ವಿರಾಜಪೇಟೆ: ಡಿ7: (ಕಿಶೋರ್ ಕುಮಾರ್ ಶೆಟ್ಟಿ) ಕ್ರೀಡೆಗಳು ವ್ಯಕ್ತಿಯನ್ನು ದೈಹಿಕವಾಗಿ ಮಾನಸಿಕವಾಗಿ ಸದೃಡಗೊಳಿಸುತ್ತದೆ ಎಂದು ಸಂತ ಅನ್ನಮ್ಮ ದೇವಾಲಯದ ಸಹಾಯಕ ಧರ್ಮಗುರುಗಳು ಮತ್ತು ಸಂತ ಅನ್ನಮ್ಮ ಕಾಲೇಜು ಪ್ರಾಂಶುಪಾಲರಾದ ರೆ.ಫಾ. ಮದಲೈ ಮುತ್ತು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘ ಸಂತ ಅನ್ನಮ್ಮ ದೇವಾಲಯ ವಿರಾಜಪೇಟೆ ವತಿಯಿಂದ ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ಅಯೋಜಿಸಲಾಗಿರುವ 13ನೇ ವರ್ಷದ ಗ್ರಾಮಾಂತರ ಮಟ್ಟದ ಮುಕ್ತ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದ ಧರ್ಮಗುರುಗಳು. ಹೆಚ್ಚು ಹೆಚ್ಚು ಕ್ರೀಡಾ ಚಟುವಟಿಕೆಗಳು ಅಯೋಜನೆಗೊಳ್ಳಬೇಕು. ಕ್ರೀಡೆಗಳಿಂದ ಸಾಮರಸ್ಯ ವೃದ್ದಿಯಾಗುತ್ತದೆ. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸಂಘವು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕ್ರೀಡೆಯನ್ನು ಅಯೋಜಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.
ಪುರಸಭೆ ವಿರಾಜಪೇಟೆಯ ನಾಮ ನಿರ್ದೇಶಿತ ಸದಸ್ಯರಾದ ಶಭರಿಶ್ ಶೆಟ್ಟಿ ಮಾತನಾಡಿ, ಕ್ರೀಡೆ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ, ಬದಲಿಗೆ ಕ್ರೀಡಾಮನೋಭಾವ ಹೊಂದಿರುವ ವ್ಯಕ್ತಿಗಳನ್ನು ಒಂದುಗೂಡಿಸುವ ಶಕ್ತಿ ಕ್ರೀಡೆಗಿದೆ. ಕ್ರೀಡೆಯು ಸಾಮರಸ್ಯದ ಸಂಕೇತವಾಗಿದೆ. ಅಯೋಜಕರು ಧರ್ಮ ಅಧಾರಿತ, ಕ್ರೀಡೆ, ಸಾಂಸ್ಕೃತಿಕ, ಕಾರ್ಯಕ್ರಮ ನೀಡುವುದರೋಂದಿಗೆ ಸಾಮಾಜಿಕ ಕಳಕಳಿಗೆ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘದ ಉಪಾಧ್ಯಕ್ಷರಾದ ಜೋಸೆಫ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ರೋಮನ್ ಕ್ಯಾಥೋಲಿಕ್ ಅಸೊಶಿಯೇಶನ್ ಕೊಡಗು ಜಿಲ್ಲೆ ಉಪಾಧ್ಯಕ್ಷರಾದ ಜೋಕಿಂರಾಡ್ರಿಗಸ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು ವಿರಾಜಪೇಟೆ ವೃತ್ತ ನಿರೀಕ್ಷಕರಾದ, ಪೆಮ್ಮಚಂಡ ಅನೂಪ್ ಮಾದಪ್ಪ, ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್ ವಿರಾಜಪೇಟೆ ತಾಲ್ಲೂಕಿನ ಅದ್ಯಕ್ಷರಾದ, ಆಂಟೊನಿ ರಾಬಿನ್, ಉದ್ಯಮಿಗಳಾದ ಅಖೀಲ್, ಸಂತ ಅನ್ನಮ್ಮ ವಿವಿದ್ದೋದ್ದೇಶ ಸಹಕಾರ ಸಂಘ ಅದ್ಯಕ್ಷರಾದ ಮರ್ವಿನ್ ಲೋಬೋ, ನಿವೃತ್ತ ಶಿಕ್ಷಕರಾದ ಆಲ್ಬರ್ಟ್ ಡಿಸೋಜ ಉಪಸ್ಥಿತರಿದ್ದರು.
ಪ್ರಥಮ ಪಂದ್ಯಾಟ ಸಂತ ಅನ್ನಮ್ಮ ಸ್ನೇಹಿತರ ಸಂಘ ಮತ್ತು ಕಾವೇರಿ ಕ್ರಿಕೆಟರ್ಸ್ ತಂಡ ಮದ್ಯೆ ನಡೆದು ಕಾವೇರಿ ಕ್ರಿಕೆಟರ್ಸ್ ತಂಡವು ವಿಜಯವಾಯಿತು.
ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘದ ಸದಸ್ಯರಾದ ಜ್ಯೂಡಿ ವಾಜ್ ಅವರು ಸರ್ವರನ್ನು ಸ್ವಾಗತಿಸಿ ವಂದಿಸಿದರು. ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘದ ಪದಾಧಿಕಾರಿಗಳು, ಸದಸ್ಯರು, ವಿವಿಧ ತಂಡಗಳ ಮಾಲೀಕರು, ಮತ್ತು ಕ್ರೀಡಾ ಪಟುಗಳು ಹಾಗೂ ಕ್ರೀಡಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.