
ಬೆಂಗಳೂರು, ಮಾ.11: ಸ್ವತಂತ್ರ ಸಿ. ರಾಜ್ಯವಾಗಿದ್ದ ಕೊಡಗು, ಪ್ರಸ್ತುತ ಒಂದು ಜಿಲ್ಲೆ ಮಾತ್ರ. ಅಂತ ಜಿಲ್ಲೆಗೆ ಈಗ ನಾವು ಕೊಟ್ಟಿರುವ ವಿಶ್ವ ವಿದ್ಯಾನಿಲಯವನ್ನು ಉಳಿಸಿ ಕೊಡದಿದ್ದರೆ ಹೇಗೇ ಎಂದು ರಾಜ್ಯ ಆರೋಗ್ಯ ಸಚಿವರೂ, ಮೂಲತಃ ಕೊಡಗಿನವರೇ ಆದ ದಿನೇಶ್ ಗುಂಡು ರಾವ್ ಅವರು ನಿನ್ನೆ ಉನ್ನತ ಶೀಕ್ಷಣ ಸಚಿವರನ್ನು ಪ್ರಶ್ನಿಸಿರುವ ಘಟನೆ ವರದಿಯಾಗಿದೆ.
ಸ್ವಾತಂತ್ರ ಪೂರ್ವದಿಂದಲೂ ಪ್ರತ್ಯೇಕ ಪ್ರಾಂತ್ಯಾವಾಗಿದ್ದ ಕೊಡಗು, ಸ್ವತಂತ್ರ ನಂತರವೂ ಪ್ರತ್ಯೇಕ ಸಿ. ರಾಜ್ಯವಾಗಿತ್ತು. ಆ ನಂತರದ ಬೆಳವಣಿಗೆಯಲ್ಲಿ ಕೊಡಗನ್ನು ಮೈಸೂರು ಪ್ರಾಂತ್ಯದೊಂದಿಗೆ ವಿಲೀನ ಮಾಡಲಾಗಿದೆ. ಆದರೆ ಕೊಡಗು ಜಿಲ್ಲೆಗೆ ಯಾವುದೇ ಪ್ರಮುಖ ಯೋಜನೆಗಳನ್ನು ನೀಡದೆ ಎಲ್ಲಾ ಸರ್ಕಾರಗಳು ಅನ್ಯಾಯ ಮಾಡಿವೆ. ಈ ಕಾರಣಕ್ಕೆ ಕೊಡಗಿನಲ್ಲಿ ಪ್ರತ್ಯೇಕ ರಾಜ್ಯದ ಕೂಗು ಎದ್ದಿತ್ತು. ಈಗ ಅದೆಲ್ಲವನ್ನು ಬಿಟ್ಟು, ಕಾರ್ಯಾರಂಭ ಮಾಡಿರುವ, ಕೊಡಗು ವಿವಿಯನ್ನು ಉಳಿಸಿಕೊಡಿ ಎಂದು ಕೇಳಲು ವಿಧಾನ ಸೌಧದವರೆಗೂ ಬರಬೇಕಾದ ಪರಿಸ್ಥತಿ ಬಂದಿದೆ ಎಂದು ವಿಷಾಧಿಸಿದ, ಸಚಿವ ದಿನೇಶ್ ಗುಂಡುರಾವ್ ಅವರು, ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಕೊಡಗು ವಿವಿ ವಿಚಾರ ಚರ್ಚೆಗೆ ಬಂದರೆ ನಾನು ಕೊಡಗಿನ ಪರವಾಗಿ ದ್ವನಿಯಾಗುತ್ತೇನೆ ಎಂದು ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತವಾರಿ ಸಚಿವ ಎನ್.ಎಸ್. ಬೋಸ್‌ರಾಜ್, ಮಡಿಕೇರಿ ಶಾಸಕ ಡಾ. ಮಂಥರ್ ಗೌಡ, ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಸೇರಿದಂತೆ, ಕೊಡಗು ವಿವಿ ಹಿರಕ್ಷಣಾ ಸಮಿತಿಯ ನೂರಾರು ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.

