Site icon nadubadenews.com

ವೀರಮರಣವನ್ನಪ್ಪಿದ, ಭಾರತೀಯ ಸೇನೆಯ ʼಫ್ಯಾಂಟಮ್ʼ. ಉಗ್ರರ ಕಾರ್ಯಾಚರಣೆ ವೇಳೆ ಜೀವತೆತ್ತ ಶ್ವಾನ

ವೀರಮರಣವನ್ನಪ್ಪಿದ, ಭಾರತೀಯ ಸೇನೆಯ ʼಫ್ಯಾಂಟಮ್ʼ. ಉಗ್ರರ ಕಾರ್ಯಾಚರಣೆ ವೇಳೆ ಜೀವತೆತ್ತ ಶ್ವಾನ
Spread the love
ವೀರಮರಣವನ್ನಪ್ಪಿದ, ಭಾರತೀಯ ಸೇನೆಯ ʼಫ್ಯಾಂಟಮ್ʼ. ಉಗ್ರರ ಕಾರ್ಯಾಚರಣೆ ವೇಳೆ ಜೀವತೆತ್ತ ಶ್ವಾನ

‌ಶ್ರೀನಗರ:  ಅ.29:  ಬೆಳಿಗ್ಗೆ ಜಮ್ಮು ಕಾಶ್ಮೀರದ ಅಖ್ನೂರ್‌ನ ಸುಂದರ್‌ಬನಿ ಸೆಕ್ಟರ್‌ನಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಹೆಮ್ಮೆಯ ಶ್ವಾನ ‘ಫ್ಯಾಂಟಮ್’ ವೀರ ಮರಣವನ್ನಪ್ಪಿದೆ.

ಕಳೆದ ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ತೀವ್ರಗೊಂಡಿದ್ದು ಇದರ ಹಿನ್ನೆಲೆಯಲ್ಲಿ, ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಸೋಮವಾರ ಬೆಳಿಗ್ಗೆ ಮುಂದಾಗಿದೆ ಅದರಂತೆ ಕಾರ್ಯಾಚರಣೆ ನಡೆಸುತ್ತಿದ್ದಾಗ, ಉಗ್ರರು ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಸೇನಾ ಪಡೆಯ ಶ್ವಾನ ‘ಫ್ಯಾಂಟಮ್’ ಗೆ ಗಂಭೀರ ಗಾಯವಾಗಿತ್ತು. ಕೂಡಲೇ ಶ್ವಾನಕ್ಕೆ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ ಎಂದು ಅಧಿಕಾರಿಗಳು, ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.

ಫ್ಯಾಂಟಮ್ ಬೆಲ್ಜಿಯನ್ ಮಾಲಿನೋಯಿಸ್ ತಳಿಗೆ ಸೇರಿದ ಶ್ವಾನವಾಗಿದ್ದು, 2020ರ ಮೇ ತಿಂಗಳಲ್ಲಿ ಜನಿಸಿತ್ತು. ಬಳಿಕ 2022ರಲ್ಲಿ ಸೇನೆಗೆ ಸೇರ್ಪಡೆಗೊಂಡು, K9 ಘಟಕದ ಭಾಗವಾಗಿತ್ತು. ಭಯೋತ್ಪಾದನೆ-ವಿರೋಧಿ ಕಾರ್ಯಾಚರಣೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ್ದು, ಪ್ಯಾಂಟಮ್ ಅಗಲಿಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ ಅದರ ಧೈರ್ಯ, ನಿಷ್ಠೆ ಮತ್ತು ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ವೈಟ್ ನೈಟ್ ಕಾರ್ಪ್ಸ್ ಟ್ವೀಟ್ ಮಾಡಿ, ಸಂತಾಪ ಸೂಚಿಸಿದೆ.

Exit mobile version