ವಿರಾಜಪೇಟೆ, ನ.12: ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಎ.ಎಸ್ ಪೊನ್ನಣ್ಣ, ಆಯ್ಕೆಯಾಗಿದ್ದಾರೆ.
ಇಂದು ನಡೆದ, ಅಧ್ಯಕ್ಷ/ಉಪಾಧ್ಯಕ್ಷರ ಚುನಾವಣೆಯಲ್ಲಿ, ಅಧ್ಯಕ್ಷರಾಗಿ ಎ.ಎಸ್ ಪೊನ್ನಣ್ಣ, ಉಪಾದ್ಯಕ್ಷರಾಗಿ ಉಪಾದ್ಯಕ್ಷರಾಗಿ ಪಿ.ಜಿ. ಪ್ರಭುದೇವ್ ಮತ್ತು ನಿರ್ದೇಷಕರಾಗಿ, ಕೋಲತಂಡ ಸುಬ್ರಮಣಿ ಚೇಂದ್ರಿಮಾಡ ಗಣೇಶ್ ನಂಜಪ್ಪ, ಚೇರಂಡ ನಂದಸುಬ್ಬಯ್ಯ ಕುಂದಳ್ಳಿ, ದಿನೇಶ್ ನೆಲ್ಲಿರ ಚಲನ್ ಕುಮಾರ್, ಅಪ್ಪಚಟ್ಟೋಳಂಡ ಮನುಮುತ್ತಪ್ಪ, ಐಗೂರು ಶಂಕರೇಗೌಡ, ಪ್ರತಾಪ್ ಶಿವಪ್ಪ, ಅಳಮೆಂಗಡ ವಿವೇಕ್, ರಾಜಶೇಖರ್ ಸೋಮವಾರಪೇಟೆ, ಎಂಎಸ್ ಮೊಹಮ್ಮದ್ ಅಲಿ, ದಳವಾಯಿ ಹೆಚ್. ಉಮೇಶ್, ಶ್ರೀಮತಿ ಸಿ.ಎಂ. ಕಾವೇರಮ್ಮ ಹಾಗೂ ಶ್ರೀಮತಿ ಬಿ. ಎಸ್ ಲೀಲಾಕುಮಾರಿ ಅವರು ಆಯ್ಕೆಯಾಗಿದ್ದಾರೆ.
ಸರ್ಕಾರದ ಪಾಲಾಗಲಿದ್ದ, ದೇಶದ ಪ್ರಥಮ ತ್ರಿಜಿಲ್ಲಾ ರೈತರ MCPCS ಸಹಕಾರ ಸಂಘದ, ಬಹುಕೋಟಿ ಆಸ್ತಿಯನ್ನ, ಶಾಸಕ ಎ.ಎಸ್. ಪೊನ್ನಣ್ಣ. ಸಂಘಕ್ಕೇ ಉಳಿಸಿ ಕೊಟ್ಟಿದ್ದರು.
MCPCS ಸಹಕಾರ ಸಂಘ, ಎಂದರೆ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ, ಇದು 1959ರಲ್ಲಿ ಕೊಡಗಿನವರೇ ಆದ, ಮನೆಯಪಂಡ ಬೆಳ್ಯಪ್ಪ ಅವರು ಸ್ಥಾಪಿಸಿದ, ಕನಸಿನ ಕೂಸು.
ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಯ ರೈತರು ಮತ್ತು, ಸೊಸೈಟಿಗಳನ್ನು ಸದಸ್ಯರಾಗಿ ಹೊಂದಿ, 1960ರಲ್ಲಿ ಮೈಸೂರಿನ KRS ರಸ್ತೆಯ, ಯಾದವಗಿರಿಯಲ್ಲಿ 10.22 ಎಕರೆ ಜಾಗವನ್ನು ಖರೀದಿಸಿ, ಮೂರೂ ಜಿಲ್ಲೆಗಳ ರೈತರ ಹಿತಕ್ಕಾಗಿ ದುಡಿಯುತ್ತಾ ಬಂದು, 90ರ ದಶಕದಲ್ಲಿ, ಕಾಫಿಯ ಮುಕ್ತ ಮಾರುಕಟ್ಟೆಗೆ ಬಂದ ನಂತರ ಮುಚ್ಚುವ ಸ್ಥಿತಿಯನ್ನು ತಲುಪಿತ್ತು.
ಈ ಸಂದರ್ಭದಲ್ಲಿ ಸರ್ಕಾರ 2015ರಲ್ಲಿ ಸಮಾಪನಾಧಿಕಾರಿಯನ್ನು ನೇಮಿಸಿ, ಸಂಘದ 1.89ಏಕರೆ ಜಾಗವನ್ನು ಮಾರಾಟ ಮಾಡಿ, ಎಲ್ಲಾ ಸಾಲವನ್ನು ತೀರಿಸಿತ್ತಾದರೂ, ಮತ್ತೆ ಅಕ್ರಮವಾಗಿ 5 ಏಕರೆ ಜಾಗವನ್ನು ಮಾರಾಟ ಮಾಡಲು ಟೆಂಡರ್ ಕರೆದಿತ್ತು.
ಈ ವಿಚಾರ ತಿಳಿದು, ಕೊಡಗಿನ ರೈತ ಹೋರಾಟಗಾರರಾದ ದಿ. ಮೂಕೊಂಡ ಬೋಸ್ ದೇವಯ್ಯ ಹಾಗೂ ಕೋಲತಂಡ ಸುಬ್ರಮಣಿ ಅವರ ನೇತೃತ್ವದಲ್ಲಿ, ಮೂರೂ ಜಿಲ್ಲೆಯ ಸಂಘದ ಸದಸ್ಯರನ್ನು ಸೇರಿಸಿ, ಸದಸ್ಯರ ಹಿತರಕ್ಷಣ ಸಮಿತಿಯನ್ನು ರಚಿಸಿ, 2015 ರಿಂದ ನಿರಂತರವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿ ಹೋರಾಡುತ್ತ ಬಂದರು, ಪರಿಹಾರ ಸಿಕ್ಕಿರಲಿಲ್ಲ.
2022ರಲ್ಲಿ ಹೈಕೋರ್ಟಿನ ಹಿರಿಯ ವಕೀಲರಾಗಿದ್ದ ಮಾನ್ಯ ಎ.ಎಸ್. ಪೊನ್ನಣ್ಣ ಅವರಿಗೆ ಪ್ರಕರಣದ ವಕಾಲತ್ತು ನೀಡಲಾಯಿತು. ರೈತರ ಹಿತರಕ್ಷಣೆಗೆ ಸ್ಥಾಪಿತವಾದ ಸಂಘದ ಉಳಿವಿಗಾಗಿ ಪೊನ್ನಣ್ಣ ಅವರು, ಸಂಪೂರ್ಣ ಉಚಿತವಾಗಿ, ನಿರಂತರ 2022 ರಿಂದ ಕಾನೂನು ಹೋರಾಟ ಮಾಡಿ, ಸಂಘಕ್ಕೆ ಜಯ ಧಕ್ಕಿಸಿ ಕೊಟ್ಟರು. ಆ ನಂತರ ಆಂದಿನ ಸರ್ಕಾರ, ಸಂಬಂಧಿಸಿದ ಅಧಿಕಾರವನ್ನು ಸದಸ್ಯರಿಗೆ ನೀಡಲು, ಮೀನಾ ಮೇಷ ಎಣಿಸಿತ್ತು.
2023ರಲ್ಲಿ ಮಾನ್ಯ ಎ.ಎಸ್ ಪೊನ್ನಣ್ಣ ಅವರು ಶಾಸಕರಾಗಿ ಆಯ್ಕೆಯಾದ ನಂತರ, ಸರ್ಕಾರದೊಂದಿಗೆ ವ್ಯವಹರಿಸಿ ಸಂಘದ ಸಂಪೂರ್ಣ ಆಸ್ತಿ ಮತ್ತು ಅಧಿಕಾರವನ್ನು ಸಂಘದ ಸದಸ್ಯರಿಗೆ ನೀಡಲು ಪ್ರಮುಖ ಕಾರಣೀಭೂತರಾದರು.
ಹೀಗೆ ಶಾಸಕ ಪೊನ್ನಣ ಅವರ ಮುತುವರ್ಜಿ ಮತ್ತು ನಿಸ್ವಾರ್ಥ ಸೇವೆಯಿಂದ ಹಿತರಕ್ಷಣಾ ಸಮಿತಿಯ ಹೋರಾಟದ ಫಲವಾಗಿ, ದಕ್ಕಿದ MCPCS ಸಹಕಾರ ಸಂಘಕ್ಕೆ ಇಂದು ಪದಾಧಿಕಾರಿಗಳ ಆಯ್ಕೆ ನಡೆದಿದೆ. ಹಿರಿಯರ ಪರಿಕಲ್ಪನೆ ಶ್ರಮದಲ್ಲಿ, ಪ್ರಾರಂಭವಾದ ಸಂಘವು, ಇಂದು ಹಿತರಕ್ಷಣ ಸಮಿತಿ ಮತ್ತು ಶಾಸಕ ಎ.ಎಸ್. ಪೊನ್ನಣ್ಣ ಅವರ ನಿಸ್ವಾರ್ಥತೆಯಿಂದ ಉಳಿದಿದೆ.
ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮತನಾಡಿದ ಪೊನ್ನಣ್ಣ ರವರು, ಮೈಸೂರು ಕಾಫಿ ಸಂಸ್ಕರಣ ಕೇಂದ್ರ ಪುನಶ್ಚೇತನ ಗೊಳಿಸಲು ನಾನು ಶ್ರಮಿಸುತ್ತೇನೆ. ನಿರ್ದೇಶಕರು ಮತ್ತು ಆಡಳಿತ ಮಂಡಳಿಯ ಸದಸ್ಯರ ಬೆಂಬಲ ಸದಾ ಇರಲಿ ಎಂದು ಕೋರಿದರು. ಸಭೆಯಲ್ಲಿ ಜಂಟಿ ನಿರ್ಭಂದಕ ಪ್ರಸಾದ್ ರೆಡ್ಡಿ, ಅಡಳಿತಾಧಿಕಾರಿ ರಘು ಮತ್ತು ಚುನಾವಣಾ ಅಧಿಕಾರಿ ರವಿಶಂಕರ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.