ಸೇವಾ ಮನೋಭಾವ ಬೆಳೆಸಿಕೊಂಡರೆ ಸರ್ಕಾರಿ ಶಾಲೆಗಳು ಬದುಕುಳಿಯಲಿವೆ. : ಪೊಕ್ಕುಳಂಡ್ರ ಪ್ರಹ್ಲಾದ್ ಅಪ್ಪಾಜಿ.
ಪಾರಣೆ,ಜ.24: ಸರ್ಕಾರಿ ಶಾಲೆಗಳಲ್ಲಿ ಈಗ ನಮ್ಮ ಮಕ್ಕಳು ಕಲಿಯುತಿಲ್ಲ ಎಂಬ ಮನೋಭಾವನೆ ಬಿಟ್ಟು, ಹಿಂದೊಮ್ಮೆ ನಮ್ಮ ಅಪ್ಪ, ಅಮ್ಮ, ನಾನೂ ಕೂಡ ಇದೇ ಶಾಲೆಯಲ್ಲಿ ಓದಿ ಆಡಿ ಬೆಳೆದವ ಎಂಬ ಭಾವನೆಯಿಂದ ಗ್ರಾಮಸ್ತರು, ಹಾಗೂ ಅನ್ನ ನೀಡಿದ ಶಾಲೆಯ ಬೆಳವಣಿಗೆಗೆ ಶ್ಮಿಸಬೇಕೆಂಬ ಸೇವಾಮನೋಭಾವನೆಯನ್ನು ಬೆಳೆಸಿಕೊಂಡರೆ ಸಾವಿನಂಚಿನಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಬಹುದು ಎಂದು, ಅಮೇರಿಕಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪೊಕ್ಕುಳಂಡ್ರ ಪ್ರಹ್ಲಾದ್ ಅಪ್ಪಾಜಿ ಹೇಳಿದರು.
ಪಾರಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತಿಂಗಳಿಗೊಮ್ಮೆ ನಡೆಯುವ “ಸಂಭ್ರಮ ಶನಿವಾರ”ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ರಸಪ್ರಶ್ನೆ ಸೇರಿದಂತೆ ವಿವಿಧ ಚಟುವಟಿಕೆಗಲನ್ನು ಕುದ್ದಾಗಿ ನಡೆಸಿ, ಉಡುಗೋರೆಗಳನ್ನು ಕೊಟ್ಟು ಪ್ರೋತ್ಸಾಹಿಸಿದ ನಂತರ ಮಾತನಾಡಿದ ಅವರು, ಗ್ರಾಮೀಣ ಜನರ ಭಾವನೆಗಳನ್ನು ಒಂದೆಡೆ ಸೆಳೆಯುವ ಸಾಮರ್ತ್ಯ ಇರುವ ಏಕೈಕ ಶಕ್ತಿ ಸರ್ಕಾರಿ ಶಾಲೆಗಳು. ಇಂದು ಈ ಶಾಲೆಗಳ ಪರಿಸ್ಥಿತಿ ಅಯೋಮಯವಾಗಿದ್ದು, ಹಲವಷ್ಟು ಶಾಲೆಗಳು ಅಸ್ಥಿತ್ವವನ್ನೇ ಕಳೆದು ಕೊಂಡಿವೆ. ಮತ್ತೊಂದಷ್ಟು ಶಾಲೆಗಳು ಮುಚ್ಚುವ ಕಡೇ ಹಂತದಲ್ಲಿವೆ. ಹೀಗಾಗದೆ ಬಡ ಮಕ್ಕಳ ವಿದ್ಯಾದೇಗುಲವಾಗಿರುವ ಸರ್ಕಾರಿ ಶಾಲೆಗಳನ್ನು, ನಿರ್ಲಕ್ಷಿಸದೆ ಉಳಿಸಿ ಬೆಳೆಸುವ ಇಟ್ಟಿನಲ್ಲಿ ಆಯಾ ಭಾಗದ ಪ್ರತಿಯೊಬ್ಬರೂ ಪಣ ತೊಡಬೇಕು ಎಂದರು.
ಈ ಸಂದರ್ಭ ಮಾತನಾಡಿದ ಪಾರಣೆ ಶಾಲಾ ಮುಖ್ಯೋಪದ್ಯಾಯರಾದ ಶ್ರೀ ವೇದ ಪ್ರಸಾದ್ ಅವರು, ಅಮೇರಿಕಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರು ಪೊಕ್ಕುಲಂಡ್ರ ಪ್ರಹ್ಲಾದ್ಅಪ್ಪಾಜಿ, ಅವರು, ಮೂಲತಹ ನರಿಯಂದಡ ಗ್ರಾಮ, ಚೆಯ್ಯಂಡಾಣೆ ಲಾಯರ್ ಮಗನಾಗಿದ್ದು ಪ್ರತೀ ವರ್ಷ ಊರಿಗೆ ಬಂದಾಗ ತನ್ನ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ತೆರಳಿ, ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸಿ ಉಡುಗೋರೆ ನೀಡವ ಮೂಲ ಪ್ರೋತ್ಸಾಹಿಸುವುದಲ್ಲದೆ, ಶಾಲೆಗೆ ಅಗತ್ಯ ಸೌಲಭ್ಯವನ್ನೂ ತನ್ನ ದುಡಿಮೆಯ ಭಾಗದಿಂದ ಒದಗಿಸಿಕೊಡುತಿದ್ದಾರೆ, ಇವರಂತ ಮನಸ್ಸು ಮತ್ತು ಅಭಿಮಾನ ಎಲ್ಲರಲ್ಲೂ ಬಂದರೆ ಯಾವುದೇ ಸರ್ಕಾರಿ ಶಾಲೆಗಳು ಮುಚ್ಚುವುದಿಲ್ಲ ಎಂದರು. ಈ ಸಮಯದಲ್ಲಿ ಶಾಲಾ ಶಿಕ್ಷಕವೃಂದ ಹಗೂ ವಿದ್ಯಾರ್ಥಿಗಳು ಉಪಸ್ತಿತರಿದ್ದರು.