https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ರಾಜಕೀಯ ಏರಿಳಿತದ ಲೆಕ್ಕಚಾರದತ್ತ ಕೊಡಗು ವಿವಿ ಸಂಚಲನ, ಹರಣವಾಗದಿರುವುದೇ ನಮ್ಮ ಸ್ವಾಭಿಮಾನ…!!!

ರಾಜಕೀಯ ಏರಿಳಿತದ ಲೆಕ್ಕಚಾರದತ್ತ ಕೊಡಗು ವಿವಿ ಸಂಚಲನ, ಹರಣವಾಗದಿರುವುದೇ ನಮ್ಮ ಸ್ವಾಭಿಮಾನ…!!!

News, Informatin , Enteetinement and Advertisement
28/03/202528/03/2025nadubadenews@gmail.comLeave a Comment on ರಾಜಕೀಯ ಏರಿಳಿತದ ಲೆಕ್ಕಚಾರದತ್ತ ಕೊಡಗು ವಿವಿ ಸಂಚಲನ, ಹರಣವಾಗದಿರುವುದೇ ನಮ್ಮ ಸ್ವಾಭಿಮಾನ…!!!
Spread the love
ರಾಜಕೀಯ ಏರಿಳಿತದ ಲೆಕ್ಕಚಾರದತ್ತ ಕೊಡಗು ವಿವಿ ಸಂಚಲನ, ಹರಣವಾಗದಿರುವುದೇ ನಮ್ಮ ಸ್ವಾಭಿಮಾನ…!!!

ನಡುಬಾಡೆ ಸಂಪಾದಕೀಯ. ಮಾ28: ಕಳೆದ ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ, ಕೊಡಗು ವಿಶ್ವ ವಿದ್ಯಾಲಯಕ್ಕೆ ಇಂದಿಗೆ ದ್ವಿವಾರ್ಷಿಕೋತ್ಸವ ಸಂಭ್ರಮ. ಆದರೆ ಈ ಕುಶಿಯನ್ನು ಆಶ್ವಾದಿಸುವ ಸ್ಥಿಮಿತದಲ್ಲಿ ಕೊಡಗಿನ ವಿದ್ಯಾಪ್ರೇಮಿಗಳು ಇಲ್ಲ. ಕಾರಣ ಮಾರಿಯಮ್ಮನ ಮುಂದೆ, ಕುರಿಯನ್ನು ಕಡಿಯಲು ಕತ್ತಿ ಇಟ್ಟು ಘಳಿಗೆ ನೋಡುವಂತೆ, ಸರ್ಕರ ಕೊಡಗು ವಿವಿಯನ್ನು ಮುಚ್ಚಲು ಕಾಲಕ್ಕಾಗಿ ಕಾಯತ್ತಿದೆ. ಇದೊಂತರ ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಣ ಎನ್ನುವಂತೆ, ಸರ್ಕಾರ ಮತ್ತು ಕೆಲ ಹಿರಿಯರು ಎನಿಸಿಕೊಂಡ, ವಿವೇಚನೆ ಇಲ್ಲದೆ ಅಧಿಕಾರಿಗಳಿಗೆ ಪ್ರತಿಷ್ಟೆಯಾಗಿದ್ದರೆ, ಇತ್ತ ವಿದ್ಯಾರ್ಥಿಗಳು ಪೋಷಕರಿಗೆ ಗೊಂದಲದ ಸಂಕಷ್ವಾವಾಗಿ ಕಾಡುತ್ತಿದೆ.

  ಕೊಡಗನ್ನು ಸದಾ ಹೊಗಳಿ ಹೊನ್ನಶೂಲಕ್ಕೆ ಏರಿಸುವ ಸರ್ಕಾರ,  ಜನಪ್ರತಿನಿಧಿಗಳು, ಅಧಿಕಾರಿಗಳು, ಕೊಡಗಿನ, ಮೂಲಭೂತ ಅಥವಾ ಅಗತ್ಯ ಸೌಲಭ್ಯಗಳನ್ನು ಒದಗಸುವಲ್ಲಿ ಮಾತ್ರ  ಸದಾ ಮಲತಾಯಿ ಧೋರಣೆಯನ್ನೇ ಅನುಸರಿಸುತ್ತಾ ಬರಿತಿದ್ದು, ಇದು ಕೊಡಗು ವಿಶ್ವವಿದ್ಯಾನಿಲಯದ ವಿಚಾರದಲ್ಲೂ ಮರುಕಳಿಸುತ್ತಿದೆ.  ಸರ್ಕಾರ ತನ್ನ ನಿರ್ದಾರವನ್ನು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ದಿನಕ್ಕೊಂದು ಹೇಳಿಕೆಗಳನ್ನು ನೀಡುತಿದ್ದು, ಇದು ಕೊಡಗಿನ ಸ್ವಾಭಿಮಾನವನ್ನು ಅಣಕಿಸುವಂತೆ ಭಾಸಬಾಗುತ್ತಿದೆ. ಅಲ್ಲದೆ, ಮುಂದಿನ ರಾಜಕೀಯ ಬೆಳವಣಿಗೆಗಳೇ ಏರಿಳಿತವಾಗುವ ಲಕ್ಷಣಗಳು ಘೋಚರಿಸುತ್ತಿವೆ.

           ಹಲವು ವರ್ಷಗಳ ಪ್ರಯತ್ನದ ಫಲವಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಕೊಡಗು ವಿಶ್ವ ವಿದ್ಯಾನಿಲಯವು, ಅಂದಿನ ಶಾಸಕರಾಗಿದ್ದ ಅಪ್ಪಚ್ಚು ರಂಜನ್‌ ಅವರ ಕಾಳಜಿಯಿಂದ ಈ ಹಿಂದೆ ಇದ್ದ ಮಂಗಳೂರು ವಿವಿಯ ಸ್ನಾತಕೋತ್ತರ ಕೇಂದ್ರದಲ್ಲಿಯೇ  ಹೊಸ   ಕೊಡಗು ವಿವಿ ಕಾರ್ಯಾರಂಭವನ್ನೂ ಮಾಡಿ, ಹಲವು ಕೋರ್ಸ್‌ಗಳನ್ನು  ಪ್ರಾರಂಬಿಸಿ ಇನ್ನೇನು ಮೊದಲ ಘಟಿಕೋತ್ಸವ ನಡೆಸುವ ಹೊಸ್ತಿಲಿನಲ್ಲಿದೆ. ಆದರೆ ಈ ಎಲ್ಲಾ ಸಡಗರ ಸಂಭ್ರಮಕ್ಕೂ ಹಾಲಿ ಸರ್ಕಾರ ತರ್ಪಣ  ಬಿಡಲು  ಸಿದ್ದವಾದಂತೆ ಕಾಣುತಿದ್ದು, ಇದು ಮುಂದೆ ಕೊಡಗಿನ ರಾಜಕೀಯದ ಮೇಲೆ ನೇರ ಪರಿಣಾಮ ಬೀರುವುದಂತು ಸತ್ಯ.

           ಸಚಿವ ಸಂಪುಟ ಉಪ ಸಮಿತಿ ಕೊಡಗು ಸೇರಿದಂತೆ 09 ಹೊಸ ವಿವಿಗಳನ್ನು ಮುಚ್ಚುವಂತೆ ಸರ್ಕಾರಕ್ಕೆ ಸಿಫಾರಸು ಮಾಡಿದ್ದು ಇದರಲ್ಲಿ ಕೊಡಗು ವಿಶ್ವಾವಿದ್ಯಾನಿಲಯದ ಹೆಸರು ಉಲ್ಲೇಖಗೊಂಡ ನಂತರ ಕೊಡಗಿನ ಸ್ವಾಭಿಮಾನಿ ಜನ ಪಕ್ಷಾತೀತವಾಗಿ ಹೋರಾಟದ ಎಚ್ಚರಿಕೆಯನ್ನು ರವಾನಿಸಿ, ಸರಣಿ, ಸಭೆಗಳು, ಧರಣಿಗಳು, ಪಾದಯಾತ್ರೆಗಳು ನಡೆದವು, ಮುಂದುವರೆದು ಹಾಲಿ ಶಾಸಕರಾದ ಡಾ. ಮಂಥರ್‌ ಗೌಡರೇ ಖುದ್ದು ಆಸಕ್ತಿ ವಹಿಸಿ, ಮುಖ್ಯಂತ್ರಿ ಉಪ ಮುಖ್ಯ ಮಂತ್ರಿ ಆದಿಯಾಗಿ ಎಲ್ಲಾ ಪ್ರಮುಖ ಸಚಿವರನ್ನೂ ಭೇಟಿಯಾಗಿ, ವಿವಿಯನ್ನು ಮುಚ್ಚಬೇಡಿ, ನಾನು ಅಭಿವೃದ್ದಿ ಪಡಿಸಲು ಬೇಕಾದ ಸಂಪನ್ಮೂಲ ಕ್ರೋಡೀಕರಿಸುತ್ತೇನೆ ಎಂದರು, ಸಾಲದು ಎಂಬದಂತೆ ಅಧಿವೇಶನದಲ್ಲೂ ಇದೇ ಮಾತನ್ನು ಪುನರ್ ಉಚ್ಚರಿಸಿ ತಮ್ಮದೇ ಸರ್ಕಾರವನ್ನು ಅಂಗಲಾಚಿದರು. ಆದರೂ ಆಳುವ ಸರ್ಕಾರದ ಹಿತ್ಥಾಳೆ ಕಿವಿಗೆ ಅರಕು ಹೊಯ್ದಂತೆ, ಕೊಡಗಿಗೆ ಬಂದ ಉಪ ಮುಖ್ಯಮಂತ್ರಿಗಳು ಇಲ್ಲದ ಸಾಬೂಬು ಹೇಳಿ ವಿವಿ ಮುಚ್ಚೋದಿಲ್ಲ, ಬದಲಿಗೆ ವಿಲೀನ ಮಾಡುತ್ತೇವೆ ಎಂದು, ಅಳಿಯ ಅಲ್ಲ ಮಗಳ  ಗಂಡ ಎನ್ನುವಂತೆ ಹೇಳಿಕೆ  ನೀಡಿದ್ದು, ಮತ್ತೊಮ್ಮೆ ಕೊಡಗಿನಲ್ಲಿ ಹೋರಾಟದ ಕಿಚ್ಚಿಗೆ ಕಿಡಿ ಹತ್ತಿಸಿದಂತಾಗಿದೆ.

          ಸರಕಾರದ ಅಧಿಕಾರಿಗಳು ಸರ್ಕಾರ ಸೂಚಿಸಿದೆಡೆ ಹೋಗಿ ತಮ್ಮ ಕರ್ತವ್ಯ ನಿರ್ವಹಿಸುವುದು ಅವರ ಹೊಣೆಗಾರಿಕೆ. ಆದರೆ ಅಧಿಕಾರದ ಕೇಂದ್ರ ಬಿಂದುವಾಗಿರುವ ಉಪಮುಖ್ಯಮಂತ್ರಿಗಳೇ ಸ್ವತಃ ಅಧಿಕಾರಿಗಳು ಕೊಡಗು ವಿವಿಗೆ ಬರಲೊಪ್ಪುತಿಲ್ಲ ಎಂದು ಹೇಳುತ್ತಿರುವುದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರವನ್ನು ನಡೆಸುತ್ತಿರುವುದು ಸರ್ಕಾರವಾ ಇಲ್ಲಾ ಅಧಿಕಾರಿಗಳಾ ಎನ್ನುವ  ಪ್ರಶ್ನೆ  ಮೂಡುತ್ತಿರುವುದು ಸಹಜ.

          ಇನ್ನು ಕೊಡಗು ವಿವಿಯನ್ನು ಮುಚ್ಚಲು ಅಥವಾ ವಿಲೀನ ಮಾಡಲು  ಹೊರಟಿರುವ ಸರ್ಕಾರ ಜಿದ್ದಿಗೆ ಬಿದ್ದಂತೆ ಕಾಣುತಿದ್ದು, ಕೊಡಗಿನ ವಿದ್ಯಾಕ್ಷೇತ್ರಕ್ಕೆ ದ್ರೋಹ ಬಗೆಯುತ್ತಿರುವ, ಕೆಲ ವಿವಿ ಅಧಿಕಾರಿಗಳೇ ಮೂಲ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ ಆದರೂ, ಹಿಂದಿನ ಸರ್ಕಾರ ಚುನಾವಣಾ ಲಾಭಕ್ಕಾಗಿ, ಚುನಾವಣೆಯ ಸಮಯದಲ್ಲಿ ವಿವಿ ಘೋಷಣೆ ಮಾಡಿ, ಯಾವುದೇ ಅನುದಾನ ಮೀಸಲಿಟ್ಟಿಲ್ಲ ಹಾಗಾಗಿ ಈಗಿನ ಸರ್ಕಾರಕ್ಕೆ ಮುಚ್ಚುವುದು ಅನಿವಾರ್ಯ ಎಂಬ ವಾದವಿದೆ. ಈಗ ಬದಲಾಗಿದ್ದು ಅಧಿಕಾರ ಮತ್ತು ಆಡಳಿತ ಪಕ್ಷ ಮಾತ್ರ ಆದರೆ ಕಾರ್ಯಂಗ ಅದೇ ವ್ಯವಸ್ಥೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹಾಗಿದ್ದಾಗ ಈ ಸರ್ಕಾರ ವಿವಿಗಳಿಗೆ ಬೇಕಾದ ಅನುಧಾನ ಮೀಸಲಿಟ್ಟು, ವಿದ್ಯಾರ್ಜನೆಗೆ ಅನುವು ಮಾಡಿ ಕೊಡಬಹುದಲ್ಲಾ ಎನ್ನುವುದು   ವಿದ್ಯಾ  ಪ್ರೇಮಿಗಳ ಪ್ರಶ್ನೆ.

           ಇನ್ನು ಬೆಂಗಳೂರು, ಮೈಸೂರು, ಮಂಗಳೂರು ಮಾದರಿಯಲ್ಲಿ ಕೊಡಗು ವಿವಿಗೆ ಮಾನ್ಯತೆ ಇಲ್ಲ ಎನ್ನುವುದು, ಅವುಗಳಿಗೆ ವಿಶ್ವ ಮಟ್ಟದಲ್ಲಿ ಮಾನ್ಯತೆ ಇದೆ, ಹೆಸರಿದೆ. ಹಾಗಾಗಿ, ಮಕ್ಕಳ ಹಿತದೃಷ್ಟಿಯಿಂದ ವಿಲೀನ ಮಾಡುವುದೇ ಉತ್ತಮ ಎಂಬುದು ಮಾನ್ಯ ಉಪ ಮುಕ್ಯಮಂತ್ರಿಗಳ ಬಾಲಿಶತನದ ಹೇಳಿಕೆ. ಯಾಕೆಂದರೆ ದಶಮಾನಗಳ ಹಿಂದೆ ಆ ಎಲ್ಲಾ ವಿವಿಗಳೂ ಹೀಗೇ ಪ್ರಾರಂಭವಾದವು. ಆಗಿನ ಆಡಳಿತ ಹೀಗೇ ಸಾಬೂಬು ಹೇಳಿ ಅವುಗಳಿಗೂ ಬೀಗ ಹಾಕಿದ್ದರೆ ಅವೂ ಇರುತ್ತಿರಲಿಲ್ಲ ಬೆಳೆಯುತ್ತಿರಲಿಲ್ಲ.

          ಬಹುತೇಕ ಹಳೇ ವಿವಿಗಳೂ ಆರ್ಥಿಕ ಹೊರೆಯಿಂದ ಕಂಗೆಟ್ಟು ಹಲವು ಕೋರ್ಸ್‌ಗಳಿಗೆ ಬೀಗ ಹಾಕಿವೆ ಆದರೂ ಕೊಡಗು ವಿವಿ ಎರಡು ವರ್ಷಗಳಲ್ಲೇ ತನ್ನ ಪರಿಮಿತಿಯಲ್ಲಿ ಉತ್ತಮ ಸೇವೆಯನ್ನೇ ಒದಗಿಸಿದೆ. ಯು.ಜಿ.ಸಿ ಮಾನ್ಯತೆಯನ್ನೂ ಪಡೆದುಕೊಂಡಿದೆ. ಎತ್ತಿಗೆ ಜ್ವರ  ಬಂದರೆ ಎಮ್ಮೆಗೆ ಬರೆ ಎನ್ನುವಂತೆ, ಯಾರದ್ದೋ ಪ್ರಮಾದಕ್ಕೆ ಕೊಡಗಿನಂತ ಗುಡ್ಡಗಾಡು ಪ್ರದೇಶಕ್ಕೆ ವಿದ್ಯಾದ್ರೋಹ ಮಾಡುವುದು ಎಷ್ಟು ಸರೀ ಎನ್ನುವುದು ಕೊಡಗಿನ ಒಕ್ಕೊರಲ ಪ್ರಶ್ನೆಯಾಗಿದೆ.

          ಒಟ್ಟಾರೆಯಾಗಿ ಅನುಷ್ಟಾನಕ್ಕೆ ಬಂದು ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿರುವ ಕೊಡಗು ವಿವಿಯನ್ನು, ಇಲ್ಲದ ನಾನಾ ಕಾರಣಗಳನ್ನು ಹೇಳಿ ಒಂದುವೇಳೆ ಮುಚ್ಚಿದರೆ, ಅದರ ನೇರ ಪರಿಣಾಮ, ಕೊಡಗಿನ ವಿದ್ಯಾಕ್ಷೇತ್ರದ ಮೇಲೆ ಎನ್ನುವುದಕ್ಕಿಂತ, ಮುಂದಿನ ರಾಜಕೀಯ ನಡೆಯ ಮೇಲೆ ಎನ್ನುವುದು ಅಷ್ಟೇ ಸ್ಪಷ್ಟ.

          ಕೊಡಗಿನ ರಾಜಕೀಯ, ಇತರ ಎಲ್ಲಾ ಪ್ರದೇಶಗಳಿಗಿಂತ ವಿಭಿನ್ನ. ಇಲ್ಲಿ ಜಾತಿಬಲ, ಹಣಬಲ, ತೋಳ್‌ಬಲಕ್ಕಿಂತ ಹೆಚ್ಚಾಗಿ ಫಲಿತಾಂಶ ನೀಡಿದ್ದು, ಇಲ್ಲಿಯ ಮತದಾರರ ಸ್ವಾಭಿಮಾನದ ನಿರ್ಧಾರದ ಮೇಲೆ. ಒಂದೊಮ್ಮೆ ಕರ್ನಾಟಕವನ್ನ ಆಳಿದ್ದ, ಪಕ್ಷದ ನೆಲಗಟ್ಟಿನಲ್ಲೂ ಭಾರೀ ಪ್ರಭಾವಿ ಎನಿಸಿಕೊಂಡಿದ್ದ ಅಧಿಕಾರದಲ್ಲಿದ್ದ ಮುಖ್ಯಮಂತ್ರಿಗಳಿಗೇ ಮನೆಯ ದಾರಿ ತೋರಿಸಿದ ಇತಿಹಾಸವನ್ನೂ ನಾವು ಮರೆಯುವಂತಿಲ್ಲ.

          ಪ್ರಸ್ತುತ ಕೊಡಗು ವಿವಿಯನ್ನು, ಜಿಲ್ಲೆಯ ಜನ ತಮ್ಮ ಸ್ವಾಭಿಮಾನದ ಸಂಕೇತವಾಗಿ ಸ್ವೀಕರಿದ್ದು, ಪ್ರತಿಷ್ಟೆಯ ಜಿದ್ದಿಗೆ ಬೀಳುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಈ ಹೋರಾಟ ಪಕ್ಷಾತೀತವಾದ ಆಂದೋಲನವಾಗಿ ಪರಿವರ್ತನೆಯಾಗುವ ಲಕ್ಷಣ ಘೋಚರಿಸುತಿದ್ದು, ವಿಷೇಶ ಎಂದರೆ ವಿರೋಧ ಪಕ್ಷಕ್ಕಿಂತಲೂ ಆಡಳಿತ ಪಕ್ಷದಲ್ಲಿ ಗುರುತಿಸಿಕೊಂಡವರೇ, ಹೋರಾಟದ ಕಿಚ್ಚು ಹೊತ್ತಿಸುವ ಲಕ್ಷಣ ಕಾಣುತ್ತಿದೆ.

          ಸರ್ಕಾರ ಕೊಡಗಿನ ಭಾವನೆಯ ನಾಡೀಮಿಡಿತವನ್ನು ಅರಿತು, ಸ್ವಾಭಿಮಾನದ ಕಿರೀಟದಂತಿರುವ ಕೊಡಗು ವಿವಿಯನ್ನು ಜಿಲ್ಲೆಯಲ್ಲೇ ಉಳಿಸಿ, ಅದನ್ನು ಬೆಳೆಸಲು ಅನುದಾನ ನೀಡುತ್ತಾರೆಂಬ, ನಿರೀಕ್ಷೆಯಲ್ಲಿರುವ ಜನ, ಸಮರ ಘೋಷಣೆಯೋ, ವಿಜಯೋತ್ಸವವೋ ಎನ್ನೋ ಜಿಜ್ಞಾಸೆಯಲ್ಲಿ ಕಾಯುತಿದ್ದಾರೆ. ಸರ್ಕಾರದ ಅಧಿಕೃತ ಪ್ರಕಟಣೆಯ ನಂತರವೇ ಪರಿಣಾಮದ ವ್ಯಾಪ್ತಿ ಅರಿಯಲಿದೆ.

          ಕೊಡಗಿನ ವಿದ್ಯಾಭಿಮಾನಿಗಳಿಗೆ ವಂಚಿಸದೆ, ವಿದ್ಯಾರ್ಥಿಗಳಲ್ಲಿ ಗೊಂದಲವನ್ನು ಮುಂದುವರೆಸದೇ, ಸೂಕ್ತ ಪ್ರಕಟಣೆ ಅಧಿಕೃತವಾಗಿ ಸರ್ಕಾರದಿಂದ ಹೊರಬರಲಿ, ಧಕ್ಷಿಣ ಕಾಶಿಯಾಗಿರುವ ಕೊಡಗು ವಿದ್ಯಾ ಕಾಶಿಯಾಗಿಯೂ ಪ್ರಸಿದ್ದಿಯಾಗಲಿ…

Post navigation

KSOU ಕನ್ನಡ ಎಂ.ಎ. ಬೊಟ್ಟಂಗಡ ಸುಮನ್‌ ಸೀತಮ್ಮ ಜಿಲ್ಲೆಕ್‌ ಆದ್ಯ, ವಿವಿಕ್‌ ಏಳನೇ…
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌

Related Posts

ಸೂರ್ಲಬ್ಬಿ ಶ್ರೀ ಸುಬ್ರಯ್ಯ, ವನಮೂರ್ತಿರ ಕಾಲತ ನಮ್ಮೆ

ಸೂರ್ಲಬ್ಬಿ ಶ್ರೀ ಸುಬ್ರಯ್ಯ, ವನಮೂರ್ತಿರ ಕಾಲತ ನಮ್ಮೆ

10/02/202510/02/2025nadubadenews@gmail.com

ನಡುಬಾಡೆ ನ್ಯೂಸ್‌- 28.8.25

28/08/202528/08/2025nadubadenews@gmail.com
ಕೊಡವ ಪ್ರಾಧಿಕಾರ ಸಮರ್ಪಕ ಯೋಜನೆಯೊಂದಿಗೆ ಶೀಘ್ರ ಅನುಷ್ಠಾನಕ್ಕೆ : ಅಜ್ಜಿಕುಟ್ಟಿರ ಪೊನ್ನಣ್ಣ

ಕೊಡವ ಪ್ರಾಧಿಕಾರ ಸಮರ್ಪಕ ಯೋಜನೆಯೊಂದಿಗೆ ಶೀಘ್ರ ಅನುಷ್ಠಾನಕ್ಕೆ : ಅಜ್ಜಿಕುಟ್ಟಿರ ಪೊನ್ನಣ್ಣ

06/03/202606/03/2026nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version