ಬೆಂಗಳೂರು, ಅ.10: ಮಡಿಕೇರಿ ಶಾಸಕ ಡಾ. ಮಂಥರ್ ಗೌಡರ ಆಹ್ವಾನಕ್ಕೆ ಓಗೊಟ್ಟು, ದಸರಾ ಕಾಯಕ್ರಮದಲ್ಲಿ ಪಾಲ್ಗೊಳ್ಳ ಮಾನ್ಯ ಉಪಮುಖ್ಯಮಂತ್ರಿಗಳಾದ, ಶ್ರೀ ಡಿ ಕೆ ಶಿವಕುಮಾರ್‌ರವರು, ನಾಳೆ, (11/10/2024) ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ
ನಾಳೆ ಬೆಳಿಗ್ಗೆ 11 ಘಂಟೆಗೆ ವಿಶೇಷ ವಿಮಾನದ ಮೂಲಕ, ಬೆಂಗಳೂರಿಂದ ಹೊರಟು, 11.45ಕ್ಕೆ ಮೈಸೂರು ತಲುಪುವ ಉಪಮುಖ್ಯ ಮಂತ್ರಿಗಳು, ಮಧ್ಯಾಹ್ನ 12.00 ಘಂಟೆಗೆ, ಮೈಸೂರಿನಿಂದ ರಸ್ತೆ ಮೂಲಕ ಪ್ರಯಾಣಿಸಿ, 02 ಘಂಟೆಗೆ ಮಡಿಕೇರಿ, ಗಾಂಧಿ ಮೈದಾನ, ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಅದೇ ಮಾರ್ಗವಾಗಿ ಹಿಂತಿರುಗಲಿದ್ದರೆ, ಮಾನ್ಯ ಉಪ ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ಯಾರೂ ಕೂಡ, ಸುಗಂಧರಾಜ ಹೂವಿನ ಹಾರವನ್ನು ತರಬಾರದಾಗಿ ಎಂದು, ಉಪ ಮುಖ್ಯಮಂತ್ರಿಯವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ, ಬಿ.ಎಸ್. ಶ್ರೀಧರ್ ಅವರು ಪ್ರಕಾಣೆಯಲ್ಲಿ ತಿಳಿಸಿದ್ದಾರೆ.
ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಅವರು ನಿಯೋಗದೊಂದಿಗೆ ತೆರಳಿ, ಮಾನ್ಯ ಉಪಮುಖ್ಯ ಮಂತ್ರಿಗಳನ್ನು ದಸರ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು.