ಬೆಂಗಳೂರು,ಜು.30; (nadubadenews): ಕೆಪಿಸಿಸಿ ಪ್ರಚಾರ ಸಮಿತಿಯ ಉಪಾಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ನಾಯಕಿ, ಮಾಜೀ ಶಾಸಕಿ ಶಾಂತೆಯಂಡ ವೀಣಾ ಅಚ್ಚಯ್ಯ ಅವರನ್ನು ಎಐಸಿಸಿ ನೇಮಕ ಮಾಡಿದೆ. ಸಂಚಾಲಕರಾಗಿ ಡಾ. ನಿಶ್ಚಲ್ ಕೊಡಗು, ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಟಿ.ಪಿ. ರಮೇಶ್ ಆಯ್ಕೆಯಾಗಿದ್ದಾರೆ.