https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿ. ವಿರಾಜಪೇಟೆ ಲೋಕಾರ್ಪಣೆ

ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿ. ವಿರಾಜಪೇಟೆ ಲೋಕಾರ್ಪಣೆ

Uncategorized
04/01/202504/01/2025nadubadenews@gmail.comLeave a Comment on ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿ. ವಿರಾಜಪೇಟೆ ಲೋಕಾರ್ಪಣೆ
Spread the love
ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿ. ವಿರಾಜಪೇಟೆ ಲೋಕಾರ್ಪಣೆ

ವಿರಾಜಪೇಟೆ:ಜ:೦4: (ಕಿಶೋರ್‌ ಕುಮಾರ್‌ ಶೆಟ್ಟಿ) ಸಂಘ ಸಂಸ್ಥೆಗಳ ವ್ಯವಹಾರಗಳು ಬಲಿಷ್ಟವಾಗುವುದು ಗ್ರಾಹಕ ಧರ್ಮದಿಂದಾಗಿ, ಸಿಬ್ಬಂದಿಗಳು ಗ್ರಾಹಕರ ನಡುವೆ ಉತ್ತಮ ಬಾಂದವ್ಯ ಕಲ್ಪಿಸಿದಲ್ಲಿ ಸಹಕಾರ ಕ್ಷೇತ್ರದಲ್ಲಿ ಹೆಸರು ಅಜಾಮರವಾಗಿರುತ್ತದೆ ಎಂದು ನಿವೃತ್ತ ವಾಯು ಸೇನಾಧಿಕಾರಿಗಳಾದ ಬಾಳೆಯಡ ಶಂಭು ಮಂದಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ವಿರಾಜಪೇಟೆ ನಗರದ ಗಾಂಧಿನಗರದ ಲಯನ್ಸ್ ಕ್ಲಬ್ ಕಟ್ಟಡದಲ್ಲಿ ನೂತನವಾಗಿ ಆರಂಭಿಸಿರುವ, ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿ. ಸಂಸ್ಥೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮಂದಪ್ಪ ಅವರು, ಸಹಕಾರಿ ಕ್ಷೇತ್ರವು ಗ್ರಾಹಕ, ಠೇವಣಿದಾರ ಮತ್ತು ಅಡಳಿತ ಮಂಡಳಿ, ಸಿಬ್ಬಂದಿಗಳನ್ನು ಅಡಕಗೊಂಡಿರುವ ಸಂಸ್ಥೆಯಾಗಿದೆ. ಕಾನೂನು ಮತ್ತು ಸಂಸ್ಥೆಯ ನಿಭಂದನೆಗಳಿಗೆ ಅನುಗುಣವಾಗಿ ಗ್ರಾಹಕರು ಸಾಲ ಪಡೆದು ಕ್ರಮ ಬದ್ದವಾಗಿ ಹಿಂದಿರುಗಿಸಲು ಶಕ್ತರಾಗಿರಬೇಕು. ಸಂಸ್ಥೆಯು ಗ್ರಾಹಕ ಮತ್ತು ಠೇವಣಿದಾರರನ್ನು ಸರಿಸಮಾನವಾಗಿ ಕಾಣುವಂತಾಗಬೇಕು. ಇದರಿಂದ ಏಳಿಗೆ ಸಾದ್ಯ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.

ಕಾರ್ಯಕ್ರವನ್ನು ದೀಪ ಬೆಳಗಿಸಿ ಉಧ್ಘಾಟಿಸಿ ಮಾತನಾಡಿದ ಪಟ್ಟಣ ಸಹಕಾರ ಬ್ಯಾಂಕ್ನ ಮಾಜಿ ಅದ್ಯಕ್ಷರು ಮತ್ತು ಉದ್ಯಮಿಗಳಾದ ಕೋಲತಂಡ ಬೋಪಯ್ಯ ಅವರು, ಸಹಕಾರ ಸಂಘದ ಉನ್ನತಿಗಾಗಿ ಸದಸ್ಯರ ಪರಿಪೂರ್ಣ ಸಹಕಾರ ಅತ್ಯವಶ್ಯಕ, ಸಹಕಾರ ಸಂಘ ಠೇವಣಿದಾರರನನ್ನು ಗುರುತಿಸಿ ಸಂಸ್ಥೆಯಲ್ಲಿ ಠೇವಣಿಗಾಗಿ ಪ್ರೇರಿಸಬೇಕು, ಹೆಚ್ಚು ಹೆಚ್ಚು ಉಳಿತಾಯ ಖಾತೆಗಳನ್ನು ಅಳವಡಿಸುವಂತಾಗಬೇಕು, ಇದರಿಂದ ಮುಂದಿನ ದಿನಗಳಲ್ಲಿ ಆರ್.ಬಿ.ಐ. ನಿಂದ ಅಂಗೀಕಾರ ದೊರಕಲು ಅವಕಾಶಗಳು ದೊರಕುತ್ತದೆ. ಬಡ್ಡಿದರ, ಮತ್ತು ವಿವಿಧ ಸಾಲದ ಯೋಜನೆಗಳು, ಹೆಚ್ಚು ಪ್ರಚಾರವಾಗಬೇಕು. ಠೇವಣಿಗಳ ಕ್ರೋಡಿಕರಣಕ್ಕೆ ಸಂಸ್ಥೆಯ ನಿರ್ಧೇಶಕರು ಪರಿಶ್ರಮ ವಹಿಸಿ ಕ್ರೀಯಶಿಲತೆಯೊಂದಿಗೆ ಸಂಸ್ಥೆಯನ್ನು ಮುನ್ನಡೆಸಬೇಕು ಎಂದು ಹೇಳಿದರು.

ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿ. ವಿರಾಜಪೇಟೆ ಆಡಳಿತ ಮಂಡಳಿಯ ಅದ್ಯಕ್ಷರಾದ ಪಟ್ಟಡ ರೀನಾ ಪ್ರಕಾಶ್ ಅವರು, ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಜುಲೈ ತಿಂಗಳು 2024ರಿಂದ ಸಹಕಾರ ಸಂಘದ ಆರಂಭಕ್ಕೆ ರೂಪುರೇಖೆ ತಯಾರಿಸಲು ಮುಂದಾಗಿದ್ದು, ನಂತರದ ದಿನಗಳಲ್ಲಿ ಕರ್ನಾಟಕ ರಾಜ್ಯ ಸಹಾಕರ ಸಂಘ ಅಧಿನಿಯಮದಂತೆ ಸುಮಾರು 250 ಸದಸ್ಯ ಬಲದಿಂದ ಸುಮಾರು 06 ಲಕ್ಷದ ಬ್ಯಾಂಕ್ ಠೇವಣಿಯೋಂದಿಗೆ ಸಹಕಾರ ಸಂಘ ಕಾರ್ಯರಂಭಗೊಳಿಸಲಾಯಿತು. ಎಲ್ಲಾ ಸದಸ್ಯರ ಸಹಕಾರದಿಂದ ಸಹಕಾರ ಸಂಘದ ಕಛೇರಿಯನ್ನು ವಿದ್ಯುಕ್ತವಾಗಿ ಅರಂಭಗೊಳಿಸಿದ್ದೇವೆ. ಮುಂದೆಯು ಎಲ್ಲಾ ಸದಸ್ಯರ ಸಹಕಾರ ಸಂಸ್ಥೆಗೆ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಉದ್ಯಮಿ ಮಲ್ಲಿಕಾರ್ಜುನ, ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿ. ವಿರಾಜಪೇಟೆ ಯ ಉಪದ್ಯಕ್ಷರಾದ ಎ.ಡಿ. ಗಣಪತಿ ಆಚೆಡ, ಮುಖ್ಯ ಕಾರ್ಯನಿರ್ವಾಹಣಾಧೀಕಾರಿಗಳಾದ ಪಟ್ಟಡ ಪ್ರಕಾಶ್ ಉಪಸ್ಥಿತರಿದ್ದರು.

ಮುಂಡಚಾಡೀರ ರಿನಿ ಸ್ವಾಗತಿಸಿ ನಿರೂಪಿಸಿದರೆ, ಪ್ರತೀಶ್ ಬಿ.ಜಿ. ಅವರು ಸರ್ವರನ್ನು ವಂದಿಸಿದರು. ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿ. ವಿರಾಜಪೇಟೆಯ ನಿರ್ಧೇಶಕರುಗಳು, ಸದಸ್ಯರು ಹಾಜರಿದ್ದರು.

Post navigation

ಗಣರಾಜ್ಯೋತ್ಸವ ಮೋಪುಕ್‌ ಅರೆಯಡ ಶಾನ್‌ಬಿದ್ದಪ್ಪ
ಮಲೆತಿರಿಕೆ ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹೋತ್ಸವ ಸಂಪನ್ನ: ಸಾವಿರಾರು ಸಂಖ್ಯೆಯ ಜನ ಶೋಭಾಯತ್ರೆಯಲ್ಲಿ ಭಾಗಿ : ಭಕ್ತಿ ಭಾವದಿಂದ ನಮಿಸಿದ ಭಕ್ತರು.

Related Posts

ಉಳ್ಳಿಯಡ ಡಾಟಿಪೂವಯ್ಯ ಅಯಿಂಗಡ ನಾಡ್‌ಲ್ ನಾಳ್… 11

ಉಳ್ಳಿಯಡ ಡಾಟಿಪೂವಯ್ಯ ಅಯಿಂಗಡ ನಾಡ್‌ಲ್ ನಾಳ್… 11

27/12/202427/12/2024nadubadenews@gmail.com
ಕೊಡವಾಮೆಯ ಬೇರು ಗಟ್ಟಿಗೊಳಿಸುವಲ್ಲಿ, ಏಳ್‌ನಾಡ್‌ ಕೊಡವರು  ಜವಾಬ್ದಾರಿ ತೋರಬೇಕಿದೆ: ಚಾಮೆರ ದಿನೇಶ್‌ಬೆಳ್ಯಪ್ಪ

ಕೊಡವಾಮೆಯ ಬೇರು ಗಟ್ಟಿಗೊಳಿಸುವಲ್ಲಿ, ಏಳ್‌ನಾಡ್‌ ಕೊಡವರು  ಜವಾಬ್ದಾರಿ ತೋರಬೇಕಿದೆ: ಚಾಮೆರ ದಿನೇಶ್‌ಬೆಳ್ಯಪ್ಪ

04/01/202504/01/2025nadubadenews@gmail.com

21/12/202421/12/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version