Site icon nadubadenews.com

ರಾಜ್ಯದ ಎಲ್ಲಾ ಜನತೆಯ ನಿರೀಕ್ಷೆಗೆ ಪೂರಕ ಬಡ್ಜೆಟ್ : ಸಂಕೇತ್ ಪೂವಯ್ಯ

ರಾಜ್ಯದ ಎಲ್ಲಾ ಜನತೆಯ ನಿರೀಕ್ಷೆಗೆ ಪೂರಕ ಬಡ್ಜೆಟ್ : ಸಂಕೇತ್ ಪೂವಯ್ಯ
Spread the love
ರಾಜ್ಯದ ಎಲ್ಲಾ ಜನತೆಯ ನಿರೀಕ್ಷೆಗೆ ಪೂರಕ ಬಡ್ಜೆಟ್ : ಸಂಕೇತ್ ಪೂವಯ್ಯ

ವಿರಾಜಪೇಟೆ,ಮಾ.07: ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರು ಇಂದು ಮಂಡಿಸಿದ ದಾಖಲೆಯ 16ನೇ ಬಜೆಟ್, ರಾಜ್ಯದ ಎಲ್ಲಾ ಜನತೆಯ ನಿರೀಕ್ಷೆಯನ್ನು ಮತ್ತಷ್ಟು ಪುಷ್ಟಿಕರಿಸುವುದರೊಂದಿಗೆ ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ, ರೈತ ಕೇಂದ್ರೀಕೃತ, ಗ್ರಾಮೀಣಾಭಿವೃದ್ಧಿ, ನಾಗರಾಭಿವೃದ್ಧಿ ಹಾಗೂ ಮಾನವ-ಪ್ರಾಣಿ ಸಂಘರ್ಷ ನಿವಾರಣೆಗೆ ವಿಶೇಷ ಒತ್ತು ನೀಡಿರುವುದು ಮಾನ್ಯ ಮುಖ್ಯಮಂತ್ರಿಗಳ ಸಾಮಾಜಿಕ ಬದ್ಧತೆ, ಆರ್ಥಿಕ ಕ್ಷೇತ್ರದಲ್ಲಿನ ವಿಶೇಷ ಅನುಭವ ಹಾಗೂ ಆಡಳಿತದಲ್ಲಿನ ಪ್ರಬುದ್ಧತೆಗೆ ಹಿಡಿದ ಕೈಗನ್ನಡಿ ಎಂದು ಕಾಂಗ್ರೆಸ್‌ ರಾಜ್ಯ ವಕ್ತಾರ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರೂ ಆಗಿರುವ ಮೇರಿಯಂಡ ಸಂಕೇತ್‌ ಪೂವಯ್ಯ ಹರ್ಷಿಸಿದ್ದಾರೆ.

   ರಾಜ್ಯದ ಕಟ್ಟ ಕಡೆಯ ಅಶಕ್ತ ಹಾಗೂ ಶೋಷಿತ ವ್ಯಕ್ತಿಯನ್ನು ಸಶಕ್ತ ಗೊಳಿಸುವ ದೂರದೃಷ್ಟಿ ಹೊಂದಿರುವ ಈ ಬಜೆಟ್, ರಾಜ್ಯ ಸರಕಾರದ ಮಹತ್ವಕಾಂಕ್ಷೆಯ ಪಂಚ ಗ್ಯಾರೆಂಟಿ ಯೋಜನೆಗಳ ಅಭೂತಪೂರ್ವ ಯಶಸ್ಸಿಗೆ ಹಿಡಿದ ಕೈಗನ್ನಡಿಯಂತೆ ಭಾಸವಾಗುತ್ತದೆ.

   ಕೊಡಗಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಗೆ ಅಧಿಕ ಅನುದಾನ ಒದಗಿಸುವುದರೊಂದಿಗೆ, ಕೊಡಗಿನ ಜಲ್ವಂತ ಸಮಸ್ಯೆಗಳಲ್ಲಿ ಒಂದಾಗಿರುವ ಮಾನವ-ಪ್ರಾಣಿ ಸಂಘರ್ಷದ ನಿವಾರಣೆಗೆ ಕೂಡ ವಿಶೇಷ ಗಮನಹರಿಸಲಾಗಿದೆ.

   ಕಾಡಾನೆಗಳ ಉಪಟಳದಿಂದ ಮುಕ್ತಿ ಹೊಂದಲು ರೈಲ್ವೆ ಬ್ಯಾರಿಕೆಡ್ ಅಳವಡಿಕೆ, ಆನೆ ಕಂದಕ ಅಥವಾ ಸೋಲಾರ್ ತಂತಿ ನಿರ್ಮಾಣಕ್ಕೆ ಬಜೆಟ್ ನಲ್ಲಿ ವಿಶೇಷ ಅನುದಾನ ಒದಗಿಸಿರುವುದು ಮಾತ್ರವಲ್ಲದೆ, ಭದ್ರಾ ಅರಣ್ಯ ಭಾಗದಲ್ಲಿ ಆನೆಗಳ ಪುನರ್ವಸತಿ ಕೇಂದ್ರೀಕೃತ  ಸಾಫ್ಟ್ ರಿಲೀಸ್ ಏರಿಯಾಗೆ ಹಣ ಮೀಸಲು ಇರಿಸಲಾಗಿದೆ. ಅಲ್ಲದೇ, ಆನೆ ತುಳಿತ ಅಥವಾ ಇತರ ಪ್ರಾಣಿ ದಾಳಿಗಳಿಂದ ಮೃತಪಟ್ಟವರಿಗೆ  ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು ₹ 15 ಲಕ್ಷದಿಂದ ₹ 20 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಕೊಡಗು ಜಿಲ್ಲೆಗೆ ಈ ವಿಶೇಷ ಪ್ರಾತಿನಿಧ್ಯ ಸಿಗಲು ಹಗಲಿರುಳು ಶ್ರಮಿಸಿ, ಸರಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರಾದ ಹಾಗೂ ಶಾಸಕ ಎ.ಎಸ್ ಪೊನ್ನಣ್ಣರವರಿಗೆ ಅಭಿನಂದನೆ ಸಲ್ಲಿಸಲೇಬೇಕು ಎಂದು  ಸಂಕೇತ್ ಪೂವಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

Exit mobile version