗಳೂರು ರೈತನಿಗೆ ಬ್ಯಾಂಕ್‌ ನೋಟೀಸ್‌ : ಮನುಸೋಮಯ್ಯ ಗುಡುಗಿಗೆ NOC ಸಲ್ಲಿಕೆ

ಗೋಣಿಕೊಪ್ಪ,ಜ.05: ತೆಗೆದುಕೊಂಡ ಸಾಲವನ್ನು OTS ಮೂಲಕ ತೀರಿಸಿ,  ಎರಡು ವರ್ಷದ ನಂತರ ಬ್ಯಾಂಕ್‌ ಒಂದು ರೈತನಿಗೆ, ಲಕ್ಷಾಂತರ ಮೊತ್ತ ಪಾವತಿಸಬೇಕು, ಇಲ್ಲವಾದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ನೋಟೀಸ್‌ ಜಾರಿ  ಮಾಡಿದ್ದು, ರಾಜ್ಯ ರೈತ ಸಂಘದ ಉಪಾಧ್ಯಕ್ಷರೂ, ಕೊಡಗು ಜಿಲ್ಲಾ ಅಧ್ಯಕ್ಷರೂ ಆಗಿರುವ ಕಾಡ್ಯಮಾಡ ಮನು ಸೋಮಯ್ಯ ಅವರ ಮಧ್ಯಪ್ರವೇಶದಿಂದ, ವಸೂಲಾತಿ ಕೈ ಬಿಟ್ಟು ರೈತನಿಗೆ  ನೋ ಡಿವ್‌ ಸರ್ಟಿಫಿಕೇಟ್‌ ನೀಡಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

  ಚಿಕ್ಕಮಗಳೂರು ಜಿಲ್ಲೆ, ತರೀಕೆರ ತಾಲೋಕಿನ, ಮುಡುಗುಂಡಿ ಗ್ರಾಮದ ಮಹಾದೇವಯ್ಯ ಎಂಬ ರೈತ 2008ರಲ್ಲಿ, ಸ್ಥಳೀಯ ಕೆನರಾ ಬ್ಯಾಂಕ್‌ನಿಂದ 37,70,307ರೂ  ಸಾಲ ಪಡೆದಿದ್ದು, ಹಲವು ಕಂತುಗಳು ಮರುಪಾವತಿಸಿದ್ದರಾದರೂ, ನಿಗಧಿತ ಸಮಯಕ್ಕೆ ಪೂರ್ತಿ ಸಾಲ ಮರುಮಾವತಿ ಮಾಡುಲು ಸಾಧ್ಯವಾಗಿರಲಿಲ್ಲ.

            19/07/2022ರಂದು ಬ್ಯಾಂಕ್‌ ಮತ್ತು ರೈತ ಮಹಾದೇವಯ್ಯ ನಡುವೆ ಒಪ್ಪಂದ ಏರ್ಪಟ್ಟು ಒಂದೇ ಖಂತಿನ ತೀರುವಳಿ ಯೋಜನೆಯ ಮೂಲಕ, ಬ್ಯಾಂಕಿಗ ಉಳಿಕೆ, 14,70,000ರೂ ಸಾಲವನ್ನು ಪೂರ್ತಿ ಮರುಪಾವತಿ ಮಾಡುತ್ತಾರೆ. ಆದರೆ ಬ್ಯಾಂಕ್‌ ರೈತನಿಗೆ ಯಾವುದೇ  ಧೃಡೀಕರಣ ಪತ್ರವನ್ನು ಕೊಡವುದಿಲ್ಲ. ಇದಾಗಿ ಎರಡು  ವರ್ಷಗಳ ನಂತರ 2024ನೇ ನವೆಂಬರ್‌ 20ರಂದು  ಬೆಂಗಳೂರಿನಲ್ಲಿ ನಡೆದ DRT ಟ್ರಿಬ್ಯನಲ್‌ನಲ್ಲಿ, ರೈತ ಮಹಾಧೇವಯ್ಯರಿಗೆ, 37,70,307ರೂ ಬ್ಯಾಂಕ್‌ಗೆ ಪಾವತಿಸಬೇಕೆಂದು ಆದೇಶ ನೀಡಲಾಗುತ್ತದೆ.

            ಈ ಆದೇಶ ನೋಡಿ ಕಂಗಾಲಾದ ರೈತ ಮಹದೇವಯ್ಯ ಅವರು, ರಾಜ್ಯ ರೈತ ಸಂಘದ ಉಪಾಧ್ಯಕ್ಷರೂ, ಕೊಡಗು ಜಿಲ್ಲಾ ಅಧ್ಯಕ್ಷರೂ ಆಗಿರುವ ಕಾಡ್ಯಮಾಡ ಮನು ಸೋಮಯ್ಯ ಅವರನ್ನು ಸಂಪರ್ಕಿಸುತ್ತಾರೆ. ಮನುಸೋಮಯ್ಯ ಅವರು ಮರುಪಾವತಿ ಮಾಡಿದ ಸಾಕ್ಷಿಯಾಗಿ ಏನಾದರೂ ದಾಖಲಾತಿ ಇದೆಯೇ ಎಂದಾಗ ರೈತನ ಬಳಿ ಯಾವುದೇ ದಾಖಲಾತಿ ಇರಲಿಲ್ಲ ಎನ್ನುವುದಕ್ಕಿಂತ ಬ್ಯಾಂಕ್‌ ಯಾವುದೇ ದಾಖಲೆ ನೀಡಿರಲಿಲ್ಲ. ಮತ್ತಷ್ಟು ಕಂಗೆಟ್ಟ ರೈತ ದಾಖಲಾತಿ ತಡಕಾಡಿದಾಗ ಅಂದು ಬ್ಯಾಂಕ್‌ಗೆ ಹಣ ಸಂದಾಯ ಮಾಡಿದ ಪಾವತಿ ರಸೀತಿ(ಕೌಂಟರ್‌ ಪೈಲ್)‌ ಸಿಗುತ್ತದೆ. ಅದನ್ನು ಹಿಡಿದು ಅವರು ನೇರವಾಗಿ ಗೋಣಿಕೊಪ್ಪಕ್ಕೆ ಬಂದು, ಮನು ಸೋಮಯ್ಯ ಅವರಿಗೆ ನೀಡುತ್ತಾರೆ. 

             ಓಂದು ಪಾವತಿ ರಶೀತಿಯ ಆಧಾರದಲ್ಲಿ, ಇಡೀ ಪ್ರಕರಣದ ಜಾಡು ಹಿಡಿದು ಹೊರಟ ಮನು ಸೋಮಯ್ಯ ಅವರು, ಬ್ಯಾಂಕಿನ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ, ಹಿರಿಯ ಅಧೀಕಾರಿಗಳನ್ನು  ಸಂಪರ್ಕಿಸಿ, ತೀವೃ ತರಾಟೆಗೆ ತೆಗೆದುಕೊಳ್ಳುತ್ತಾರೆ. ತಕ್ಷಣ ರೈತನಿಗೆ NOC ನೀಡದಿದ್ದರೆ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಘೇರಾವ್‌ ಮಾಡುವುದಲ್ಲದೆ, ನ್ಯಾಯಾಲಯದಲ್ಲಿಯೂ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡುತ್ತಾರೆ.  ಇದರಿಂದ ಬೆಧರಿದ ಬ್ಯಾಂಕ್‌ ಮೇಲಾಧಿಕಾರಿಗಳು, ರೈತ ಮಹಾದೇವಯ್ಯ ಅವರಿಗೆ ಎರಡು ವರ್ಷ ನಾಲ್ಕು ತಿಂಗಳ ನಂತರ, ದಿನಾಂಕ 30/12/2024ರಂದು ಪೂರ್ತಿ ಮರುಪಾವತಿ ಆಗಿರುವ ಕುರಿತು ನಿರಾಕ್ಷೇಪಣಾ ಪತ್ರ ಸಲ್ಲಿಸುತ್ತಾರೆ.

            ಮುಗ್ದ ರೈತರನ್ನು ಭೇದರಿಸಲು ಹರಟಿದ್ದ ಬ್ಯಾಂಕ್‌ ಅಧಿಕಾರಿಗಳಿಗೇ ಪಾಠಕಲಿಸಿ, ರೈತನ ಹಣ, ಪ್ರಾಣ, ಮಾನ ಮತ್ತು ಆಸ್ತಿಯನ್ನು ಕಾಪಾಡಿದ ರೈತಮುಖಂಡ ಕಾಡ್ಯಮಾಡ ಮನುಸೋಮಯ್ಯ ಅವರ ನಿಸ್ವಾರ್ಥ ಸೇವೆಯನ್ನು, ರೈತ ಮಹದೇವಯ್ಯ ಕುಟುಂಬ ಗೋಣೀಕೊಪ್ಪದವರೆಗೂ ಬಂದು ಫಲಾಹಾರ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ.

Post navigation

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್‌ ನಾಳ್‌….
ಮಲ್ಲಳ್ಳಿ ಫಾಲ್ಸ್‌ಗೆ ಅಂದಾಜು 300 ಕೋಟಿ ವೆಚ್ಚದ ರೋಪ್ ವೇ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ: ಇದು ಶಾಸಕ ಮಂಥರ್‌ ಗೌಡ ಪ್ರಯತ್ನದ ಫಲ

Related Posts

ಕಾವೇರಿ ಆರತಿ,  ಶ್ರೀರಂಗಪಟ್ಟಣದಲ್ಲಿ….

ಕಾವೇರಿ ಆರತಿ,  ಶ್ರೀರಂಗಪಟ್ಟಣದಲ್ಲಿ….

30/09/2024nadubadenews@gmail.com
ರಾಜ್ಯಮಟ್ಟದಮೈಸೂರುದಸರಾಲಲಿತಕಲೆ ಚಿತ್ರ ಕುರಿಲ್‌ ಐಮಂಡ ರೂಪೇಶ್‌ ನಾಣಯ್ಯಂಗ್‌ ಬಿರ್‌ದ್…

ರಾಜ್ಯಮಟ್ಟದಮೈಸೂರುದಸರಾಲಲಿತಕಲೆ ಚಿತ್ರ ಕುರಿಲ್‌ ಐಮಂಡ ರೂಪೇಶ್‌ ನಾಣಯ್ಯಂಗ್‌ ಬಿರ್‌ದ್…

08/10/2024nadubadenews@gmail.com
ವಿರಾಜಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಆಯಿತ್ ಪೆಮ್ಮಚಂಡ ಅನೂಪ್ ಮಾದಪ್ಪ

ವಿರಾಜಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಆಯಿತ್ ಪೆಮ್ಮಚಂಡ ಅನೂಪ್ ಮಾದಪ್ಪ

26/10/202426/10/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version