ಮಡಿಕೇರಿ, ಡಿ.09: ಕೊಡಗು ಮೈಸೂರು ಸಂಸದರಾದ ಯಧುವೀರ್ ಜಯ ಚಾಮರಾಜ ಒಡೆಯರ್ ಅವು ವಾರದ ಒಂದು ದಿನ ಕೊಡಗಿನ ಕಛೇರಿಯಲ್ಲಿ ಇದ್ದು, ಸಾರ್ವಜನಿಕರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.
ನಿನ್ನೆ ಮಡಿಕೇರಿಯ ಜಿಲ್ಲಾಡಳಿತ ಭವನದ ಮೊದಲ ಮಹಡಿಯಲ್ಲಿ ತಮ್ಮ ನೂತನ ಅಧಿಕೃತ ಕಛೇರಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೊಡಗು ಮತ್ತು ಮೈಸೂರು ವಿಶಾಲ ಪ್ರದೇಶವಾಗಿದ್ದು, ಒಂದೇ ಕಡೆ ಇದ್ದು ಎಲ್ಲಾ ಕೆಲಸಗಳನ್ನು ಮಾಡುವುದು ಕಷ್ಟ ಸಾಧ್ಯ, ಆದ್ದರಿಂದ ಕೊಡಗಿನ ಜನತೆಗೆ ವಿಶೇಷವಾಗಿ ಸ್ಪಂದಿಸುವ ನಿಟ್ಟಿನಲ್ಲಿ, ಕೊಡಗಿನ ಕಛೇರಿಯಲ್ಲಿ ವಾರದ ಒಂದು ದಿನ ಲಭ್ಯವಿರುತ್ತೇನೆ. ಕಛೇರಿಗೆ ಬರುವ ದಿನವನ್ನು ಮುಂಚಿತವಾಗಿ ಸಾರ್ವಜನಿಕರಿಗೆ ತಿಳಿಸಿ ಬರುತ್ತೇನೆ, ಆಗ ಎಲ್ಲಾ ಜನತೆಗೆ ತಮ್ಮನ್ನ ಭೇಟಿ ಮಾಡಲು ಅನುಕೂಲ ಆಗಲಿದೆ ಎಂದು ಹೇಳಿದರು.
ಇದರ ಹೊರತಾಗಿಯೂ ದಿನನಿತ್ಯ ತಮ್ಮ ಕೊಡಗು ಕಛೇರಿ ತೆರೆದಿರಲಿದ್ದು, ಆಪ್ತ ಸಹಾಯಕರು ಮತ್ತು ಕಾರ್ಯಕರ್ತರು ಸಾರ್ವಜಿನಿಕರ ಕುಂದು ಕೊರತೆಗೆ ಸ್ಪಂದಿಸಲಿದ್ದಾರೆ. ಜನತೆ ತಮ್ಮ ಸಮಸ್ಯೆಗಳನ್ನು ಮುಖ್ತವಾಗಿ ಒಪಪಿಸಬಹುದು ಎಂದು ಹೇಳಿದರು.