
ಮಡಿಕೇರಿ ಜು.12(nadubadenews):-ಪ್ರಸಕ್ತ (2025-25) ಸಾಲಿಗೆ ಪ್ರೀ ಮೆಟ್ರಿಕ್ ಮತ್ತು ಪೋಸ್ಟ್ ಮೆಟ್ರಿಕ್ (Pre matric & Post matric) ತರಗತಿಗಳಲ್ಲಿ ವ್ಯಾಂಸಗ ಮಾಡುತ್ತಿರುವ ವಿಶೇಷಚೇತನ ವಿದ್ಯಾರ್ಥಿಗಳು ಹೊಸದಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಎಸ್‍ಎಸ್‍ಪಿ ತಂತ್ರಾಂಶದಲ್ಲಿ https://ssp.postmatric.karnataka.gov.in/homepage.aspx ವೆಬ್‍ಸೈಟ್ ಚಾಲನೆಯಲ್ಲಿದ್ದು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆಗಸ್ಟ್, 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ. 08272-295829 ನ್ನು ಹಾಗೂ ತಾಲ್ಲೂಕಿನ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರಾದ ಮಡಿಕೇರಿ ತಾಲ್ಲೂಕು ರಾಜೇಶ್ ಬಿ.ಆರ್ ಮೊ.ಸಂ-8073192914, ಕುಶಾಲನಗರ ಮತ್ತು ಸೋಮವಾರಪೇಟೆ ತಾಲ್ಲೂಕು ಹರೀಶ್ ಟಿ.ಆರ್-8861428931 ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ಪ್ರಥನ್ ಕುಮಾರ್ ಸಿ.ಬಿ-9900883654 ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.