
ಶನಿವಾರಸಂತೆ; ಜು.04; (nadubadenews): ಶನಿವಾರ ಸಂತೆ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪವಾದರೆ ತಕ್ಷಣ ಪರಿಹಾರಕಾರ್ಯ ಕೈಗೋಳ್ಳಲು ಸನ್ನಧರಾಗಿರುವಂತೆ, ಈ ವ್ಯಾಪ್ತಿಯ ಸ್ವಯಂ ಸೇವಕರನ್ನು ಪೊಲೀಸ್ ಇಲಾಖೆ ಕೋರಿದೆ. ದಿನಾಂಕ 04-07-2025 ರಂದು ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಶನಿವಾರಸಂತೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಿ.ಕೃಷ್ಣ ರಾಜು ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸಿದ್ದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಯುವ ಈಜುಗಾರರು, ಜೇಸಿಬಿ, ಕ್ರೇನ್ ಮಾಲೀಕರು ಮತ್ತು ಆಪರೇಟರ್ ಗಳು, ಆಂಬುಲೆನ್ಸ್ ಮತ್ತು ಅವುಗಳ ಚಾಲಕರು ಮತ್ತು ಮಾಲೀಕರು ಮತ್ತು ಲಭ್ಯವಿರುವ ವುಡ್ ಕಟ್ಟರ್ ಗಳ ಮಾಲೀಕರುಗಳು ಹಾಜರಾಗಿ ಮುಂದೆ ಬರುವ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಎದುರಿಸಲು ಎಲ್ಲರು ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ.