ವಿರಾಜಪೇಟೆ, ಡಿ.11: ವಿವಿಧ ಸಂಘಟನೆಗಳು ಕರೆದಿರುವ ನಾಳೆಗೆ ಕರೆದಿರುವ ಕೊಡಗು ಬಂದ್, ಇಂದು ಮದ್ಯಾಹ್ನದವರೆಗೂ ನೀರಸ ಮತ್ತು ಮಿಶ್ರ ಪ್ರತಿಕ್ರಿಯೆ ಕಂಡು ಬಂದಿತಾದರೂ, ಸಂಜೆಯಾಗುತ್ತಲೆ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ಹಲವು ಸಂಘ ಸಂಸ್ಥೆಗಳು, ಜಾತಿ, ಧರ್ಮ, ಪಕ್ಷಾತೀತವಾಗಿ ಬೆಂಬಲ ಘೋಷಿಸುತಿದ್ದು, ನಾಳಿನ ಬಂದ್ ಬಹುಪಾಲು ಯಶಸ್ವಿಯತ್ತ ಸಾಗುತ್ತಿದೆ.
ದೇಶದ ಮಹಾನ್ ನಾಯಕರ ಗೌರವದ ಪ್ರತೀಕವಾಗಿ ನಡೆಯುವ ಈ ಬಂದ್ ಮುಂದಿನ ದಿನಗಳಲ್ಲಿ ಸಮಾಜಘಾತುಕ ಶಕ್ತಿಗಳಿಗೆ ಪಾಠವಾಗಬೇಕು ಎಂಬ ಆಗ್ರಹಗಳು ಕೇಳಿಬರುತಿದ್ದು, ನ್ಯಾಯಾಂಗ ಸಮಾಜದ ಕಾಳಜಿ ಮತ್ತು ಆತಂಕವನ್ನು ಮನಗಂಡು ಆದಷ್ಟು ತುರ್ಥಾಗಿ ಪ್ರಕರಣದ ವಿಚಾರಣೆ ಮುಗಿಸಿ, ಆರೋಪಿಗೆ ಗರಿಷ್ಟ ಪ್ರಮಾಣದ ಶಿಕ್ಷೆ ವಿಧಿಸುವಂತಾಗಬೇಕು. ಮತ್ತು ಕೂಡಲೇ ಆತನನ್ನ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಆತನೇ ಹೇಳಿಕೊಂಡಿರುವಂತೆ ಸಮಾಜಘಾತುಕ ಮತ್ತು ನಕ್ಸಲ್ ಚಟುವಟಿಕೆಗೆ ಬೆಂಬಲ ಇರುವುದು ಸ್ಪಷ್ಟವಾಗಿದ್ದು ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಬೇಕು.
ಇಡೀ ವಕೀಲ ಸಮೂಹಕ್ಕೆ ಆತನ ವಕೀಲಿ ಪರವಾನಗಿಯನ್ನು ಶಾಸ್ವತ ರದ್ದು ಪಡಿಸಲು ವಕೀಲರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಕೇಳಿಬರುತ್ತಿದೆ.
ಬಂದ್‌ಗೆ ಈಗಾಗಲೇ 50ಕ್ಕೂ ಹೆಚ್ಚು ಸಂಘಟನೆಗಳು, ತಮ್ಮ ಬೆಂಬಲವನ್ನು ಸೂಚಿಸುತಿದ್ದು, ಮತ್ತಷ್ಟು ಬೆಂಬಲ ದೊರೆಯುವ ಸಾಧ್ಯತೆ ಕಂಡುಬರುತ್ತಿದೆ.
ಒಟ್ಟಿನಲ್ಲಿ ಈ ಘಟನೆ ಕೊಡಗಿನಲ್ಲಿ ದ್ವೇಶ ಬಿತ್ತಿ ತಮ್ಮ ಸ್ವಾರ್ತ ಕಾಯ್ದುಕೊಳ್ಳುವ ಋಣ ದ್ರೋಹಿಗಳಿಗೆ ಒಂದು ಶಾಸ್ತಿ ಆಗುವುದರಲ್ಲಿ ಶಂಶಯವಿಲ್ಲ.