https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಶೇ.90 ಸಹಾಯಧನದಲ್ಲಿ ಸ್ಪ್ರಿಂಕ್ಲರ್ ಸೆಟ್‌ಗೆ ಅರ್ಜಿ ಆಹ್ವಾನ

ಶೇ.90 ಸಹಾಯಧನದಲ್ಲಿ ಸ್ಪ್ರಿಂಕ್ಲರ್ ಸೆಟ್‌ಗೆ ಅರ್ಜಿ ಆಹ್ವಾನ

News, Informatin , Enteetinement and Advertisement
14/02/202514/02/2025nadubadenews@gmail.comLeave a Comment on ಶೇ.90 ಸಹಾಯಧನದಲ್ಲಿ ಸ್ಪ್ರಿಂಕ್ಲರ್ ಸೆಟ್‌ಗೆ ಅರ್ಜಿ ಆಹ್ವಾನ
Spread the love
ಶೇ.90 ಸಹಾಯಧನದಲ್ಲಿ ಸ್ಪ್ರಿಂಕ್ಲರ್ ಸೆಟ್‌ಗೆ ಅರ್ಜಿ ಆಹ್ವಾನ

ಮಡಿಕೇರಿ ಫೆ.14:- 2024-25 ನೇ ಸಾಲಿನಲ್ಲಿ ಕೃಷಿ ಇಲಾಖೆಯ ಮುಖಾಂತರ ಸ್ಪ್ರಿಂಕ್ಲರ್‍ಗೆ ಶೇ.90ರಷ್ಟು ಸಹಾಯಧನವನ್ನು ನೀಡಲಾಗುತ್ತಿದೆ. ಈ ಸೌಲಭ್ಯವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದವರಿಗೂ ಸಹ ಶೇ.90 ರಷ್ಟು ಸಹಾಯಧನದಲ್ಲಿ ವಿತರಿಸಲಾಗುತ್ತಿದ್ದು, ಆಸಕ್ತ ರೈತರು ಮಾರ್ಚ್‌ ಅಂತ್ಯದೊಳಗೆ ಸೌಲಬ್ಯ ಹೊಂದಿಕೊಳ್ಳುವಂತೆ ಕೃಷಿ ಇಲಾಖೆ ಪ್ರಕಟಣೆ ಕೋರಿದೆ.

ರೈತ ಬಾಂಧವರು ತಮ್ಮ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ರೈತ ಸಂಪರ್ಕ ಕೇಂದ್ರದಲ್ಲಿ ಉಚಿತವಾಗಿ ನೀಡುವ ಅರ್ಜಿಯೊಂದಿಗೆ ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್, ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್,  ಹಾಗೂ ಎರಡು ಸ್ಟ್ಯಾಂಪ್ ಅಳತೆಯ ಫೋಟೋಗಳನ್ನು ಸಲ್ಲಿಸುವುದರ ಮುಖಾಂತರ ಈ ಯೋಜನೆ ಅಡಿ ಫಲಾನುಭವಿಗಳಾಗಬಹುದು. ಈ ಯೋಜನೆ ಅಡಿ ಒಂದು ಎಕರೆ ಜಮೀನಿಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ರೈತರು 4139 ಹಣವನ್ನು ಪಾವತಿಸುವ ಮೂಲಕ ಒಟ್ಟು 30 ಪೈಪುಗಳು ಹಾಗೂ 5 ಸ್ಪ್ರಿಂಕ್ಲರ್ ಜೆಟ್‍ಗಳು ಹಾಗೂ ಇತರೆ ಸಾಮಗ್ರಿಗಳನ್ನು ಪಡೆಯಬಹುದು.

ಒಂದು ಎಕರೆಗಿಂತ ಕಡಿಮೆ ವಿಸ್ತೀರ್ಣ ಹಾಗೂ ಅರ್ಧ ಎಕರೆಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ  ರೈತರು            ರೂ.2496 ಹಣವನ್ನು ಪಾವತಿಸುವುದರ ಮುಖಾಂತರ 18 ಪೈಪುಗಳು ಮತ್ತು 3 ಸಂಖ್ಯೆಯ ಜೆಟ್‍ಗಳನ್ನು ಹಾಗೂ ಇತರೆ ಸಾಮಗ್ರಿಗಳನ್ನು ಕೃಷಿ ಇಲಾಖೆಯಿಂದ ಪಡೆದುಕೊಂಡು ನೀರಾವರಿ ಅಗತ್ಯ ಇರುವ ಸಂದರ್ಭದಲ್ಲಿ ಬೆಳೆಗೆ ತುಂತುರು ನೀರಾವರಿಯನ್ನು ಹಾಯಿಸಿ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಈ ಸೌಲಭ್ಯವನ್ನು ಜಿಲ್ಲೆಯ ರೈತ ಬಾಂಧವರು ಪಡೆದುಕೊಳ್ಳುವಂತೆ ಕೃಷಿ ಇಲಾಖೆ ಕೋರಿದೆ.

Post navigation

ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ…
ಮೀತಲತಂಡ ಇಸ್ಮಾಯಿಲ್ ಅವರಿಗೆ ‘ಶ್ರೀಕೃಷ್ಣರಾಜ ಒಡೆಯರ್ ಸದ್ಭಾವನಾ’ ಪ್ರಶಸ್ತಿ

Related Posts

ನಗರ ಪುನರ್ವಸತಿ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ…

ನಗರ ಪುನರ್ವಸತಿ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ…

10/06/202510/06/2025nadubadenews@gmail.com
ಕಡಗದಾಳುವಿನಲ್ಲಿ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ…

ಕಡಗದಾಳುವಿನಲ್ಲಿ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ…

19/05/202519/05/2025nadubadenews@gmail.com

ಬಹುಭಾಷಾ ಸಾಹಿತ್ಯ ಚೇತನ ಬಿರ್‌ದ್‌ ಪಡ್ಂದ ಉಳುವಂಗಡ ಕಾವೇರಿ ಉದಯ

09/03/202509/03/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version