Site icon nadubadenews.com

ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಮದೆ ಗ್ರಾಮಸ್ಥರಿಂದ ಶಾಸಕರ ಭೇಟಿ…

ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಮದೆ ಗ್ರಾಮಸ್ಥರಿಂದ ಶಾಸಕರ ಭೇಟಿ…
Spread the love
ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಮದೆ ಗ್ರಾಮಸ್ಥರಿಂದ ಶಾಸಕರ ಭೇಟಿ…

ವಿರಾಜಪೇಟೆ ಜೂ.09 (Nadubade News): ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮದೆ ಗ್ರಾಮದ, ಅಮ್ಮೆಂಗೇರಿ ಸುಮಾರು 30ಕ್ಕೂ ಅಧಿಕ ನಿವಾಸಿಗಳ ನಿಯೋಗವು,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಗೂ ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್ ರವರ ನೇತೃತ್ವದಲ್ಲಿ, ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರನ್ನು ಅವರ ವಿರಾಜಪೇಟೆ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಹಲವು ಬೇಡಿಕೆಗಳ ಮನವಿ ಪತ್ರವನ್ನು ನೀಡಿದರು.    ಪ್ರಮುಖವಾಗಿ ತಮ್ಮ ಭಾಗಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹಾಗೂ ಅಂಗನವಾಡಿ ಕೇಂದ್ರವನ್ನು ತೆರೆಯುವ ಸಲುವಾಗಿ ಮಾನ್ಯ ಶಾಸಕರಲ್ಲಿ ಮನವಿ ಸಲ್ಲಿಸಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಮಾನ್ಯ ಶಾಸಕರು, ಆದಷ್ಟು ಶೀಘ್ರ ಎಲ್ಲಾ ಮನವಿಗಳನ್ನು ಪರಿಗಣಿಸಿ ಅಗತ್ಯಕ್ಕನುಸಾರ ಸ್ಪಂದಿಸುವುದಾಗಿ ಭರವಸೆ ನೀಡಿದರು.

Exit mobile version