ಮಡಿಕೇರಿ ಏ.11:- 2024-25ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ (176)ರಲ್ಲಿ ಘೋಷಿಸಿರುವಂತೆ ಸರ್ಕಾರದ ಆದೇಶ ಮತ್ತು ತಿದ್ದುಪಡಿ ಆದೇಶದನ್ವಯ ಐಐಎಸ್‍ಸಿ, ಐಐಟಿ ಮತ್ತು ಎನ್‍ಐಟಿ ಸಂಸ್ಥೆಯ ಮೂಲಕ ಆರ್ಟಿಫೀಸಿಯಲ್ ಇಂಟಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ಮುಂತಾದ ವೃತ್ತಿಪರ ತರಬೇತಿ ಕೋರ್ಸ್‍ಗಳಲ್ಲಿ ಭಾಗವಹಿಸುವ ಪರಿಶಿಷ್ಟ ಪಂಗಡದ 200 ಎಂಜಿನಿಯರಿಂಗ್ ಪದವೀಧರರಿಗೆ ತರಬೇತಿ ನೀಡುವ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿಗೆ ಆಫ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. (ತರಬೇತಿ ಅವಧಿಯಲ್ಲಿ ರೂ.15 ಸಾವಿರ ಗಳ ಶಿಷ್ಯವೇತನವನ್ನು ನೀಡಲಾಗುವುದು) ನಿಗಧಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು(ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ ಹಾಗೂ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆ, ಮಡಿಕೇರಿ ಅವರ ಕಚೇರಿಯಿಂದ ಪಡೆದುಕೊಂಡು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಏಪ್ರಿಲ್, 15 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ ತಾಲ್ಲೂಕು ದೂ.ಸಂ.9480843155 ನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ