https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಶಾಂತಳ್ಳಿ ಶಾಲಾ ಶತಮಾನೋತ್ಸವ ನೆನಪಿಗೆ  ಉಚಿತ  ಆರೋಗ್ಯ ಶಿಭಿರ

ಶಾಂತಳ್ಳಿ ಶಾಲಾ ಶತಮಾನೋತ್ಸವ ನೆನಪಿಗೆ ಉಚಿತ  ಆರೋಗ್ಯ ಶಿಭಿರ

News, Informatin , Enteetinement and Advertisement
28/03/202528/03/2025nadubadenews@gmail.comLeave a Comment on ಶಾಂತಳ್ಳಿ ಶಾಲಾ ಶತಮಾನೋತ್ಸವ ನೆನಪಿಗೆ ಉಚಿತ  ಆರೋಗ್ಯ ಶಿಭಿರ
Spread the love
ಶಾಂತಳ್ಳಿ ಶಾಲಾ ಶತಮಾನೋತ್ಸವ ನೆನಪಿಗೆ  ಉಚಿತ  ಆರೋಗ್ಯ ಶಿಭಿರ

ಶಾಂತಳ್ಳಿ, ಮಾ:28:- ಶಾಂತಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಇದೇ ತಾರೀಕು 4 ಏಪ್ರಿಲ್ 2025 ಶುಕ್ರವಾರದಂದು ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದು ಶಾಲಾ ಶತಮಾನೋತ್ಸವ ಸಮಿತಿ ತಿಳಿಸಿದೆ.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ ಹಾಗೂ ಶಾಂತಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಮಿತಿ ಇವರ ಸಂಯುಕ್ತಾ ಆಶ್ರಯದಲ್ಲಿ ನಡೆಯುವ ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ ಇಲ್ಲಿನ ತಜ್ಞ ವೈದ್ಯರುಗಳು ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಈ ಶಿಬಿರದಲ್ಲಿ ಈ ಕೆಳಕಂಡ ವಿಭಾಗಗಳ ತಜ್ಞ ವೈದ್ಯರುಗಳು ಹಾಗೂ ಸೇವೆಗಳು ದೊರಕಲಿದೆ.

1.ಜನರಲ್ ಮೆಡಿಸಿನ್ 2. ಜನರಲ್ ಸರ್ಜರಿ 3.ಪ್ರಸೂತಿ ಹಾಗೂ ಸ್ತ್ರೀ ರೋಗ ವಿಭಾಗ 4.ಮೂಳೆ ಮತ್ತು ಕೀಲು ವಿಭಾಗ 5.ಕಣ್ಣಿನ ವಿಭಾಗ 6.ಮಾನಸಿಕ ಆರೋಗ್ಯ ವಿಭಾಗ   7.ಶ್ವಾಸಕೋಶ ರೋಗಗಳ ವಿಭಾಗ, 8. ಕವಿ ಮೂಗು ಗಂಟಲು ವಿಭಾಗ, 9. ಚರ್ಮರೋಗಗಳ ವಿಭಾಗ, 10.ದಂತ ಚಿಕಿತ್ಸಾ ವಿಭಾಗ, 11.ಮಕ್ಕಳ ವಿಭಾಗ  ಅಲ್ಲದೆ, 1. ಆನ್ಲೈನ್ ಹೊರರೋಗಿಗಳ ನೋಂದಣಿ2. ಆಯುಷ್ಮಾನ್ ಭಾರತ್ ನೋಂದಣಿ 3. ಯುಡಿಐಡಿ ವಿಕಲಚೇತನರ ಕಾರ್ಡ್ ನೋಂದಣಿ 4. ಅಂಗಾಂಗ ದಾನ ನೋಂದಣಿ5. ಉಚಿತ ಡಯಾಬಿಟಿಕ್ ಹಾಗೂ ಬಿಪಿ ತಪಾಸಣೆ 6. ರಕ್ತದಾನ ಶಿಬಿರ 7. ಇಸಿಜಿ ತಪಾಸಣೆ 8. ಎಕ್ಸರೇ 9. ಉಚಿತ ಔಷಧಿ ವಿತರಣೆ ನಡೆಯಲಿದೆ.

ಸಾರ್ವಜನಿಕರು ಆರೋಗ್ಯ ತಪಾಸಣೆಗೆ ಬರುವಾಗ ತಮ್ಮ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ಹಾಗೆಯೇ ಸರಕಾರದ ಆರೋಗ್ಯ ಯೋಜನೆಗಳ ಫಲಾನುಭವಿಗಳಾಗಲು ಯಶಸ್ವಿನಿ ಕಾರ್ಡ್ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಾರ್ವಜನಿಕರು ಆರ್. ಡಿ ಸಂಖ್ಯೆ ಉಳ್ಳ ದೃಢೀಕರಣ ಪತ್ರವನ್ನು ತರತಕ್ಕದ್ದು.  ದಯಮಾಡಿ ಶಾಂತಳ್ಳಿ ಹೋಬಳಿಯ ಸಾರ್ವಜನಿಕರು ಈ ಉಚಿತ ಆರೋಗ್ಯ ಶಿಬಿರದ ಸೌಲಭ್ಯವನ್ನು ಪಡೆಯಬೇಕೆಂದು ಶಾಂತಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಮಿತಿ ಕೋರಿದೆ.

Post navigation

ಆಪಾಡಂಡ ರಘು ಅಯಿಂಗಕ್‌ ಪೂ-ನಮನ ಒಪ್ಪುಚಿಟ್ಟ ಬೆಂಗಳೂರ್‌ ಕೊಡವ ಸಮಾಜ, ಮಾದಕ್‌ ಬಣ್ಣೆ ಬಾಡೆ.
KSOU ಕನ್ನಡ ಎಂ.ಎ. ಬೊಟ್ಟಂಗಡ ಸುಮನ್‌ ಸೀತಮ್ಮ ಜಿಲ್ಲೆಕ್‌ ಆದ್ಯ, ವಿವಿಕ್‌ ಏಳನೇ…

Related Posts

ಕಡಂಗದಲ್ಲಿ ಟ್ರಾಫಿಕ್‌ ಕಿರಿ ಕಿರಿ, ಬೋರ್ಡಿಗಿಲ್ಲ ಕಿಮ್ಮತ್ತು..

31/05/202531/05/2025nadubadenews@gmail.com
ಎಲ್ಲಾ ದಾಖಲೆನ ಪೊಡಿ ತಟ್ಟ್‌ನ ಮುದ್ದಂಡ ಕಪ್‌ ಹಾಕಿ:  ಒಟ್ಟು 396 ಒಕ್ಕ ದಾಖಲ್‌.

ಎಲ್ಲಾ ದಾಖಲೆನ ಪೊಡಿ ತಟ್ಟ್‌ನ ಮುದ್ದಂಡ ಕಪ್‌ ಹಾಕಿ:  ಒಟ್ಟು 396 ಒಕ್ಕ ದಾಖಲ್‌.

19/03/202519/03/2025nadubadenews@gmail.com
ಕಾರ್ಮಿಕನ ಬಲಿ ಪಡೆದ  ಕಾಡಾನೆ  ಕಾರ್ಯಾಚರಣೆಗೆ ಸಂಕೇತ್ ಪೂವಯ್ಯ ನೇತೃತ್ವ…

ಕಾರ್ಮಿಕನ ಬಲಿ ಪಡೆದ  ಕಾಡಾನೆ  ಕಾರ್ಯಾಚರಣೆಗೆ ಸಂಕೇತ್ ಪೂವಯ್ಯ ನೇತೃತ್ವ…

24/04/202524/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us