https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ವಸತಿ ಶಾಲೆ ಪ್ರವೇಶಕ್ಕೆ  ಅರ್ಜಿ ಆಹ್ವಾನ

ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ

News, Informatin , Enteetinement and Advertisement
12/03/202512/03/2025nadubadenews@gmail.comLeave a Comment on ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ
Spread the love
ವಸತಿ ಶಾಲೆ ಪ್ರವೇಶಕ್ಕೆ  ಅರ್ಜಿ ಆಹ್ವಾನ

ಮಡಿಕೇರಿ ಮಾ.12:- 2025-26ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾವತಿಯಿಂದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ (ರಾಜ್ಯ ಪಠ್ಯಕ್ರಮ) ಮತ್ತು ಡಾ|| ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗಳ 6 ನೇ ತರಗತಿಗೆ ಉಚಿತ (ಸಿಬಿಎಸ್‍ಇ) (ಆಂಗ್ಲ ಮಾಧ್ಯಮ) ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.


ಅಲ್ಪಸಂಖ್ಯಾತರ ಸಮುದಾಯದ ಸಿಖ್, ಬೌದ್ಧ , ಜೈನ್, ಕ್ರಿಶ್ಚಿಯನ್, ಮುಸ್ಲಿಂ ಮತ್ತು ಪಾರ್ಸಿ ಶೇ.75% ಪರಿಶಿಷ್ಟ ಜಾತಿ, ಪರಿಶಿಷ್ಠ ವರ್ಗ ಹಾಗೂ ಇತರೆ ಹಿಂದುಳಿದ ವರ್ಗದವರಿಗೆ ಶೇ.25 ಸೀಟುಗಳು ಲಭ್ಯವಿರುತ್ತದೆ. ಉಚಿತ ಶಿಕ್ಷಣ ಮತ್ತು ವಸತಿ ಸೌಲಭ್ಯವಿದ್ದು, https://sevasindhuservices.karnataka.gov.in ಅಡಿಯಲ್ಲಿ ಪ್ರಾರಭಿಸಲಾಗಿದ್ದು, ಅದರಂತೆ ಸೇವಾಸಿಂಧು ಪೋರ್ಟಲ್‍ನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯAdmission for Morarji Desai Residential Schools ಸೇವೆಯ ವೆಬ್ ಪೋರ್ಟಲ್‍ನಲ್ಲಿ ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಕೂಡಲೇ ಇದರ ಸದುಪಯೋಗಪಡಿಸಿಕೊಳ್ಳಲು ಇಲಾಖೆಯ ಪ್ರಕಟಣೆ ಕೋರಿದೆ.


ಅರ್ಜಿ ಸಲ್ಲಿಸಲು ಮಾರ್ಚ್, 25 ಕೊನೆಯ ದಿನವಾಗಿದೆ. ವಸತಿ ಶಾಲೆಯಲ್ಲಿ ಪ್ರತಿ ವಿದ್ಯಾರ್ಥಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯದೊಂದಿಗೆ ಉಚಿತ ಶಿಕ್ಷಣ, ಪ್ರತಿ ವಿದ್ಯಾರ್ಥಿಗೆ ಉಚಿತವಾಗಿ ವರ್ಷಕ್ಕೆ ಸಮವಸ್ತ್ರ, ಬೂಟು, ಕಾಲು ಚೀಲ ಪೂರೈಕೆ, ಪ್ರತಿ ಬಾಲಕ ವಿದ್ಯಾರ್ಥಿಗೆ ಎರಡು ತಿಂಗಳಿಗೊಮ್ಮೆ ಕ್ಷೌರದ ವ್ಯವಸ್ಥೆ, ಪ್ರತಿ ವಿದ್ಯಾರ್ಥಿಗೆ ಪಠ್ಯ ಪುಸ್ತಕ ಮತ್ತು ಲೇಖನ ಸಾಮಾಗ್ರಿ ನೀಡಿಕೆ, ಪ್ರತಿ ವಿದ್ಯಾರ್ಥಿಗೆ ಟೂತ್‍ಪೇಸ್ಟ್, ಸೋಪ್, ಬ್ರಷ್, ಎಣ್ಣೆ ಒಳಗೊಂಡ ಸೋಪ್ ಕಿಟ್ ವಿತರಣೆ ಮತ್ತು ಪ್ರತಿ ವಿದ್ಯಾರ್ಥಿಗೆ ಉಚಿತವಾಗಿ ವೈದ್ಯಕೀಯ ಸೌಲಭ್ಯ, ಹಾಸಿಗೆ ಹೊದಿಕೆ, ಟ್ರಂಕ್, ಮಂಚ, ಪ್ರಯೋಗ ಶಾಲೆ ಉಪಕರಣ, ಬೋಧನ ಸಲಕರಣೆ, ಕ್ರೀಡಾ ಸಾಮಾಗ್ರಿ, ಗ್ರಂಥಾಲಯಗಳನ್ನು ಒದಗಿಸಲಾಗುತ್ತಿದೆ.


ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಪ್ರಾಂಶುಪಾಲರು, ಡಾ.ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ, ಖ್ಯಾತೆ ಗ್ರಾಮ,ಕೊಡ್ಲಿಪೇಟೆ, ಸೋಮವಾರಪೇಟೆ ತಾಲ್ಲೂಕು ದೂರವಾಣಿ ಸಂಖ್ಯೆ 7676473767, ಪ್ರಾಂಶುಪಾಲರು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅರ್ಜಿ ಗ್ರಾಮ, ಪೆರಂಬಾಡಿ, ವಿರಾಜಪೇಟೆ ತಾಲ್ಲೂಕು ದೂರವಾಣಿ ಸಂಖ್ಯೆ: 8105409405, ತಾಲ್ಲೂಕು ಮಾಹಿತಿ ಕೇಂದ್ರ ಸೋಮವಾರಪೇಟೆ, ದೂರವಾಣಿ ಸಂಖ್ಯೆ 8548068519 ಹಾಗೂ ತಾಲ್ಲೂಕು ಮಾಹಿತಿ ಕೇಂದ್ರ ವಿರಾಜಪೇಟೆ ದೂರವಾಣಿ ಸಂಖ್ಯೆ 9900731037 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆರ್.ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

Post navigation

ಯುವನಿಧಿ ಯೋಜನೆಗೆ ಅರ್ಜಿ ಆಹ್ವಾನ…
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

Related Posts

ಕೊಡಗು ಬಿಜೆಪಿ ಅಧ್ಯಕ್ಷರಾಗಿ ಪುನರಾಯ್ಕೆ ಆದ ನಾಪಂಡ ರವಿಕಾಳಪ್ಪ ಅವರಿಗೆ ಅಭಿನಂದನೆಗಳು

ಕೊಡಗು ಬಿಜೆಪಿ ಅಧ್ಯಕ್ಷರಾಗಿ ಪುನರಾಯ್ಕೆ ಆದ ನಾಪಂಡ ರವಿಕಾಳಪ್ಪ ಅವರಿಗೆ ಅಭಿನಂದನೆಗಳು

23/06/202523/06/2025nadubadenews@gmail.com
ಪೈಪೋಟಿ ಕಳಕ್‌ ಇಳ್ಂಜ ಬಾಳೆಯಡ ಕರುಣ್‌ಕಾಳಪ್ಪ ಕೂಟ್‌ಕಾರ

ಪೈಪೋಟಿ ಕಳಕ್‌ ಇಳ್ಂಜ ಬಾಳೆಯಡ ಕರುಣ್‌ಕಾಳಪ್ಪ ಕೂಟ್‌ಕಾರ

19/05/202519/05/2025nadubadenews@gmail.com
ಕಾವೇರಿ ತೇರ್ಥೋ ದ್ಬವ ಆಗೋದಿಲ್ಲ ಅಂದೇ ಇಲ್ಲ ಎ.ಕೆ. ಸುಬ್ಬಯ್ಯ..!? : ಹಿರಿಯ ಬಿಜೆಪಿ ಮುಖಂಡರೇ ಹೇಳಿದ ಸತ್ಯ

ಕಾವೇರಿ ತೇರ್ಥೋ ದ್ಬವ ಆಗೋದಿಲ್ಲ ಅಂದೇ ಇಲ್ಲ ಎ.ಕೆ. ಸುಬ್ಬಯ್ಯ..!? : ಹಿರಿಯ ಬಿಜೆಪಿ ಮುಖಂಡರೇ ಹೇಳಿದ ಸತ್ಯ

10/04/202510/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version