Site icon nadubadenews.com

ವಿರಾಜಪೇಟೆಯಲ್ಲಿ,  ನಿಷೇಧಿತ MDMA ಮಾದಕ ವಸ್ತು ಹಾಗೂ  ಗಾಂಜಾ ಮಾರಾಟ : ಐವರು ಆರೋಪಿಗಳ ಹೆಡೆಮುರಿ ಕಟ್ಟಿದ, ಪೊಲೀಸರು.

ವಿರಾಜಪೇಟೆಯಲ್ಲಿ,  ನಿಷೇಧಿತ MDMA ಮಾದಕ ವಸ್ತು ಹಾಗೂ  ಗಾಂಜಾ ಮಾರಾಟ : ಐವರು ಆರೋಪಿಗಳ ಹೆಡೆಮುರಿ ಕಟ್ಟಿದ, ಪೊಲೀಸರು.
Spread the love
ವಿರಾಜಪೇಟೆಯಲ್ಲಿ,  ನಿಷೇಧಿತ MDMA ಮಾದಕ ವಸ್ತು ಹಾಗೂ  ಗಾಂಜಾ ಮಾರಾಟ : ಐವರು ಆರೋಪಿಗಳ ಹೆಡೆಮುರಿ ಕಟ್ಟಿದ, ಪೊಲೀಸರು.

            ವಿರಾಜಪೇಟೆ, ನ.18: (ಇಟ್ಟಿರ ಸುಬ್ಬಯ್ಯ):  ನಿಷೇಧಿತ MDMA ಮಾದಕ ವಸ್ತು ಹಾಗೂ ಗಾಂಜಾ ಮಾರಾಟ / ಸರಬರಾಜು ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯು,  ಕೇರಳ ರಾಜ್ಯದ ಮೂವರೊಂದಿಗೆ, ಕೊಡಗು ಜಿಲ್ಲೆಯ ಇಬ್ಬರು ಆರೋಪಿಗಳನ್ನು ಬಂಧಿಸಿ ಮಾಲು ಹಾಗೂ ಕಾರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್, ವೃತ್ತ ನಿರೀಕ್ಷಕರಾದ ಪಿ. ಅನೂಪ್ ಮಾದಪ್ಪ, ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪ್ರಮೋದ್ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತನಿಖಾ ತಂಡ ಈ ಕಾರ್ಯಾಚರಣೆ ನಡೆಸಿದೆ. 

ವಿರಾಜಪೇಟೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ಜಿ ಗ್ರಾಮದ ಕಿರುಮಕ್ಕಿ – ಕಂಡಿಮಕ್ಕಿ ಜಂಕ್ಷನ್ ನಲ್ಲಿ ನಿಷೇಧಿತ MDMA ಮಾದಕ ವಸ್ತು ಹಾಗೂ ಗಾಂಜಾ ಮಾರಾಟ/ ಸರಬರಾಜು ಮಾಡುತ್ತಿದ್ದ ಬಗ್ಗೆ ಪೊಲೀಸ್ ತನಿಖಾ ತಂಡಕ್ಕೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳಾದ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಿರುವಂಗಾಡು ಗ್ರಾಮದ ಎಂ..ಕೆ. ಸುಜೇಶ್ (44),  ಪಿಣರಾಯಿ ಜಂಶೀರ್ (37), ತಲಚೇರಿ ಜಿಲ್ಲೆಯ ಇರನ್ನೋಳಿ ಗ್ರಾಮದ ಸಿ.ವಿ. ಶಮ್ಮಾಸ್ (32), ವಿರಾಜಪೇಟೆ ತಾಲ್ಲೂಕು ಮರೂರು ಗ್ರಾಮದ ಯು.ವೈ. ಜಬ್ಬಾರ್ (38) ಮತ್ತು ಮೊಹಮ್ಮದ್ ಕುಂಜ್ಹಿ (48) ಇವರುಗಳನ್ನು ಬಂಧಿಸಿ, ಬಂಧನಕ್ಕೊಳಗಾದ ಆರೋಪಿಗಳಿಂದ 84 ಗ್ರಾಂ. MDMA ಮಾದಕ ವಸ್ತು, 7 ಗ್ರಾಂ. ಗಾಂಜಾ, ಒಂದು ಬಲೆನೋ ಕಾರು, ಒಂದು ಡಿಜಿಟಲ್ ತೂಕದ ಯಂತ್ರ ಹಾಗೂ ಮಾದಕ ವಸ್ತು ಸೇವನೆಗೆ ಬಳಸುವ ಉಪಕಾರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಪೊಲೀಸ್ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ. ರಾಮರಾಜನ್ ಅವರು ಶ್ಲಾಘಿಸಿದ್ದಾರೆ.

Exit mobile version