https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಸಂಪಾದನೆಯ ಒಂದಷ್ಟನ್ನು ಸಮಾಜಸೇವೆಗೆ ಮೀಸಲಿಡೋಣ: ವೈಶಾಲಿ ಕುಡ್ವಾ ಅಭಿಮತ

ಸಂಪಾದನೆಯ ಒಂದಷ್ಟನ್ನು ಸಮಾಜಸೇವೆಗೆ ಮೀಸಲಿಡೋಣ: ವೈಶಾಲಿ ಕುಡ್ವಾ ಅಭಿಮತ

Uncategorized
07/01/202507/01/2025nadubadenews@gmail.comLeave a Comment on ಸಂಪಾದನೆಯ ಒಂದಷ್ಟನ್ನು ಸಮಾಜಸೇವೆಗೆ ಮೀಸಲಿಡೋಣ: ವೈಶಾಲಿ ಕುಡ್ವಾ ಅಭಿಮತ
Spread the love
ಸಂಪಾದನೆಯ ಒಂದಷ್ಟನ್ನು ಸಮಾಜಸೇವೆಗೆ ಮೀಸಲಿಡೋಣ: ವೈಶಾಲಿ ಕುಡ್ವಾ ಅಭಿಮತ

ಸೋಮವಾರಪೇಟೆ, ಜ,07: (ತೇಲಪಂಡ ಕವನ್‌ ಕಾರ್ಯಪ್ಪ) ಸೇವಾ ಸಂಘಗಳ ಚಟುವಟಿಕೆಗಳಲ್ಲಿ ಹಿರಿಯರ ಮಾರ್ಗದರ್ಶನ ಅಗತ್ಯ ಎಂದು ಇನ್ನರ್ ವ್ಹೀಲ್ ಕ್ಲಬ್‌ನ ಜಿಲ್ಲಾಧ್ಯಕ್ಷೆ ವೈಶಾಲಿ ಕುಡ್ವಾ ಹೇಳಿದರು.

ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್‌ʼಗೆ ಭೇಟಿ ಹಿನ್ನೆಲೆಯಲ್ಲಿ ಪಟ್ಟಣದ ಒಕ್ಕಲಿಗರ ಸಂಘದ ಶ್ರೀಗಂಧ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಭಾಗವಹಿಸಿ ಮಾತನಾಡಿದರು. ನಾವು ಸಂಪಾದಿಸಿದ ಹಣದಲ್ಲಿ ಒಂದಷ್ಟು ಭಾಗವನ್ನು ಸಮಾಜಸೇವೆಗೆ ಬಳಸಬೇಕು. ಸಮಾಜಸೇವೆಯಿಂದ ಸಿಗುವ ಸಂತೃಪ್ತಿ ಬೇರೆ ಯಾವುದೇ ವೃತ್ತಿಯಲ್ಲಿ ಸಿಗುವುದಿಲ್ಲ ಎಂದು ಅಭಿಪ್ರಾಯಿಸಿದರು.

ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳಿಗೆ, ಪುರುಷರ ಮನೋವೈಫಲ್ಯಗಳು ಕಾರಣವಾಗಿರುತ್ತವೆ. ತಾಯಂದಿರು ಗಂಡು ಮಕ್ಕಳಿಗೆ ಸಭ್ಯತೆ ಹಾಗೂ ಮೌಲ್ಯಾಧಾರಿತ ಬದುಕು ಕಟ್ಟಿಕೊಳ್ಳುವ ಪಾಠವನ್ನು ಹೇಳಿಕೊಡಬೇಕು ಎಂದು ಮನವಿ ಮಾಡಿದ ಅವರು, ಹೆಣ್ಣು ಮಕ್ಕಳು ತಮ್ಮ ರಕ್ಷಣೆಗೆ ಬೇಕಾದ ವಿದ್ಯೆಯನ್ನು ಕಲಿತುಕೊಳ್ಳಬೇಕು. ಪೋಷಕರು ಅಂತಹ ವಿದ್ಯೆ ಕಲಿಯಲು ಪ್ರೋತ್ಸಾಹ ನೀಡಬೇಕು. ಅತ್ಯಾಚಾರದಂತಹ ಘಟನೆಗಳು ನಡೆದಾಗ ಪ್ರತಿಭಟನೆ ಮಾಡಿ ಪ್ರಯೋಜನವಿಲ್ಲ. ಹೀನ ಮನಸ್ಥಿತಿಯ ಸಂತಾನವನ್ನು ನಾಶ ಮಾಡುವಂತಹ ಬಲಿಷ್ಠ ಕಾನೂನು ಅವಶ್ಯಕವಾಗಿದೆ ಎಂದು ಹೇಳಿದರು. ಸೋಮವಾರಪೇಟೆ ಕ್ಲಬ್ ಉತ್ತಮ ಜನಪರ ಕಾರ್ಯಕ್ರಮಗಳನ್ನು ನಿರ್ವಹಿಸಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಅಳವಡಿಸಲಾಗಿದ್ದ ಡಿಜಿಟಲ್ ಗಡಿಯಾರ ಹಾಗೂ ಫೋಕಸ್ ಲೈಟ್‌ಗೆ ಚಾಲನೆ ನೀಡಲಾಯಿತು. ಕ್ಲಬ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ವೇದಿಕೆಯಲ್ಲಿ ಕ್ಲಬ್ ಅಧ್ಯಕ್ಷೆ ಸಂಗೀತ ದಿನೇಶ್, ಉಪಾಧ್ಯಕ್ಷೆ ತನ್ಮಯಿ ಪ್ರವೀಣ್, ಕಾರ್ಯದರ್ಶಿ ಸುಮಲತ ಪುರುಷೋತ್ತಮ, ಖಜಾಂಚಿ ಸೌಮ್ಯ ಸತೀಶ್, ಅಮೃತ ಕಿರಣ್ ಇದ್ದರು.

Post navigation

ಹಂಪಿಯ ವಿಠೋಭ ದೇವಾಲಯದಂತೆ, ಕಟ್ಟೆಮಾಡು ಮಾದೇವರ ದೇವಾಲಯವನ್ನೂ ಸರ್ಕಾರ ತನ್ನ ಸುಪರ್ಧಿಗೆ ಪಡೆಯಲಿ…
ನಂಗಡ ಆಯಿಮೆ ಕೊಯಿಮೆನ ಮಕ್ಕಕ್‌ ಕಾಟಿಕೊಡ್ಪದ್‌ ಪೆರಿಯೈಂಗಡ ಮೇನತ್:‌ ಡಾII ಉಳುವಂಗಡ ಕಾವೇರಿ ಉದಯ

Related Posts

ಸೋಮವಾರಪೇಟೆಗೆ 36ಕೋಟಿ ಕಾಮಗಾರಿಯ ಶಂಕುಸ್ಥಾಪನೆ ಮಾಡಲಿರುವ ಸಚಿವ ಜಾರಕಿಹೋಳಿ

ಸೋಮವಾರಪೇಟೆಗೆ 36ಕೋಟಿ ಕಾಮಗಾರಿಯ ಶಂಕುಸ್ಥಾಪನೆ ಮಾಡಲಿರುವ ಸಚಿವ ಜಾರಕಿಹೋಳಿ

11/01/202511/01/2025nadubadenews@gmail.com
ಕೆಟ್ಟು ನಿಂತ  ಚಪ್ಪೇಶ್ವರ  ಬಸ್ಸೂ…, ಸಾಕಲಾಗದ ಒಂದು ಜೋಡಿ ಎತ್ತೂ…,

ಕೆಟ್ಟು ನಿಂತ ಚಪ್ಪೇಶ್ವರ ಬಸ್ಸೂ…, ಸಾಕಲಾಗದ ಒಂದು ಜೋಡಿ ಎತ್ತೂ…,

03/10/202403/10/2024nadubadenews@gmail.com
ಮಡಿಕೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ…

ಮಡಿಕೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ…

05/11/202405/11/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version