ಮಡಿಕೇರಿ ಮೇ.27(Nadubade News): ವಿಶ್ವ ಪರಿಸರ ದಿನಾಚರಣೆ-2025 ರ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ, ಕೊಡಗು ವತಿಯಿಂದ ಪರಿಸರ ಸಂರಕ್ಷಣೆ ಕುರಿತು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಾಲಾಮಕ್ಕಳಿಗಾಗಿ ಮೇ, 31 ರಂದು ಬೆಳಗ್ಗೆ 9.30 ಗಂಟೆಗೆ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಯನ್ನು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಕೊಡವ ಸಮಾಜದ ಅಂಗ ಸಂಸ್ಥೆ, ಮಡಿಕೇರಿ ಇಲ್ಲಿ ಏರ್ಪಡಿಸಲಾಗಿದೆ. (ಡ್ರಾಯಿಂಗ್ ಶೀಟ್ ಮಾತ್ರ ನೀಡಲಾಗುವುದು. ಚಿತ್ರಕಲೆಗೆ ಬೇಕಾಗುವ ಬಣ್ಣ ಇನ್ನಿತರೆ ವಸ್ತುಗಳನ್ನು ವಿದ್ಯಾರ್ಥಿಗಳೇ ತರಬೇಕು).
ಈ ವರ್ಷದ ಘೋಷ ವಾಕ್ಯವು “ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು” “Ending Plastic Pollution Globally” ಆಗಿರುತ್ತದೆ. ಸ್ಫರ್ಧೆಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಸ್ಥಳದಲ್ಲಿಯೇ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ, ಆಸ್ಟಿನ್ ಕೆ.ಎ.ಯೋಜನಾ ಸಹಾಯಕರನ್ನು 7760738447, ರೇವತಿ ಟಿ.ಸಿ. ಡಾಟ ಎಂಟ್ರಿ ಆಪರೇಟರ್ 9741318237, ಆರ್ವಿನ್ ಆರ್. ಕ್ಷೇತ್ರ ಸಹಾಯಕ 6361713238 (ಕಚೇರಿ 08272-221855) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿ.ಇ.ಓ), ಸ್ಥಳೀಯ ಸಾರ್ವಜನಿಕ ಶಿಕ್ಷಣ ಇಲಾಖೆ ಇವರನ್ನು ಸಂಪರ್ಕಿಸಬಹುದು ಎಂದು ಕೊಡಗು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ರಘುರಾಮ್ ಅವರು ತಿಳಿಸಿದ್ದಾರೆ.